ಮಂಗಳವಾರ, ಸೆಪ್ಟೆಂಬರ್ 17, 2019
25 °C

ಕ್ರಿಕೆಟ್: ಆರ್‌ವಿಸಿಇ ತಂಡಕ್ಕೆ ಜಯ

Published:
Updated:

ಬೆಂಗಳೂರು: ಆರ್‌ವಿಸಿಇ ತಂಡದವರು ಇಲ್ಲಿ ನಡೆಯುತ್ತಿರುವ ಎಂಎಸ್‌ಆರ್‌ಐಟಿ ಆಶ್ರಯದ 14ನೇ ಎಂ.ಎಸ್. ರಾಮಯ್ಯ ಸ್ಮಾರಕ ಅಂತರ ಎಂಜಿನಿಯರಿಂಗ್ ಕಾಲೇಜು ಕ್ರಿಕೆಟ್ ಟೂರ್ನಿಯ ಪಂದ್ಯದಲ್ಲಿ ಎಎಂಸಿಇ ವಿರುದ್ಧ ಒಂದು ರನ್ನಿನ ರೋಚಕ ಗೆಲುವು ಪಡೆದರು.ಗುರುವಾರ ನಡೆದ ಇತರ ಪಂದ್ಯಗಳಲ್ಲಿ ಬಿಎಂಎಸ್‌ಐಟಿ ಮತ್ತು ಡಿಎಸ್‌ಸಿಇ ತಂಡಗಳು ತಮ್ಮ ಎದುರಾಳಿಗಳ ವಿರುದ್ಧ ಜಯ ಸಾಧಿಸಿದವು.ಸಂಕ್ಷಿಪ್ತ ಸ್ಕೋರ್: ಆರ್‌ವಿಸಿಇ: 30 ಓವರ್‌ಗಳಲ್ಲಿ 9 ವಿಕೆಟ್‌ಗೆ 147 (ವಿಶ್ವನಾಥ್ 25, ಪಿಯೂಷ್ 24, ತೇಜಸ್ 18ಕ್ಕೆ 5). ಎಎಂಸಿಇ: 30 ಓವರ್‌ಗಳಲ್ಲಿ 5 ವಿಕೆಟ್‌ಗೆ 146 (ಶ್ರೀನಿವಾಸ್ 53, ಸುಹಾಸ್47, ಪಿಯೂಷ್ 45ಕ್ಕೆ 3). ಫಲಿತಾಂಶ: ಆರ್‌ವಿಸಿಇಗೆ 1 ರನ್ ಜಯಬಿಎಂಎಸ್‌ಐಟಿ: 30 ಓವರ್‌ಗಳಲ್ಲಿ 8 ವಿಕೆಟ್‌ಗೆ 189 (ಅರವಿಂದ್ 72, ಪ್ರದೀಪ್ 23ಕ್ಕೆ 3). ಕೆಎನ್‌ಎಸ್‌ಐಟಿ: 30 ಓವರ್‌ಗಳಲ್ಲಿ 8 ವಿಕೆಟ್‌ಗೆ 182 (ನಾಗೇಂದ್ರ 83, ವಿಷ್ಣುರಾಮ್ 20ಕ್ಕೆ 4).

ಫಲಿತಾಂಶ: ಬಿಎಂಎಸ್‌ಐಟಿಗೆ 7 ರನ್ ಗೆಲುವುಡಿಎಸ್‌ಸಿಇ: 30 ಓವರ್‌ಗಳಲ್ಲಿ 8 ವಿಕೆಟ್‌ಗೆ 189 (ಮಿಥುನ್ 62, ಸುಪೇಶ್ 36, ಚಂದ್ರ ಶೇಖರ್ 36ಕ್ಕೆ 4). ಕೆಎಸ್‌ಐಟಿ: 30 ಓವರ್‌ಗಳಲ್ಲಿ 7 ವಿಕೆಟ್‌ಗೆ 140 (ಬಾಲಮುರಳಿ ಔಟಾಗದೆ 38, ಶೇಖರ್ 37). ಫಲಿತಾಂಶ: ಡಿಎಸ್‌ಸಿಇಗೆ 49 ರನ್ ಜಯ

Post Comments (+)