ನನ್ನ ಹೆಸರು ತಮ್ಮಯ್ಯ. ಸುಮಾರು 15 ವರ್ಷದಿಂದ ಇಲ್ಲಿಯೇ ಬದುಕುತ್ತಿದ್ದೇನೆ. ಫೋಟೊ ತೆಗೆಯುವ ಉದ್ಯೋಗ ಬಿಟ್ಟರೆ ನನಗೆ ಬೇರೇನೂ ಗೊತ್ತಿಲ್ಲ. ದಿನಕ್ಕೆ ನೂರು ರೂಪಾಯಿ ಸಿಗೋದೆ ಕಷ್ಟವಾಗಿದೆ ಇಲ್ಲಿ. ಈ ಮಹಾನಗರಿಯಲ್ಲಿ ಬದುಕೋದು ಹೇಗೆ ? `ಮೆಟ್ರೋ~ ಬಂದು ನನ್ನ ಅನ್ನ ಕಸಿದು ಕೊಂಡಿತು.

ಈ ಕತೆ ಕೇಳಿ ಬಂದಿದ್ದು ವಿಧಾನಸೌಧದ ಎದುರಿಗೆ. ಪ್ರವಾಸಿಗರ ಮನವೊಲಿಸಿ, ಅವರ ಬಣ್ಣದ ಚಿತ್ರ ಸೆರೆ ಹಿಡಿಯುವವರ ಬದುಕಿನ ಚಿತ್ರಣ ಮಾತ್ರ ಇಲ್ಲಿ ಕಪ್ಪು ಕಪ್ಪಾಗಿದೆ. ಹೊಗೆ ಮುಸುಕಿದೆ.

ಮುಂಜಾನೆಯಿಂದ ಮುಸ್ಸಂಜೆವರೆಗೆ ವಿಧಾನಸೌಧ, ವಿಕಾಸಸೌಧ, ಹೈಕೋರ್ಟ್ ಮುಂದೆ ಕುಳಿತು ಬರುವ ಪ್ರವಾಸಿಗರಿಗೆ ತಾವು ತೆಗೆದ ಫೋಟೊ ತೋರಿಸಿ ಬದುಕಿನ ಬಂಡಿ ಸಾಗಿಸುವ ಈ ಮಂದಿಯ ಬದುಕಿಗೆ ಮೆಟ್ರೋ ಬಂಡಿ ಈಗ ಅಡ್ಡವಾಗಿದೆ. ಜೊತೆಗೆ ಮೊಬೈಲ್ ಸಹ ಇವರ ಬದುಕಿಗೆ ಕಲ್ಲು ಹಾಕಿದೆ ಎಂದರೆ ತಪ್ಪಾಗಲಾರದು.

ಇದು ಕೇವಲ ತಮ್ಮಯ್ಯನ ಕತೆ ಮಾತ್ರವಲ್ಲ. ವಿಧಾನಸೌಧಕ್ಕಿಂತ ಸ್ವಲ್ಪ ಮುಂದಕ್ಕೆ ಹೋದರೆ ಚಂದ್ರಶೇಖರ್ ಎಂಬ ಮತ್ತೊಬ್ಬ ಫೋಟೊಗ್ರಾಫರ್ ಎದುರಾಗುತ್ತಾರೆ. ಒಂದೇ ನಿಮಿಷದಲ್ಲಿ ಫೋಟೊ ತೆಗೆದು ಕೊಡ್ತೀವಿ. ಆದರೆ ಯಾರಿಗೂ ಈಗ ವಿಧಾನಸೌಧದ ಫೋಟೊ ಬೇಡವಾಗಿದೆ. ಕಾರಣ ಇಷ್ಟೇ ಮೊದಲಿನ ಹಾಗೆ ಈಗ ಫ್ರೇಂನಲ್ಲಿ ವಿಧಾನಸೌಧವನ್ನು ಹಿಡಿದಿಡುವುದು ಕಷ್ಟ. ವಿಧಾನಸೌಧದ ಎದುರಿನ ಭಾಗವಂತೂ ಸಿಗುವುದೇ ಇಲ್ಲ. ಇನ್ನು ಅಕ್ಕ-ಪಕ್ಕ ನಿಲ್ಲಿಸುವ ಎಂದರೂ ಸುತ್ತಲಿನ ಜಾಲರಿ ಅಡ್ಡ ಬರುತ್ತದೆ.

ಹಾಗೂ ಹೀಗೂ ಮಾಡಿ ಪ್ರವಾಸಿಗರನ್ನು ಒಪ್ಪಿಸಿ ಚಿತ್ರ ತೆಗೆಯುತ್ತೇವೆ. ಆದರೆ ಚಿತ್ರ ತೆಗೆದ ಮೇಲೆ ಕ್ಯಾತೆ ತೆಗೆಯುತ್ತಾರೆ. ಇದು ಜಾತ್ರೆಯಲ್ಲಿ ಪರದೆಯ ಮುಂದೆ ನಿಂತು ತಗಿಸಿದಂತಿದೆ ಎಂದು. ವಿಧಾನಸೌಧದ ಭವ್ಯ ಚಿತ್ರಣವೇ ದೊರೆಯುತ್ತಿಲ್ಲ ಎಂಬುದು ಅವರ ಅಳಲು.

ಅದಷ್ಟೆ ಅಲ್ಲ, ಈಗ ಚಿತ್ರ ತೆಗೆಯುವುದು ಎಂದರೆ ಮೊದಲಿನ ಉತ್ಸಾಹ ಯಾರಲ್ಲಿಯೂ ಉಳಿದಿಲ್ಲ. ಎಲ್ಲರ ಬಳಿಯೂ ಡಿಜಿಟಲ್ ಕ್ಯಾಮೆರಾಗಳಿವೆ. ಪಡ್ಡೆ ಹುಡುಗರ ಕೈಗಳಲ್ಲಿಯೂ ಕ್ಯಾಮೆರಾ ಇರುವ ಮೊಬೈಲ್ ಫೋನುಗಳಿವೆ. ಇಲ್ಲಿ ವಿವಿಧ ಭಂಗಿಗಳಲ್ಲಿ ನಿಂತು, ಚಿತ್ರ ತೆಗೆಸಿ, ನಮ್ಮ ಮುಂದೆಯೇ ಸ್ಕ್ರೀನ್ ಸೇವರ್ ಮಾಡಿಕೊಳ್ಳುತ್ತಾರೆ. ನಮ್ಮ ಫೋಟೊಗಳು ಪ್ಯಾಂಟಿನ ಜೇಬಿನಲ್ಲಿಟ್ಟರೆ ಮುದುಡಿ ಹೋಗುತ್ತವೆ. ಅದು ಹಾಗಲ್ಲವಲ್ಲ.. ತಂತ್ರಜ್ಞಾನವೂ ನಮ್ಮ ಹೊಟ್ಟೆಗೇಟು ಹಾಕಿದೆ.

ಒಂದು ಕಾಲದಲ್ಲಿ ಚಿತ್ರ ತೆಗೆಸಿಕೊಳ್ಳಲು ಹುಡುಕಿಕೊಂಡು ಬರುತ್ತಿದ್ದರು. ನವದಂಪತಿಯನ್ನು ಛೇಡಿಸುತ್ತ, ಇನ್ನೂ ಸಮೀಪ, ಸಮೀಪ... ಎನ್ನುತ್ತ ಚಿತ್ರ ತೆಗೆಯುತ್ತಿದ್ದೆವು. ಅವರಲ್ಲಿ ಪ್ರೀತಿ ಬೆಳೀತಿತ್ತು. ನಮ್ಮಲ್ಲಿ ಜೀವನಪ್ರೀತಿ ಉಳೀತಿತ್ತು. ರಾಜರಂತೆ ಮೆರೆದೆವು. ಈಗ ನೆಲಕ್ಕೆ ಬಿದ್ದಿದ್ದೇವೆ. ಯಾರಿಗೂ ಬೇಡವಾಗಿದ್ದೇವೆ ಎಂದು ವೈರಾಗ್ಯದ ಮಾತನಾಡುತ್ತಾರೆ ಚಂದ್ರಶೇಖರ್.

ಕೆಲವೊಮ್ಮೆ ಈ ವೃತ್ತಿಯೇ ಸಾಕೆನಿಸುತ್ತದೆ. ತುತ್ತಿನ ಚೀಲಕ್ಕಾಗಿ ದುಡಿಯುವುದು ಅನಿವಾರ್ಯ. ಆದರೆ ದುಡಿದದ್ದೆಲ್ಲವೂ ಊಟಕ್ಕೆ ಸಾಕಾಗುವುದಿಲ್ಲ. ಇನ್ನು ನಮ್ಮ ಮಕ್ಕಳಿಗೂ ಶಿಕ್ಷಣ ಬೇಡವಾ...? ನಮಗಂತೂ ಇದೊಂದೇ ಕೆಲಸ ಗೊತ್ತು. ಇನ್ನು ಮಕ್ಕಳಿಗಾದರೂ ಓದಿಸುವ ಎಂದುಕೊಳ್ಳುತ್ತೇವೆ. ಆದರೆ...

ಮೊದಲೆಲ್ಲ 75 ಮಂದಿ ಇ್ದ್ದದೆವು. ಸಂಘಟಿತರಾಗಲಿಲ್ಲ. ಬಿಡಿಬಿಡಿಯಾಗಿಯೇ ದುಡಿಯುತ್ತಿದ್ದೆವು. ಈಗ 25ಕ್ಕೆ ಇಳಿದಿದ್ದೇವೆ. ಉಳಿದವರು, ಮಧ್ಯಮ ವಯಸ್ಸಿನವರು ಹೊಸ ಉದ್ಯೋಗ ಅರಸಿ ಹೋದರು. ಕೆಲವರು ಆಟೋ ಚಾಲಕರಾದರು. ಆದರೆ ನಮಗೆಲ್ಲ ಕ್ಲಿಕ್ಕಿಸುವುದು ಬಿಟ್ಟರೆ ಮತ್ತೇನು ಗೊತ್ತಿಲ್ಲ. ಗೊತ್ತಿದ್ದರೂ ಈ ವೃತ್ತಿ ನಿಷ್ಠೆ ಮತ್ತು ಪ್ರೀತಿ, ಬೇರೆಡೆಗೆ ಹೋಗದಂತೆ ತಡೆಯುತ್ತಿದೆ ಎನ್ನುತ್ತಾರೆ ಚಂದ್ರಶೇಖರ್.
ರಾಮಕೃಷ್ಣ ಹೆಗಡೆ ಕಾಲದಿಂದಲೂ ನಾನು ಇಲ್ಲಿ ಫೋಟೊ ತೆಗೆಯುತ್ತಿದ್ದೇನೆ.

ಆನಂತರ ವಿಧಾನಸೌಧದ ಮೆಟ್ಟಿಲು ಹತ್ತಿರುವ ಎಲ್ಲ ಮುಖ್ಯಮಂತ್ರಿಗಳ ಚಿತ್ರಗಳನ್ನೂ ತೆಗೆದಿದ್ದೇನೆ. ಅವರ ಮನೆ ಬಾಗಿಲಿಗೂ ಎಡತಾಕಿದ್ದೇನೆ. ಎಲ್ಲರೂ ಭರವಸೆ ಕೊಡುತ್ತಾರೆ. ಆದರೆ ಯಾರೂ ನಮಗೆ ಸಹಾಯಹಸ್ತ ಚಾಚಲಿಲ್ಲ. ಈಗಂತೂ ಕಾಲವೇ ಬದಲಾಗಿದೆ. ವಿಧಾನಸೌಧವನ್ನು ನಮ್ಮ ಕಣ್ತುಂಬಿಸಿಕೊಳ್ಳುವುದೂ ಕಷ್ಟ. ಇಲ್ಲಿಯ ದೂಳು, ಮಣ್ಣು, ಕಾಮಗಾರಿಯಲ್ಲಿ ನಮ್ಮ ಕೆಲಸವೂ ಮುಸುಕಾಗಿದೆ. ಕ್ಯಾಮೆರಾ ಕಣ್ಣು ಸಹ. ಪರ್ಯಾಯ ಬದುಕಿಗೊಂದು ದಾರಿ ಮಾಡಿಕೊಡಿ ಎಂದೂ ಕೇಳಿಕೊಂಡಿದ್ದೇವೆ. ನಿರೀಕ್ಷೆಯಲ್ಲಿಯೇ ಬದುಕು ಸಾಗುತ್ತಿದೆ.

ನಗರಕ್ಕೆ ಮೆಟ್ರೋದಿಂದಾಗಿ ಅನುಕೂಲಗಳಾಗಬಹುದು. ಈ ಕಾಮಗಾರಿ ಮುಗಿದ ಮೇಲೆ ಮತ್ತೆ ನಮ್ಮ ವ್ಯಾಪಾರ ಕುದುರಬಹುದು. ಆದರೆ ಅಲ್ಲೆವರೆಗೆ...?
ಉತ್ತರಿಸುವವರು ಯಾರು?

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.