ಶನಿವಾರ, ಮಾರ್ಚ್ 6, 2021
31 °C

ಕ್ರಿಕೆಟ್‌: ಕೌಶಲ್‌ ಸಿಲ್ವ ಶತಕ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಕ್ರಿಕೆಟ್‌: ಕೌಶಲ್‌ ಸಿಲ್ವ ಶತಕ

ಕೊಲಂಬೊ (ಎಎಫ್‌ಪಿ): ಕೌಶಲ್‌ ಸಿಲ್ವ (115; 269ಎ, 10ಬೌಂ) ಅವರ ಶತಕದ ಬಲದಿಂದ ಶ್ರೀಲಂಕಾ ತಂಡ ಆಸ್ಟ್ರೇಲಿಯಾ ವಿರುದ್ಧದ ಮೂರನೇ ಟೆಸ್ಟ್‌ ಪಂದ್ಯದಲ್ಲಿ ಬೃಹತ್‌ ಮುನ್ನಡೆಯತ್ತ ಸಾಗಿದೆ.



ಒಂದು ವಿಕೆಟ್‌ಗೆ 22ರನ್‌ ಗಳಿಂದ ಮಂಗಳ ವಾರ ಆಟ ಮುಂದುವರಿಸಿದ ಲಂಕಾ ತಂಡ ದ್ವಿತೀಯ ಇನಿಂಗ್ಸ್‌ನಲ್ಲಿ ದಿನ ದಾಟದ ಅಂತ್ಯಕ್ಕೆ  95 ಓವರ್‌ಗಳಲ್ಲಿ 8 ವಿಕೆಟ್‌ಗೆ 312ರನ್‌ ಗಳಿಸಿದೆ. ಇದ ರೊಂದಿಗೆ 288ರನ್‌ಗಳ ಮುನ್ನಡೆ ಪಡೆದಿದೆ. ಮಂಗಳವಾರ ಬ್ಯಾಟಿಂಗ್‌ ಆರಂಭಿಸಿದ ಲಂಕಾ ಬೇಗನೆ ವಿಕೆಟ್‌ ಕಳೆದುಕೊಂಡಿತ್ತು. ಆದರೆ ಸಿಲ್ವ  ಆಸರೆಯಾದರು.



ಸೋಮವಾರ ಕ್ಷೇತ್ರ ರಕ್ಷಣೆಯ ವೇಳೆ ಅವರ ಎಡಗೈನ ಕಿರು ಬೆರಳಿಗೆ ಗಾಯವಾಗಿತ್ತು. ಹೀಗಾಗಿ ಬೆರಳಿಗೆ ಆರು ಹೊಲಿಗೆ ಹಾಕಲಾಗಿತ್ತು. ಇದರ ನಡುವೆಯೂ ಅವರು ಛಲದಿಂದ ಆಡಿ ಟೆಸ್ಟ್‌ನಲ್ಲಿ ಮೂರನೇ ಶತಕ ಸಿಡಿಸಿದರು.



ಸಂಕ್ಷಿಪ್ತ ಸ್ಕೋರ್‌: ಶ್ರೀಲಂಕಾ: ಮೊದಲ ಇನಿಂಗ್ಸ್‌: 141.1 ಓವರ್‌ಗಳಲ್ಲಿ 355 ಮತ್ತು  95 ಓವರ್‌ಗಳಲ್ಲಿ  8 ವಿಕೆಟ್‌ಗೆ 312 (ಕೌಶಲ್‌ ಸಿಲ್ವ 115, ಕುಶಾಲ್‌ ಪೆರೇರಾ 24, ದಿನೇಶ್‌ ಚಾಂಡಿಮಲ್‌ 43, ಧನಂಜಯ ಡಿ ಸಿಲ್ವ ಬ್ಯಾಟಿಂಗ್‌ 44; ಮಿಷೆಲ್‌ ಸ್ಟಾರ್ಕ್‌  58ಕ್ಕೆ2, ನಥಾನ್‌ ಲಿಯೊನ್‌ 123ಕ್ಕೆ4, ಜಾನ್‌ ಹಾಲಂಡ್‌ 72ಕ್ಕೆ2). ಆಸ್ಟ್ರೇಲಿಯಾ: ಪ್ರಥಮ ಇನಿಂಗ್ಸ್‌: 125.1 ಓವರ್‌ಗಳಲ್ಲಿ 379.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.