ಭಾನುವಾರ, ಜೂನ್ 13, 2021
25 °C

ಕ್ರಿಕೆಟ್‌: ಆಫ್ಘನ್‌ಗೆ ಗೆಲುವು

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಚಿತ್ತಗಾಂಗ್‌ (ಪಿಟಿಐ): ಹಾಂಕಾಂಗ್‌ ನೀಡಿದ್ದ ಸವಾಲಿನ ಗುರಿಯನ್ನು ಸುಲಭ ವಾಗಿ ತಲುಪಿದ ಆಫ್ಘಾನಿಸ್ತಾನ ತಂಡ ಟ್ವೆಂಟಿ–20 ವಿಶ್ವಕಪ್‌ ಟೂರ್ನಿಯ ಅರ್ಹತಾ ಸುತ್ತಿನ ಪಂದ್ಯದಲ್ಲಿ ಏಳು ವಿಕೆಟ್‌ಗಳ ಗೆಲುವು ಸಾಧಿಸಿತು.ಮೊದಲು ಬ್ಯಾಟ್‌ ಮಾಡಿದ ಹಾಂಕಾಂಗ್‌್ ನಿಗದಿತ ಓವರ್‌ಗಳಲ್ಲಿ 153 ರನ್‌ ಕಲೆ ಹಾಕಿತ್ತು. ಮೊಹಮ್ಮದ್‌ ನಭಿ ಸಾರಥ್ಯದ ಆಫ್ಘನ್‌ ತಂಡ ಎರಡು ಓವರ್‌ಗಳು ಬಾಕಿ ಇರುವಂತೆಯೇ ಗುರಿ ಮುಟ್ಟಿತು.ಸಂಕ್ಷಿಪ್ತ ಸ್ಕೋರು: ಹಾಂಕಾಗ್‌ 20 ಓವರ್‌ಗಳಲ್ಲಿ 8 ವಿಕೆಟ್‌ಗೆ 153 (ವಾಕಸ್‌ ಬಾರ್ಕತ್‌ 32, ಜಾಮಿ ಅಟ್ಕಿನ್ಸನ್‌ 31, ಮಾರ್ಕ್‌ ಚೆಪ್‌ಮನ್‌ 38; ಶಾಪೂರ್‌ ಜಾಡ್ರನ್‌ 27ಕ್ಕೆ2, ಹಮ್ಜಾ ಹೊಟಕ್‌ 32ಕ್ಕೆ2, ಮೊಹಮ್ಮದ್‌ ನಭಿ 27ಕ್ಕೆ2); ಆಫ್ಘಾನಿಸ್ತಾನ 18 ಓವರ್‌ಗಳಲ್ಲಿ 3 ವಿಕೆಟ್‌ಗೆ 154 (ಮೊಹಮ್ಮದ್‌ ಶಾಹ್ಜದ್‌ 68, ಶಫಿಕುಲ್ಲಾ ಔಟಾಗದೆ 51; ತನ್ವೀರ್‌ ಅಫ್ಜಲ್‌ 19ಕ್ಕೆ1, ಹಸೀಬ್‌ ಅಮ್ಜದ್ 35ಕ್ಕೆ1).  ಫಲಿತಾಂಶ: ಆಫ್ಘಾನಿಸ್ತಾನಕ್ಕೆ 7 ವಿಕೆಟ್‌ ಜಯ.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.