ಬುಧವಾರ, ಏಪ್ರಿಲ್ 21, 2021
30 °C

ಕ್ರಿಕೆಟ್: ಕಿವೀಸ್ ಮರುಹೋರಾಟ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಕಿಂಗ್‌ಸ್ಟನ್: ನ್ಯೂಜಿಲೆಂಡ್ ತಂಡ  ವೆಸ್ಟ್ ಇಂಡೀಸ್ ವಿರುದ್ಧದ ಎರಡನೇ ಕ್ರಿಕೆಟ್ ಟೆಸ್ಟ್ ಪಂದ್ಯದಲ್ಲಿ ಮರುಹೋರಾಟ ನಡೆಸುವಲ್ಲಿ ಯಶಸ್ವಿಯಾಗಿದೆ. ಸಬೀನಾ ಪಾರ್ಕ್ ಕ್ರೀಡಾಂಗಣದಲ್ಲಿ ನಡೆಯುತ್ತಿರುವ ಪಂದ್ಯದ ಎರಡನೇ ದಿನವಾದ ಶುಕ್ರವಾರ ವಿಂಡೀಸ್ ಮೊದಲ ಇನಿಂಗ್ಸ್‌ನಲ್ಲಿ 209 ರನ್‌ಗಳಿಗೆ ಆಲೌಟಾಯಿತು.ದಿನದಾಟದ ಅಂತ್ಯಕ್ಕೆ ನ್ಯೂಜಿಲೆಂಡ್ ತನ್ನ ಎರಡನೇ ಇನಿಂಗ್ಸ್‌ನಲ್ಲಿ 21 ಓವರ್‌ಗಳಲ್ಲಿ 2 ವಿಕೆಟ್‌ಗೆ 59 ರನ್ ಗಳಿಸಿತ್ತು. ಮೊದಲ ಇನಿಂಗ್ಸ್‌ನಲ್ಲಿ 260 ರನ್ ಗಳಿಸಿದ್ದ ಪ್ರವಾಸಿ ತಂಡ ಇದೀಗ ಒಟ್ಟಾರೆ 110 ರನ್‌ಗಳ ಮುನ್ನಡೆಯಲ್ಲಿದೆ.ಸಂಕ್ಷಿಪ್ತ ಸ್ಕೋರ್: ನ್ಯೂಜಿಲೆಂಡ್: ಮೊದಲ ಇನಿಂಗ್ಸ್ 82.5 ಓವರ್‌ಗಳಲ್ಲಿ 260 ಮತ್ತು ಎರಡನೇ ಇನಿಂಗ್ಸ್ 21 ಓವರ್‌ಗಳಲ್ಲಿ 2 ವಿಕೆಟ್‌ಗೆ 59 (ಮಾರ್ಟಿನ್ ಗುಪ್ಟಿಲ್ 42, ನೀಲ್ ವ್ಯಾಗ್ನೆರ್ ಬ್ಯಾಟಿಂಗ್ 02, ಬ್ರೆಂಡನ್ ಮೆಕ್ಲಮ್ ಬ್ಯಾಟಿಂಗ್ 01, ನರಸಿಂಗ ದೇವನಾರಾಯಣ್ 3ಕ್ಕೆ 2) ವೆಸ್ಟ್ ಇಂಡೀಸ್: ಮೊದಲ ಇನಿಂಗ್ಸ್ 64.3 ಓವರ್‌ಗಳಲ್ಲಿ 209 (ಮಾರ್ಲೊನ್ ಸ್ಯಾಮುಯೆಲ್ಸ್ 123, ಡರೆನ್ ಸಾಮಿ 32, ಟ್ರೆಂಟ್ ಬೌಲ್ಟ್ 58ಕ್ಕೆ 3, ಡಗ್ ಬ್ರೇಸ್‌ವೆಲ್ 46ಕ್ಕೆ 3, ನೀಲ್ ವ್ಯಾಗ್ನೆರ್ 24ಕ್ಕೆ 2)

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.