ಗುರುವಾರ , ಮೇ 13, 2021
38 °C

ಕ್ರಿಕೆಟ್: ಆಸ್ಟ್ರೇಲಿಯಾಕ್ಕೆ ಜಯ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಗಾಲ್: ವೇಗಿ ರ‌್ಯಾನ್ ಹ್ಯಾರಿಸ್ (62ಕ್ಕೆ5) ಅವರ ಪ್ರಭಾವಿ ಬೌಲಿಂಗ್ ನೆರವಿನಿಂದ ಆಸ್ಟ್ರೇಲಿಯಾ ತಂಡದವರು ಇಲ್ಲಿ ನಡೆದ ಶ್ರೀಲಂಕಾ ವಿರುದ್ಧದ  ಟೆಸ್ಟ್ ಕ್ರಿಕೆಟ್ ಸರಣಿಯ ಮೊದಲ ಪಂದ್ಯದಲ್ಲಿ 125 ರನ್‌ಗಳ ಗೆಲುವು ದಾಖಲಿಸಿದ್ದಾರೆ.ಗಾಲ್ ಅಂತರರಾಷ್ಟ್ರೀಯ ಕ್ರೀಡಾಂಗಣದಲ್ಲಿ ಶನಿವಾರ ಕೊನೆಗೊಂಡ ಈ ಪಂದ್ಯದಲ್ಲಿ ಗೆಲುವಿಗೆ 379 ರನ್‌ಗಳ ಗುರಿ ಪಡೆದಿದ್ದ ಶ್ರೀಲಂಕಾ ತನ್ನ ಎರಡನೇ ಇನಿಂಗ್ಸ್‌ನಲ್ಲಿ ನಾಲ್ಕನೇ ದಿನ 95.5 ಓವರ್‌ಗಳಲ್ಲಿ 253 ರನ್‌ಗಳಿಗೆ ಎಲ್ಲಾ ವಿಕೆಟ್ ಕಳೆದುಕೊಂಡಿತು.ಮಾಜಿ ನಾಯಕ ಮಾಹೇಲ ಜಯವರ್ಧನೆ (105; 231 ಎಸೆತ, 15 ಬೌಂಡರಿ, 1 ಸಿಕ್ಸರ್) ಹಾಗೂ ಆ್ಯಂಜೆಲೊ ಮ್ಯಾಥ್ಯುಸ್ (95; 191 ಎಸೆತ, 13 ಬೌಂಡರಿ) ನಡೆಸಿದ ಹೋರಾಟ ಸಾಕಾಗಲಿಲ್ಲ. ಇವರಿಬ್ಬರು ಆರನೇ ವಿಕೆಟ್‌ಗೆ 142 ರನ್ ಸೇರಿಸಿದರು. ಆದರೆ ಹ್ಯಾರಿಸ್ ಬೌಲಿಂಗ್ ದಾಳಿ ಲಂಕಾ ಪಡೆಯನ್ನು ಕಟ್ಟಿಹಾಕಿತು.ಸಂಕ್ಷಿಪ್ತ ಸ್ಕೋರ್: ಆಸ್ಟ್ರೇಲಿಯಾ: ಮೊದಲ ಇನಿಂಗ್ಸ್: 86.4 ಓವರ್‌ಗಳಲ್ಲಿ 273 ಹಾಗೂ 59.2 ಓವರ್‌ಗಳಲ್ಲಿ 210; ಶ್ರೀಲಂಕಾ: ಮೊದಲ ಇನಿಂಗ್ಸ್: 50 ಓವರ್‌ಗಳಲ್ಲಿ 105 ಹಾಗೂ 95.5 ಓವರ್‌ಗಳಲ್ಲಿ 253 (ಮಾಹೇಲ ಜಯವರ್ಧನೆ 115, ಆ್ಯಂಜೆಲೊ ಮ್ಯಾಥ್ಯುಸ್ 95; ರ‌್ಯಾನ್ ಹ್ಯಾರಿಸ್ 62ಕ್ಕೆ5, ಶೇನ್ ವಾಟ್ಸನ್ 19ಕ್ಕೆ2): ಫಲಿತಾಂಶ: ಆಸ್ಟ್ರೇಲಿಯಾಕ್ಕೆ 125 ರನ್‌ಗಳ ಜಯ ಹಾಗೂ ಮೂರು ಪಂದ್ಯಗಳ ಸರಣಿಯಲ್ಲಿ 1-0 ಮುನ್ನಡೆ. ಪಂದ್ಯ ಶ್ರೇಷ್ಠ: ಮೈಕ್ ಹಸ್ಸಿ.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.