ಕ್ರಿಕೆಟ್: ದೋನಿ ಪಡೆಗೆ ದಂಡ

ಬುಧವಾರ, ಜೂಲೈ 17, 2019
26 °C

ಕ್ರಿಕೆಟ್: ದೋನಿ ಪಡೆಗೆ ದಂಡ

Published:
Updated:

ಹಂಬಂಟೋಟಾ (ಪಿಟಿಐ): ಶ್ರೀಲಂಕಾ ವಿರುದ್ಧದ ಏಕದಿನ ಕ್ರಿಕೆಟ್ ಸರಣಿಯ ಮೊದಲ ಪಂದ್ಯದಲ್ಲಿ ನಿಧಾನಗತಿಯಲ್ಲಿ ಬೌಲಿಂಗ್ ಮಾಡಿದ ಕಾರಣಕ್ಕಾಗಿ ಅಂತರರಾಷ್ಟ್ರೀಯ ಕ್ರಿಕೆಟ್ ಮಂಡಳಿ (ಐಸಿಸಿ) ಭಾರತ ತಂಡದ ನಾಯಕ ಮಹೇಂದ್ರ ಸಿಂಗ್ ದೋನಿ ಹಾಗೂ ಉಳಿದ ಆಟಗಾರರಿಗೆ ದಂಡ ವಿಧಿಸಿದೆ.ಪಂದ್ಯದ ಶೇ. 20ರಷ್ಟು ಹಣವನ್ನು ದೋನಿ ಮತ್ತು ಉಳಿದ ಆಟಗಾರರು ಶೇ. 10ರಷ್ಟು ಹಣವನ್ನು ದಂಡ ರೂಪದಲ್ಲಿ ಕಟ್ಟಬೇಕಿದೆ.`ಭಾರತ ತಂಡ ನಿಧಾನಗತಿಯಲ್ಲಿ ಬೌಲಿಂಗ್ ನಡೆಸಿದೆ. ಆದ ಕಾರಣ ಈ ದಂಡ ಹಾಕಲಾಗಿದೆ~ ಎಂದು ಪಂದ್ಯದ ರೆಫರಿ ಕ್ರಿಸ್ ಬ್ರಾಡ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ. ಈ ಪಂದ್ಯದಲ್ಲಿ ಭಾರತ 21 ರನ್‌ಗಳ ಗೆಲುವು ಸಾಧಿಸಿತ್ತು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry