ಸಿಲ್ಹೆಟ್, ಬಾಂಗ್ಲಾದೇಶ (ಪಿಟಿಐ): ಜಿಂಬಾಬ್ವೆ ತಂಡ ಟ್ವೆಂಟಿ-20 ವಿಶ್ವಕಪ್ ಕ್ರಿಕೆಟ್ ಟೂರ್ನಿಯ ಅರ್ಹತಾ ಹಂತದ ಕೊನೆಯ ಪಂದ್ಯದಲ್ಲಿ ಯುಎಇ ವಿರುದ್ಧ ಐದು ವಿಕೆಟ್ಗಳ ಜಯ ಸಾಧಿಸಿತು. ಆದರೂ ಬ್ರೆಂಡನ್ ಟೇಲರ್ ಬಳಗ ಮುಂದಿನ ಹಂತ ಪ್ರವೇಶಿಸಲು ವಿಫಲವಾಯಿತು.

ಸಿಲ್ಹೆಟ್ ಕ್ರೀಡಾಂಗಣದಲ್ಲಿ ಶುಕ್ರವಾರ ನಡೆದ ಪಂದ್ಯದಲ್ಲಿ ಮೊದಲು ಬ್ಯಾಟ್ ಮಾಡಿದ ಯುಎಇ 20 ಓವರ್ಗಳಲ್ಲಿ 9 ವಿಕೆಟ್ಗೆ 116 ರನ್ ಪೇರಿಸಿದರೆ, ಜಿಂಬಾಬ್ವೆ 13.4 ಓವರ್ಗಳಲ್ಲಿ 5 ವಿಕೆಟ್ಗೆ 118 ರನ್ ಗಳಿಸಿ ಜಯ ಗಳಿಸಿತು.

ಉತ್ತಮ ರನ್ರೇಟ್ ಮೂಲಕ ಮುಂದಿನ ಹಂತ ಪ್ರವೇಶಿಸುವುದು ಜಿಂಬಾಬ್ವೆ ತಂಡದ ಲೆಕ್ಕಾಚಾರವಾಗಿತ್ತು. ಆದರೆ ‘ಬಿ’ ಗುಂಪಿನಿಂದ ಹಾಲೆಂಡ್ ‘ಸೂಪರ್ 10’ರ ಹಂತಕ್ಕೆ ಲಗ್ಗೆಯಿಟ್ಟ ಕಾರಣ ಜಿಂಬಾಬ್ವೆ ನಿರಾಸೆ ಅನುಭವಿಸಿತು.

ಟಾಸ್ ಗೆದ್ದ ಜಿಂಬಾಬ್ವೆ ಎದುರಾಳಿ ತಂಡವನ್ನು ಬ್ಯಾಟಿಂಗ್ಗೆ ಕಳುಹಿಸಿತು. ಆಗಿಂದಾಗ್ಗೆ ವಿಕೆಟ್ಗಳನ್ನು ಕಳೆದುಕೊಂಡ ಕಾರಣ ಯುಎಇ ಸವಾಲಿನ ಮೊತ್ತ ಪೇರಿಸಲು ವಿಫಲವಾಯಿತು. ಖುರ್ರಮ್ ಖಾನ್ (26, 27 ಎಸೆತ) ಮತ್ತು ಸ್ವಪ್ನಿಲ್ ಪಟೇಲ್ (30, 26 ಎಸೆತ) ಮಾತ್ರ ಅಲ್ಪ ಹೊತ್ತು ಕ್ರೀಸ್ನಲ್ಲಿ ನಿಂತರು.

ಸಾಧಾರಣ ಗುರಿ ಬೆನ್ನಟ್ಟಿದ ಜಿಂಬಾಬ್ವೆ ಆರಂಭಿಕ ಆಘಾತ ಅನುಭವಿಸಿತು. 34 ರನ್ ಗಳಿಸುವಷ್ಟರಲ್ಲಿ ನಾಲ್ಕು ವಿಕೆಟ್ಗಳು ಬಿದ್ದವು. ಹ್ಯಾಮಿಲ್ಟನ್ ಮಸಕಜಾ, ಸಿಕಂದರ್ ರಾಜಾ, ಬ್ರೆಂಡನ್ ಟೇಲರ್ ಹಾಗೂ ಸೀನ್ ವಿಲಿಯಮ್ಸ್ ಅಲ್ಪ ಮೊತ್ತಕ್ಕೆ ವಿಕೆಟ್ ಒಪ್ಪಿಸಿದರು.

ಎರಡು ವಿಕೆಟ್ ಕಬಳಿಸಿದ ಮಂಜುಳಾ ಗುರುಗೆ ಈ ಹಂತದಲ್ಲಿ ಯುಎಇ ತಂಡಕ್ಕೆ ಗೆಲುವಿನ ಆಸೆ ಮೂಡಿಸಿದ್ದರು. ಸಂಕ್ಷಿಪ್ತ ಸ್ಕೋರ್: ಯುಎಇ: 20 ಓವರ್ಗಳಲ್ಲಿ 9 ವಿಕೆಟ್ಗೆ 116 (ಖುರ್ರಮ್ ಖಾನ್ 26, ಸ್ವಪ್ನಿಲ್ ಪಟೇಲ್ 30, ಕಮ್ರನ್ ಶಾಜಾದ್ 21, ಸೀನ್ ವಿಲಿಯಮ್ಸ್ 15ಕ್ಕೆ 3, ಟೆಂಡಾಯ್ ಚಟಾರ 21ಕ್ಕೆ 2, ಸಿಕಂದರ್ ರಾಜಾ 15ಕ್ಕೆ 2)

ಜಿಂಬಾಬ್ವೆ: 13.4 ಓವರ್ಗಳಲ್ಲಿ 5 ವಿಕೆಟ್ಗೆ 118 (ಬ್ರೆಂಡನ್ ಟೇಲರ್ 15, ಎಲ್ಟಾನ್ ಚಿಗುಂಬುರ ಔಟಾಗದೆ 53, ಟಿಮ್ಸೆನ್ ಮರುಮಾ ಔಟಾಗದೆ 22, ಮಂಜುಳಾ ಗುರುಗೆ 18ಕ್ಕೆ 2, ಅಹ್ಮದ್ ರೆಜಾ 29ಕ್ಕೆ 1)

ಫಲಿತಾಂಶ: ಜಿಂಬಾಬ್ವೆಗೆ 5 ವಿಕೆಟ್ ಗೆಲುವು ಹಾಗೂ ಎರಡು ಪಾಯಿಂಟ್
ಆದರೆ ಎಲ್ಟಾನ್ ಚಿಗುಂಬುರ (ಔಟಾಗದೆ 53, 21 ಎಸೆತ, 6 ಬೌಂ, 3 ಸಿಕ್ಸರ್) ಮತ್ತು ಟಿಮ್ಸೆನ್ ಮರುಮಾ (ಔಟಾಗದೆ 22) ತಂಡವನ್ನು ಗೆಲುವಿನತ್ತ ಮುನ್ನಡೆಸಿದರು.
ಪಂದ್ಯಶ್ರೇಷ್ಠ: ಎಲ್ಟಾನ್ ಚಿಗುಂಬುರ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.