ಶುಕ್ರವಾರ, ಮೇ 14, 2021
21 °C

ಕ್ರಿಕೆಟ್: ಆರ್‌ವಿಸಿಇ ಚಾಂಪಿಯನ್

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬೆಂಗಳೂರು: ಅಗ್ನೀವ್ ಘೋಷ್ (63) ತೋರಿದ ಉತ್ತಮ ಬ್ಯಾಟಿಂಗ್ ನೆರವಿನಿಂದ ಆರ್‌ವಿಸಿಇ ತಂಡದವರು ಇಲ್ಲಿ ನಡೆದ ಎಂಎಸ್‌ಆರ್‌ಐಟಿ ಆಶ್ರಯದ 14ನೇ ಎಂ.ಎಸ್. ರಾಮಯ್ಯ ಸ್ಮಾರಕ ಅಂತರ ಎಂಜಿನಿಯರಿಂಗ್ ಕಾಲೇಜು ಕ್ರಿಕೆಟ್ ಟೂರ್ನಿಯಲ್ಲಿ ಚಾಂಪಿಯನ್ ಆದರು.ಐಐಎಸ್‌ಸಿ ಮೈದಾನದಲ್ಲಿ ಶುಕ್ರವಾರ ನಡೆದ ಫೈನಲ್‌ನಲ್ಲಿ ಆರ್‌ವಿಸಿಇ 91 ರನ್‌ಗಳಿಂದ ರೇವಾ ಐಟಿಎಂ ವಿರುದ್ಧ ಜಯ ಸಾಧಿಸಿತು. ಮೊದಲು ಬ್ಯಾಟ್ ಮಾಡಿದ ಆರ್‌ವಿಸಿಇ ನಿಗದಿತ 45 ಓವರ್‌ಗಳಲ್ಲಿ 7 ವಿಕೆಟ್‌ಗೆ 243 ರನ್ ಪೇರಿಸಿತು. ರೇವಾ ತಂಡ 36.5 ಓವರ್‌ಗಳಲ್ಲಿ 152 ರನ್‌ಗಳಿಗೆ ಆಲೌಟಾಯಿತು.ಪ್ರಭಾವಿ ಬೌಲಿಂಗ್ ಪ್ರದರ್ಶನ ನೀಡಿದ ನವೀನ್ (38ಕ್ಕೆ 3) ಅವರೂ ಆರ್‌ವಿಸಿಇ ಗೆಲುವಿನಲ್ಲಿ ಪ್ರಮುಖ ಪಾತ್ರ ವಹಿಸಿದರು.ಸಂಕ್ಷಿಪ್ತ ಸ್ಕೋರ್: ಆರ್‌ವಿಸಿಇ: 45 ಓವರ್‌ಗಳಲ್ಲಿ 7 ವಿಕೆಟ್‌ಗೆ 243 (ಅಗ್ನೀವ್ ಘೋಷ್ 63, ರೂಪಿನ್ ಸುರಾನಾ 42, ಪೃಥ್ವಿರಾಜ್ ಪಾಟೀಲ್ 40, ನವೀನ್ ಶಂಕರ್ 37). ರೇವಾ ಐಟಿಎಂ: 36.5 ಓವರ್‌ಗಳಲ್ಲಿ 152 (ಪೃಥ್ವಿರಾಜ್ 33, ಮನೀಶ್ 27, ನವೀನ್ ಶಂಕರ್ 38ಕ್ಕೆ 3, ಅವಿನಾಶ್ ಶೆಟ್ಟಿ 27ಕ್ಕೆ 2, ಪಿಯೂಷ್ ಸಿಂಗ್ 29ಕ್ಕೆ 2). ಫಲಿತಾಂಶ: ಆರ್‌ವಿಸಿಇಗೆ 91 ರನ್ ಜಯ

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.