ಮೀರ್ಪುರ (ಪಿಟಿಐ): ಏಷ್ಯಾಕಪ್ ಕ್ರಿಕೆಟ್ ಟೂರ್ನಿಯಲ್ಲಿ ಅಚ್ಚರಿ ಫಲಿತಾಂಶಕ್ಕೆ ಕಾರಣವಾಗಿದ್ದ ಬಾಂಗ್ಲಾದೇಶ ತಂಡದವರು ಇತಿಹಾಸದ ಹೊಸ್ತಿಲಲ್ಲಿ ಎಡವಿ ಬಿದ್ದಿದ್ದಾರೆ. ಹಾಗಾಗಿ ಮೊದಲ ಬಾರಿ ಟ್ರೋಫಿಯೊಂದನ್ನು ಎತ್ತಿ ಹಿಡಿಯುವ ಅವಕಾಶವನ್ನು ಈ ತಂಡದವರು ಕಳೆದುಕೊಂಡರು.

ಅದಕ್ಕೆ ಕಾರಣವಾಗಿದ್ದು ಕೇವಲ ಎರಡು ರನ್! ಶೇರ್ ಎ ಬಾಂಗ್ಲಾ ಕ್ರೀಡಾಂಗಣದಲ್ಲಿ ಗುರುವಾರ ನಡೆದ ಟೂರ್ನಿಯ ಫೈನಲ್ನಲ್ಲಿ ಆತಿಥೇಯ ದೇಶದ ಎದುರು ಎರಡು ರನ್ಗಳ ರೋಚಕ ಗೆಲುವು ಸಾಧಿಸಿದ ಪಾಕಿಸ್ತಾನ ನೂತನ ಚಾಂಪಿಯನ್ ಆಯಿತು. 12 ವರ್ಷಗಳ ನಂತರ ಈ ಪ್ರಶಸ್ತಿ ಜಯಿಸಿತು.

ಪಾಕ್ನ 236 ರನ್ಗಳಿಗೆ ಉತ್ತರವಾಗಿ ಬಾಂಗ್ಲಾ 50 ಓವರ್ಗಳಲ್ಲಿ 8 ವಿಕೆಟ್ ನಷ್ಟಕ್ಕೆ 234 ರನ್ ಗಳಿಸುವಲ್ಲಿ ಮಾತ್ರ ಯಶಸ್ವಿಯಾಯಿತು. ಕೊನೆಯ ಓವರ್ನಲ್ಲಿ ಗೆಲುವಿಗಾಗಿ 9 ರನ್ಗಳು ಬೇಕಿದ್ದವು. ಆದರೆ ಐಜಾಜ್ ಚೀಮಾ ಹಾಕಿದ ಓವರ್ನಲ್ಲಿ ಬಾಂಗ್ಲಾ ಕೇವಲ 6 ರನ್ ಗಳಿಸಿತು. ಹಾಗಾಗಿ ಮತ್ತೊಂದು ಶಾಕ್ ಫಲಿತಾಂಶ ನೀಡುವ ಮುಷ್ಫಿಕರ್ ರಹೀಮ್ ಪಡೆಯ ಯೋಜನೆ ಯಶಸ್ವಿಯಾಗಲಿಲ್ಲ. ಆದರೆ ವಿಶ್ವ ಚಾಂಪಿಯನ್ ಭಾರತ ಹಾಗೂ ಶ್ರೀಲಂಕಾವನ್ನು ಈ ಟೂರ್ನಿಯಲ್ಲಿ ಮಣಿಸಿದ್ದು ಬಾಂಗ್ಲಾದ ಅದ್ಭುತ ಸಾಧನೆ.

ಈ ಪಂದ್ಯದಲ್ಲೂ ಗೆಲ್ಲುವ ಅವಕಾಶ ಬಾಂಗ್ಲಾಕ್ಕಿತ್ತು. ಏಕೆಂದರೆ ಪಾಕ್ ತಂಡ ಬ್ಯಾಟಿಂಗ್ ವೇಳೆ ಒಂದು ಹಂತದಲ್ಲಿ 8 ವಿಕೆಟ್ ಕಳೆದುಕೊಂಡು ಕೇವಲ 199 ರನ್ ಗಳಿಸಿತ್ತು. ಆದರೆ ಈ ಹಂತದಲ್ಲಿ ಬಾಂಗ್ಲಾದ ಬೌಲರ್ಗಳು ಎಡವಿದರು. ಹಾಗಾಗಿ ಪಾಕ್ 236 ರನ್ ಗಳಿಸಲು ಸಾಧ್ಯವಾಯಿತು. ಈ ತಂಡದ ಸರ್ಫ್ರಾಜ್ ಅಹ್ಮದ್ (ಔಟಾಗದೆ 46; 52 ಎಸೆತ) ಮಿಂಚಿದರು. ಶಹಾದತ್ ಹುಸೇನ್ ಕೊನೆಯ ಓವರ್ನಲ್ಲಿ 19 ರನ್ ನೀಡಿ ದುಬಾರಿಯಾದರು.

ಈ ಕಾರಣ ಬಾಂಗ್ಲಾ ತಂಡದ ತಮೀಮ್ ಇಕ್ಬಾಲ್ (60; 68 ಎಸೆತ) ಹಾಗೂ ಶಕೀಬ್ ಅಲ್ ಹಸನ್ (68; 72 ಎಸೆತ) ಅವರ ಆಟ ವ್ಯರ್ಥವಾಯಿತು. ಇದಕ್ಕೆ ಕಾರಣ ಪಾಕ್ ಬೌಲರ್ಗಳು ಪ್ರಭಾವಿ ಬೌಲಿಂಗ್ ದಾಳಿ. ಅದರಲ್ಲೂ ಶಾಹೀದ್ ಅಫ್ರಿದಿ ಕೇವಲ 28 ರನ್ ನೀಡಿದರು.

ಸ್ಕೋರ್ ವಿವರ:
ಪಾಕಿಸ್ತಾನ 50 ಓವರ್ಗಳಲ್ಲಿ 9 ವಿಕೆಟ್ ನಷ್ಟಕ್ಕೆ 236
ಮೊಹಮ್ಮದ್ ಹಫೀಜ್ ಸಿ ನಜ್ಮುಲ್ ಹೊಸೇನ್ ಬಿ ರಜಾಕ್ 40
ನಸೀರ್ ಜೆಮ್ಶೆಡ್ ಸಿ ಮಹ್ಮದುಲ್ಲಾ ಬಿ ಮಷ್ರಫೆ ಮೋರ್ತಜ 09
ಯೂನಿಸ್ ಖಾನ್ ಎಲ್ಬಿಡಬ್ಲ್ಯು ಬಿ ನಜ್ಮುಲ್ ಹೊಸೇನ್ 01
ಮಿಸ್ಬಾ ಉಲ್ ಹಕ್ ರನ್ಔಟ್ (ನಸೀರ್ ಹೊಸೇನ್) 13
ಉಮರ್ ಅಕ್ಮಲ್ ಸಿ ಮಷ್ಫಿಕರ್ ರಹೀಮ್ ಬಿ ಮಹ್ಮದುಲ್ಲಾ 30
ಹಮ್ಮಾದ್ ಅಜಾಮ್ ಸಿ ಅಂಡ್ ಬಿ ಶಕೀಬ್ ಅಲ್ ಹಸನ್ 30
ಶಾಹೀದ್ ಅಫ್ರಿದಿ ಸಿ ನಾಸೀರ್ ಹೊಸೇನ್ ಬಿ ಶಕೀಬ್ ಹಸನ್ 32
ಸರ್ಫ್ರಾರಾಜ್ ಅಹ್ಮದ್ ಔಟಾಗದೆ 46
ಉಮರ್ ಗುಲ್ ಸಿ ಶಕೀಬ್ ಹಸನ್ ಬಿ ಮಷ್ರಫೆ ಮೋರ್ತಜ 04
ಸಯೀದ್ ಅಜ್ಮಲ್ ಬಿ ಅಬ್ದುರ್ ರಜಾಕ್ 04
ಐಜಾಜ್ ಚೀಮಾ ಔಟಾಗದೆ 09
ಇತರೆ (ಬೈ-2, ಲೆಗ್ಬೈ-8, ವೈಡ್-4, ನೋಬಾಲ್-4) 18
ವಿಕೆಟ್ ಪತನ: 1-16 (ನಸೀರ್; 4.2); 2-19 (ಯೂನಿಸ್; 5.2); 3-55 (ಮಿಸ್ಬಾ; 14.5); 4-70 (ಹಫೀಜ್; 21.2); 5-129 (ಹಮಾದ್; 33.3); 6-133 (ಉಮರ್; 34.5); 7-178 (ಅಫ್ರಿದಿ; 41.3); 8-199 (ಉಮರ್; 44.3); 9-206 (ಅಜ್ಮಲ್; 45.6)
ಬೌಲಿಂಗ್: ಮಷ್ರಫೆ ಮೋರ್ತಜ 10-0-48-2 (ವೈಡ್-1), ನಜ್ಮಲ್ ಹೊಸೇನ್ 8-1-36-1, ಅಬ್ದುರ್ ರಜಾಕ್ 10-3-26-2, ಶಹಾದತ್ ಹೊಸೇನ್ 9-0-63-0 (ನೋಬಾಲ್-3, ವೈಡ್-2), ಶಕೀಬ್ ಅಲ್ ಹಸನ್ 10-1-39-2 (ವೈಡ್-1), ಮಹ್ಮದುಲ್ಲಾ 3-0-14-1
ಬಾಂಗ್ಲಾದೇಶ 50 ಓವರ್ಗಳಲ್ಲಿ 8 ವಿಕೆಟ್ ನಷ್ಟಕ್ಕೆ 234
ತಮೀಮ್ ಇಕ್ಬಾಲ್ ಸಿ ಯೂನಿಸ್ ಖಾನ್ ಬಿ ಉಮರ್ ಗುಲ್ 60
ನಜಿಮುದ್ದೀನ್ ಸಿ ಯೂನಿಸ್ ಖಾನ್ ಬಿ ಶಾಹೀದ್ ಅಫ್ರಿದಿ 16
ಜಹುರುಲ್ ಇಸ್ಲಾಮ್ ಸಿ ಯೂನಿಸ್ ಖಾನ್ ಬಿ ಅಜ್ಮಲ್ 00
ನಾಸೀರ್ ಹೊಸೇನ್ ಸಿ ಮಿಸ್ಬಾ ಉಲ್ ಹಕ್ ಬಿ ಗುಲ್ 28
ಶಕೀಬ್ ಅಲ್ ಹಸನ್ ಬಿ ಐಜಾಜ್ ಚೀಮಾ 68
ಮುಷ್ಫಿಕರ್ ರಹೀಮ್ ಸಿ ನಾಸೀರ್ ಜೆಮ್ಶೆಡ್ ಬಿ ಚೀಮಾ 10
ಮಹ್ಮದುಲ್ಲಾ ಔಟಾಗದೆ 17
ಮಷ್ರಫೆ ಮೋರ್ತಜ ಸಿ ನಾಸೀರ್ ಜೆಮ್ಶೆಡ್ ಬಿ ಅಜ್ಮಲ್ 18
ಅಬ್ದುರ್ ರಜಾಕ್ ಬಿ ಐಜಾಜ್ ಚೀಮಾ 06
ಶಹಾದತ್ ಹೊಸೇನ್ ಔಟಾಗದೆ 00
ಇತರೆ (ಲೆಗ್ಬೈ-5, ವೈಡ್-4, ನೋಬಾಲ್-2) 11
ವಿಕೆಟ್ ಪತನ: 1-68 (ನಜಿಮುದ್ದೀನ್; 16.4); 2-68 (ಜಹುರುಲ್; 17.5); 3-81 (ತಮೀಮ್; 23.1); 4-170 (ನಾಸೀರ್; 42.3); 5-179 (ಶಕೀಬ್; 43.4); 6-190 (ಮುಷ್ಫಿಕರ್; 45.1); 7-218 (ಮಷ್ರಫೆ; 47.4); 8-233 (ಅಬ್ದುರ್; 49.5)
ಬೌಲಿಂಗ್: ಮೊಹಮ್ಮದ್ ಹಫೀಜ್ 10-0-30-0 (ವೈಡ್-1), ಉಮರ್ ಗುಲ್ 10-2-65-2 (ನೋಬಾಲ್-1), ಸಯೀದ್ ಅಜ್ಮಲ್ 10-2-40-2 (ವೈಡ್-1), ಶಾಹೀದ್ ಅಫ್ರಿದಿ 10-1-28-1 (ವೈಡ್-1), ಐಜಾಜ್ ಚೀಮಾ 7-0-46-3 (ನೋಬಾಲ್-1), ಹಮ್ಮಾದ್ ಅಜಾಮ್ 3-0-20-0 (ವೈಡ್-1)
ಫಲಿತಾಂಶ: ಪಾಕಿಸ್ತಾನಕ್ಕೆ 2 ರನ್ ಜಯ ಹಾಗೂ ಏಷ್ಯಾಕಪ್ ಚಾಂಪಿಯನ್ ಪಟ್ಟ. ಪಂದ್ಯ ಶ್ರೇಷ್ಠ: ಶಾಹೀದ್ ಅಫ್ರಿದಿ, ಟೂರ್ನಿ ಶ್ರೇಷ್ಠ: ಶಕೀಬ್ ಅಲ್ ಹಸನ್

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.