ಮಂಗಳವಾರ, ಜೂನ್ 22, 2021
28 °C

ಕ್ರಿಕೆಟ್‌: ಸರಣಿ ಗೆದ್ದ ಆಸೀಸ್‌

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಕೇಪ್‌ಟೌನ್‌ (ಎಎಫ್‌ಪಿ): ಆಸ್ಟ್ರೇಲಿಯಾ ತಂಡ ದಕ್ಷಿಣ ಅಫ್ರಿಕಾ ವಿರುದ್ಧದ ಮೂರನೇ ಹಾಗೂ ಅಂತಿಮ ಕ್ರಿಕೆಟ್‌ ಟೆಸ್ಟ್‌ ಪಂದ್ಯದಲ್ಲಿ 245 ರನ್‌ಗಳ ಜಯ ಸಾಧಿಸಿತು.ಈ ಮೂಲಕ ಮೂಲಕ ಮೂರು ಪಂದ್ಯಗಳ ಸರಣಿಯನ್ನು 2-1 ರಲ್ಲಿ ತನ್ನದಾಗಿಸಿಕೊಂಡಿತು. ನ್ಯೂಲ್ಯಾಂಡ್ಸ್‌ ಕ್ರೀಡಾಂಗಣದಲ್ಲಿ ಕೊನೆಗೊಂಡ ಪಂದ್ಯದಲ್ಲಿ ಗೆಲುವಿಗೆ 511 ರನ್‌ಗಳ ಗುರಿ ಬೆನ್ನಟ್ಟಿದ ದ. ಆಫ್ರಿಕಾ ಅಂತಿಮ ದಿನವಾದ ಬುಧವಾರ 265 ರನ್‌ಗಳಿಗೆ ಅಲೌಟಾಯಿತು.ಗ್ರೇಮ್‌ ಸ್ಮಿತ್‌ ಬಳಗ 4 ವಿಕೆಟ್‌ಗೆ 71 ರನ್‌ಗಳಿಂದ ಬುಧವಾರ ಆಟ ಮುಂದುವರಿಸಿತ್ತು. ಎಬಿ ಡಿವಿಲಿಯರ್ಸ್‌ (43, 228 ಎಸೆತ), ಫಾಫ್‌ ಡು ಪ್ಲೆಸಿಸ್‌ (47, 109 ಎಸೆತ), ಜೆ.ಪಿ. ಡುಮಿನಿ (43, 99 ಎಸೆತ) ಮತ್ತು ವೆರ್ನಾನ್‌ ಫಿಲಾಂಡರ್‌ (ಅಜೇಯ 51, 105 ಎಸೆತ) ಅವರು ಛಲದ ಆಟ ತೋರಿ ಪಂದ್ಯವನ್ನು ಡ್ರಾ ಮಾಡಿಕೊಳ್ಳಲು ಪ್ರಯತ್ನಿಸಿದರು. ಆದರೆ ದಿನದಾಟ ಕೊನೆಗೊಳ್ಳಲು ಕೇವಲ ನಾಲ್ಕು ಓವರ್‌ಗಳಿರುವಾಗ ಆಸೀಸ್‌ ಜಯ ಸಾಧಿಸಿತು. ರ್‍್ಯಾನ್‌ ಹ್ಯಾರಿಸ್‌ (32ಕ್ಕೆ 4) ಮತ್ತು ಮಿಷೆಲ್‌ ಜಾನ್ಸನ್‌ (92ಕ್ಕೆ 3) ಆಸೀಸ್‌ ಗೆಲುವಿನಲ್ಲಿ ಪ್ರಮುಖ ಪಾತ್ರ ವಹಿಸಿದರು.ಸಂಕ್ಷಿಪ್ತ ಸ್ಕೋರು: ಆಸ್ಟ್ರೇಲಿಯಾ: ಮೊದಲ ಇನಿಂಗ್ಸ್‌ 494 ಡಿಕ್ಲೇರ್ಡ್‌ ಮತ್ತು ಎರಡನೇ ಇನಿಂಗ್ಸ್‌ 58 ಓವರ್‌ಗಳಲ್ಲಿ 5 ವಿಕೆಟ್‌ಗೆ 303 ಡಿಕ್ಲೇರ್ಡ್‌. ದಕ್ಷಿಣ ಆಫ್ರಿಕಾ:  ಮೊದಲ ಇನಿಂಗ್ಸ್‌ 82.5 ಓವರ್‌ಗಳಲ್ಲಿ  287 ಮತ್ತು ಎರಡನೇ ಇನಿಂಗ್ಸ್‌ 134.3 ಓವರ್‌ಗಳಲ್ಲಿ 265 (ಎಬಿ ಡಿವಿಲಿಯರ್ಸ್‌ 43, ಫಾಫ್‌ ಡು ಪ್ಲೆಸಿಸ್‌ 47, ಜೆ.ಪಿ. ಡುಮಿನಿ 43, ವೆರ್ನಾನ್‌ ಫಿಲಾಂಡರ್‌ ಔಟಾಗದೆ 51, ರ್‍ಯಾನ್‌ ಹ್ಯಾರಿಸ್‌ 32ಕ್ಕೆ 4, ಮಿಷೆಲ್‌ ಜಾನ್ಸನ್‌ 92ಕ್ಕೆ 3,  ಜೇಮ್ಸ್‌ ಪ್ಯಾಟಿನ್ಸನ್‌ 62ಕ್ಕೆ 2) ಫಲಿತಾಂಶ: ಆಸ್ಟ್ರೇಲಿಯಾಕ್ಕೆ 245 ರನ್‌ ಗೆಲುವು; ಮೂರು ಪಂದ್ಯಗಳ ಸರಣಿಯಲ್ಲಿ 2-1 ಜಯ

ಪಂದ್ಯ ಮತ್ತು ಸರಣಿ ಶ್ರೇಷ್ಠ: ಡೇವಿಡ್‌ ವಾರ್ನರ್‌

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.