ಮಹಿಳೆಯರು ಮನೆಯಿಂದ ಹೊರಗೆ ಹೋಗಿ ದುಡಿಯುವುದೆಂದರೆ ಸರ್ಕಾರಿ ಕೆಲಸ ಮಾತ್ರ ಅಂದುಕೊಂಡಿದ್ದ ಕಾಲವಿತ್ತು. ಕ್ರಮೇಣ ಮನೆಯಿಂದ ಹೊರಬರಲು ಆಗದ ಮಹಿಳೆಯರೂ ಮನೆಯಲ್ಲಿಯೇ ದಿನಬಳಕೆಯ ಹಪ್ಪಳ ಸಂಡಿಗೆ, ಉಪ್ಪಿನಕಾಯಿ, ಚಟ್ನಿಪುಡಿಯಿಂದ ಆರಂಭಿಸಿ ಉಡುಪು, ಆಭರಣ, ಅಲಂಕಾರಿಕ ವಸ್ತುಗಳನ್ನು ತಯಾರಿಸಿ ಮಾರಾಟ ಮಾಡುವುದನ್ನು ವೃತ್ತಿ ಮಾಡಿಕೊಂಡರು.

ಇವತ್ತಿಗೂ ಗ್ರಾಮೀಣ ಪ್ರದೇಶದ ಹೆಣ್ಣುಮಕ್ಕಳು ಕರಕುಶಲ ವಸ್ತುಗಳನ್ನು ತಯಾರಿಸುತ್ತರಾದರೂ ಅವುಗಳಿಗೆ ಮಾರುಕಟ್ಟೆ ನಿರ್ಮಿಸಿಕೊಳ್ಳುವುದಲ್ಲಿ ವಿಫಲರಾಗಿದ್ದಾರೆ. ಅದನ್ನೊಂದು ಹವ್ಯಾಸ ಎಂದೇ ನೋಡುವವರು ಹೆಚ್ಚು. ಹಾಗಾಗಿ ಕರಕುಶಲ ಕಲೆಗಳೆಲ್ಲ ಪುಡಿಗಾಸಿನ ಉದ್ಯಮವಾಗಿಯೇ ಉಳಿದುಕೊಂಡಿದೆ.

ನಗರದಲ್ಲಿ ಪರಿಸ್ಥಿತಿ ಸ್ವಲ್ಪ ಭಿನ್ನವಾಗಿದೆ. ನಗರದ ಶ್ರೀಮಂತ ಮತ್ತು ಶಿಕ್ಷಿತ ಮಹಿಳೆಯರು ಒಂದು ಹೆಜ್ಜೆ ಮುಂದೆ ಹೋಗಿ ಗೃಹಾಲಂಕಾರ, ವಸ್ತುಗಳು, ಆಭರಣ, ಉಡುಪುಗಳನ್ನು ಸಿದ್ಧಪಡಿಸಿ ತಮ್ಮದೇ ಮಾರುಕಟ್ಟೆಯನ್ನೂ ನಿರ್ಮಿಸಿಕೊಂಡಿದ್ದಾರೆ. ಮಹಿಳಾ ಉದ್ಯಮಿಗಳನ್ನು ಪ್ರೋತ್ಸಾಹಿಸಿ, ತರಬೇತಿ ನೀಡುವುದು, ದೇಶಾದ್ಯಂತ ವಸ್ತುಪ್ರದರ್ಶನಕ್ಕೆ ಅವಕಾಶವನ್ನೂ ನೀಡುವ ಮೂಲಕ ಮಾರುಕಟ್ಟೆ ವ್ಯವಸ್ಥೆ ಮಾಡುವ ಕೆಲಸವನ್ನು ಕೆಲ ಸಂಸ್ಥೆಗಳು ಮಾಡುತ್ತಿವೆ.

ತಳಮಟ್ಟದಿಂದ ಮಹಿಳಾ ಉದ್ಯಮಿಗಳನ್ನು ಹುಟ್ಟುಹಾಕುವಲ್ಲಿ ಅನೇಕ ವರ್ಷಗಳಿಂದ ‘ಅವೇಕ್’(awake)ಶ್ರಮಿಸುತ್ತಿದೆ. ಮಹಿಳೆಯರಿಗೆ ತರಬೇತಿ, ಬ್ಯಾಂಕ್ ಸಾಲ ಮತ್ತು ಮಾರುಕಟ್ಟೆಯನ್ನೂ ಒದಗಿಸುತ್ತಾ ಮಹಿಳಾ ಸಬಲೀಕರಣಕ್ಕೆ ದೊಡ್ಡ ಕೊಡುಗೆ ನೀಡಿದೆ. ಅವೇಕ್ ಮೂಲಕ ಅನೇಕ ಮಹಿಳೆಯರು ಸ್ವಾವಲಂಬಿಗಳಾಗಿದ್ದಾರೆ. ಆದರೆ ಅವರ ಮಾರುಕಟ್ಟೆ ಇನ್ನೂ ವಿಸ್ತರಿಸಿಲ್ಲ. ವಸ್ತು ಪ್ರದರ್ಶನಕ್ಕಷ್ಟೇ ಸೀಮಿತಗೊಂಡಿದೆ.

ಅವೇಕ್ಗಿಂತ ಒಂದು ಹೆಜ್ಜೆ ಮುಂದೆ ಹೋಗಿ ಈಗಾಗಲೇ ಉದ್ಯಮಿಗಳಾಗಿರುವವರನ್ನು ಗುರಿಯಾಗಿಟ್ಟುಕೊಂಡು ಕಾರ್ಯನಿರ್ವಹಿಸುವ ಸಂಸ್ಥೆ ‘ಕೋವೆ’(confederation of women enterprises). ದೇಸಿ ಮಹಿಳಾ ಉದ್ಯಮಿಗಳು ತಯಾರಿಸಿದ ಉತ್ಪನ್ನಗಳು ವಿದೇಶದಲ್ಲಿ ಮಾರುಕಟ್ಟೆ ಗಳಿಸುವ ಗುಣಮಟ್ಟದಲ್ಲಿವೆ. ಆದರೆ ವಿದೇಶದ ಮಾರುಕಟ್ಟೆ ಪಡೆಯುವುದು ಅಷ್ಟು ಸುಲಭದ ಮಾತಲ್ಲ.

ಅದಕ್ಕೆ ನಾನಾ ತಾಂತ್ರಿಕ ಅಡಚಣೆಗಳಿವೆ. ಇವೆಲ್ಲವನ್ನೂ ನಿವಾರಿಸಿ ವಿದೇಶಕ್ಕೆ ರಫ್ತು ಮಾಡಲು ಮಧ್ಯವರ್ತಿಯ ಅಗತ್ಯವಿದೆ. ಇಂತಹ ಸಮಸ್ಯೆಯನ್ನು ನಿವಾರಣೆ ಮಾಡಿ ಮಹಿಳಾ ಉದ್ಯಮಿಗಳನ್ನು ಬೆಳೆಸುವ ಮತ್ತು ವಿದೇಶದ ಮಾರುಕಟ್ಟೆಗೆ ಪರಿಚಯಿಸುವ ನಿಟ್ಟಿನಲ್ಲಿ ಕೋವೆ ಬೆಂಗಳೂರು ಚಾಪ್ಟರ್ ಕಾರ್ಯ ನಿರ್ವಹಿಸಲಿದೆ.

ಕೋವೆಯ ಬೆಂಗಳೂರು ಚಾಪ್ಟರ್ನ ಅಧ್ಯಕ್ಷೆ ರೂಪರಾಣಿ. ಇವರು ಈಗಾಗಲೇ ಕ್ಯಾಂಡಲ್ ಉದ್ಯಮ, ಪೀಠೋಪಕರಣಗಳ ಉದ್ಯಮದಲ್ಲಿ ಅನುಭವ ಪಡೆದವರು ಎಫ್ಕೆಸಿಸಿಯ ಮಹಿಳಾ ವಿಂಗ್ನ ಸದಸ್ಯೆ ಕೂಡಾ.

ಕೋವೆಯ ಕಾರ್ಯ ಚಟುವಟಿಕೆಗಳ ಬಗ್ಗೆ ಅವರು ‘ಕೋವೆ, ಮಹಿಳಾ ಉದ್ಯಮಿಗಳಿಗೆ ಫ್ಲಿಪ್ಕಾರ್ಟ್ ತರಹದ ಮಾರುಕಟ್ಟೆ ಒದಗಿಸಲಿದೆ. ಇದಕ್ಕಾಗಿ ಈಗಾಗಲೇ ಜರ್ಮನ್ ಕಂಪೆನಿಯೊಂದಿಗೆ ವ್ಯಾಪಾರ ಒಪ್ಪಂದ ಮಾಡಿಕೊಂಡಿದೆ. ಮಹಿಳಾ ಉದ್ಯಮಿಗಳು ತಯಾರಿಸಿದ ಸಿದ್ಧ ಉಡುಪುಗಳನ್ನು ಖರೀದಿಸಲು ರಿಲಯನ್ಸ್, ಬಿಗ್ ಬಜಾರ್ಗಳ ಜೊತೆ ವ್ಯಾವಹಾರಿಕ ಒಪ್ಪಂದ ಮಾತುಕತೆಯ ಹಂತದಲ್ಲಿದೆ. ಇನ್ನು ವೈನ್ ಉದ್ಯಮ ಪುರುಷರ ಉದ್ಯಮ ಎಂದೇ ಪರಿಗಣಿಸಿದೆ.

ಆದರೆ ಗ್ರಾಮೀಣ ಪ್ರದೇಶದಿಂದ ಹಿಡಿದು ನಗರದವರೆಗೂ ಮಹಿಳೆಯರು ತಮ್ಮ ಬಳಕೆಗೆ ಬೇಕಾಗುವ ವೈನ್ ತಯಾರಿಸುತ್ತಿದ್ದಾರೆ. ಅದಕ್ಕೂ ಮಾರುಕಟ್ಟೆ ಒದಗಿಸಬೇಕು ಎಂಬುದು ಕೋವೆಯ ಉದ್ದೇಶ. ‘ವುಮೆನ್ ಬಾರ್ ಟೆಂಡರ್’ ಸ್ಥಾಪನೆಯ ಮೂಲಕ ಮಹಿಳಾ ಉದ್ಯಮದ ವ್ಯಾಪ್ತಿ ವಿಸ್ತಾರವಾಗಲಿದೆ. ಚರ್ಮದ ಉತ್ಪನ್ನಗಳಾದ ಬ್ಯಾಗು, ಪರ್ಸ್, ಚಪ್ಪಲಿ ಹಾಗೂ ರೇಷ್ಮೆ ಉಡುಪುಗಳನ್ನೂ ನಗರದ ಮಹಿಳಾ ಉದ್ಯಮಿಗಳು ತಯಾರಿಸುತ್ತಿದ್ದಾರೆ. ಇಂತವರಿಗೆ ರಫ್ತು ಪರವಾನಿಗೆ ಒದಗಿಸುವುದು, ವ್ಯಾಟ್ಗೆ ಸಂಬಂಧಿಸಿದ ಸಮಸ್ಯೆಗಳನ್ನು ಬಗೆಹರಿಸುವುದು ಹಾಗೂ ರಫ್ತುಯೋಗ್ಯ ಉತ್ಪನ್ನಗಳ ತಯಾರಿಕೆಗೆ ತರಬೇತಿ ನೀಡುತ್ತದೆ.

ಇಷ್ಟೇ ಅಲ್ಲ ಬಾರ್ ಕೋಡಿಂಗ್ ರಫ್ತು ಮಾಡುವಾಗ ಬಹಳ ಮುಖ್ಯ. ಹಾಗಾಗಿ ಉದ್ಯಮಿಗಳಿಗೆ ಬಾರ್ಕೋಡಿಂಗ್ ಮಾಡುವ ಬಗ್ಗೆಯೂ ತಿಳುವಳಿಕೆ ನೀಡಲಾಗುತ್ತದೆ. ಆಹಾರ ಪದಾರ್ಥಗಳನ್ನು ತಯಾರಿಸುವವರಿಗೆ ವಸ್ತುಗಳು ಕೆಡದಂತೆ ಮತ್ತು ಹೈಜೆನಿಕ್ ಆಗಿ ತಯಾರಿಸುವುದು ಹೇಗೆ ಎಂದು ತರಬೇತಿ ನೀಡುವುದು ಕೂಡಾ ಕೋವೆ ಕಾರ್ಯಗಳಲ್ಲಿ ಒಂದು.

ಕೆನರಾಬ್ಯಾಂಕ್ ಮತ್ತು ವಿಜಯಾ ಬ್ಯಾಂಕ್ ಈಗಾಗಲೇ ಮಹಿಳಾ ಉದ್ಯಮಿಗಳಿಗೆ ಸಾಲ ನೀಡಲು ಮುಂದೆ ಬಂದಿವೆ. ಐಟಿ ಕಂಪೆನಿಯ ನಿವೃತ್ತ ಮಹಿಳೆಯರು, ವಿವಿಧ ಉನ್ನತ ಹುದ್ದೆಯಲ್ಲಿದ್ದು ನಿವೃತ್ತರಾದವರು, ಕೆಲವರು ಸ್ವಯಂ ನಿವೃತ್ತಿ ಪಡೆದವರೂ ವಿವಿಧ ಉದ್ಯಮಗಳಲ್ಲಿ ತೊಡಗಿಕೊಂಡಿದ್ದಾರೆ. ಅವರೆಲ್ಲ ಕೋವೆಯ ಸದಸ್ಯರಾಗಿದ್ದಾರೆ. ಸದ್ಯದಲ್ಲಿ ಕೋವೆಯ ಕಾರ್ಯಗಳಿಗೆ ಅಧಿಕೃತ ಚಾಲನೆ ಸಿಗಲಿದೆ.

ಕೋವೆಯ ಮಾರ್ಗದರ್ಶನ ಪಡೆಯಬಯಸುವ ಉದ್ಯಮಿಗಳು ಸದಸ್ಯರಾಗಬೇಕಿರುವುದು ಕಡ್ಡಾಯ. ಇನ್ನು ಕಾಲೇಜು ಹುಡುಗಿಯರನ್ನು ಉದ್ಯಮದ ಕಡೆಗೆ ಸೆಳೆಯಲು ಕಾಲೇಜುಗಳಲ್ಲಿಯೂ ಉದ್ಯಮಶೀಲತಾ ತರಬೇತಿ ಕಾರ್ಯಾಗಾರ ನಡೆಸುವ ಉದ್ದೇಶವಿದೆ’ ಎನ್ನುತ್ತಾ ಕೋವೆಯ ಕಾರ್ಯ ಯೋಜನೆಗಳನ್ನು ವಿವರಿಸುತ್ತಾರೆ ರೂಪಾರಾಣಿ.

ಇಡಿಪಿ ಕಾರ್ಯಕ್ರಮ ಮತ್ತು ಇನ್ನಿತರ ಮಹಿಳಾ ಸಬಲೀಕರಣ ಕಾರ್ಯಕ್ರಮಗಳಿಗಾಗಿ ಕೋವೆ ಈಗಾಗಲೇ ವಿಶ್ವೇಶ್ವರಯ್ಯ ಟೆಕ್ನಲಾಜಿಕಲ್ ಯುನಿವರ್ಸಿಟಿ ಜೊತೆ ಒಪ್ಪಂದ ಮಾಡಿಕೊಂಡಿದೆ. ವಿಟಿಯುನ ಎಲ್ಲ ಶಿಕ್ಷಣ ಸಂಸ್ಥೆಗಳಲ್ಲೂ ಜೊತೆಯಾಗಿ ತರಬೇತಿ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗುತ್ತದೆ.

ವಿಶ್ವ ಮಹಿಳಾ ದಿನಾಚರಣೆ ಪ್ರಯುಕ್ತ ಬೆಂಗಳೂರಿನ ಕಂಠೀರವ ಸ್ಟೇಡಿಯಂನಿಂದ ಫ್ರೀಡಂ ಪಾರ್ಕ್ವರೆಗೆ ವಾಕಥಾನ್ ಆಯೋಜಿಸಲಾಗಿದೆ. ಕೋವೆಯ ಈ ಕಾರ್ಯಕ್ರಮಕ್ಕೆ ಬಿ–ಪ್ಯಾಕ್, ನಾರಾಯಣ ಹೃದಯಾಲಯ, ಬಯೋಕಾನ್ ಕೈ ಜೋಡಿಸಿದೆ. ಮಾರ್ಚ್ 8ರಂದು ಕೋವೆಗೆ ಅಧಿಕೃತ ಚಾಲನೆ ಸಿಗಲಿದೆ.
(ಹೆಚ್ಚಿನ ಮಾಹಿತಿಗೆ: 97407 10359)

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.