ಭಾನುವಾರ, ಮೇ 22, 2022
24 °C

ಕ್ರಿಕೆಟ್ ಬೆಟ್ಟಿಂಗ್: ಎಂಟು ಬುಕ್ಕಿಗಳ ಬಂಧನ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ನವದೆಹಲಿ (ಐಎಎನ್‌ಎಸ್): ಭಾರತ ಮತ್ತು ಬಾಂಗ್ಲಾದೇಶ ನಡುವೆ ಶನಿವಾರ ವಿಶ್ವಕಪ್ ಕ್ರಿಕೆಟ್‌ನ ಮೊದಲ ಪಂದ್ಯದ ವೇಳೆ ಬೆಟ್ಟಿಂಗ್ ವ್ಯವಹಾರ ನಡೆಸುತ್ತಿದ್ದ ಬುಕ್ಕಿಗಳ ಜಾಲವನ್ನು ದೆಹಲಿ ಪೋಲಿಸರು ಭಾನುವಾರ ಬಯಲಿಗೆ ಎಳೆದಿದ್ದಾರೆ.‘ಭಾರತ ಮತ್ತು ಬಾಂಗ್ಲಾ ನಡುವಿನ ಪಂದಕ್ಕೆ ಸುಮಾರು ಮೂರು ಕೋಟಿ ರೂಪಾಯಿಗಳ ಬೆಟ್ಟಿಂಗ್ ವ್ಯವಹಾರ ನಡೆದಿರುವುದನ್ನು ಖಚಿತ ಪಡಿಸಿರುವ ದೆಹಲಿ ಪೊಲೀಸರು ಈ ವಿಷಯಕ್ಕೆ ಸಂಬಂಧಿಸಿದಂತೆ ಎಂಟು ಜನ ಬುಕ್ಕಿಗಳನ್ನು ಬಂಧಿಸಲಾಗಿದೆ’ ಎಂದು ತಿಳಿಸಿದ್ದಾರೆ.‘ಖಚಿತ ಮಾಹಿತಿಗೆ ಮೇರೆಗೆ ದೆಹಲಿಯ ಕೋರಲ್ ಬಾಗ್‌ನ ಹೋಟೆಲ್‌ಗೆ ದಾಳಿ ನಡೆಸಿದ ಪೊಲೀಸರ ತಂಡವು ಬುಕ್ಕಿಗಳನ್ನು ವಶಕ್ಕೆ ತಗೆದುಕೊಂಡಿದೆ. ಹೋಟೆಲ್‌ನ ಎರಡು ಕೊಠಡಿಗಳಲ್ಲಿ ಬೆಟ್ಟಿಂಗ್ ವ್ಯವಹಾರ ನಡೆಯುತ್ತಿತ್ತು. ಬಂಧಿತರಿಂದ 1.15 ಕೋಟಿ ರೂಪಾಯಿಯನ್ನು ವಶಪಡಿಸಿಕೊಳ್ಳಲಾಗಿದೆ’ ಎಂದು ದೆಹಲಿ ಡೆಪ್ಯೂಟಿ ಕಮೀಷನರ್ ಅಶೋಕ್ ಚಂದ್ ತಿಳಿಸಿದ್ದಾರೆ.ರೋಹಿಣಿ ಎಂಬುವರ ನಿವಾಸದ ಮೇಲೂ ದಾಳಿ ನಡೆಸಿರುವ ಪೊಲೀಸರು, ಅಲ್ಲಿಯೂ ಇಬ್ಬರನ್ನು ಬಂಧಿಸಿ 53 ಲಕ್ಷ ರೂಪಾಯಿಯನ್ನು ವಶಪಡಿಸಿಕೊಂಡಿದ್ದಾರೆ. ಬೆಟ್ಟಿಂಗ್ ವ್ಯವಹಾರ ನಡೆಸುತ್ತಿದ್ದ ಅನಿಲ್ ಕುಮಾರ್ ಗುಪ್ತಾ ಹಾಗೂ ನವೀನ್ ಕುಮಾರ್ ಗುಪ್ತಾ ಎನ್ನುವವರನ್ನು ಸಹ ಬಂಧಿಸಿ ಅವರಿಂದ 1.10 ಕೋಟಿ ರೂಪಾಯಿ ವಶಕ್ಕೆ ಪಡೆಯಲಾಗಿದೆ.ಇದುವರೆಗೂ ಒಟ್ಟು ಎಂಟು ಬುಕ್ಕಿಗಳನ್ನು ಬಂಧಿಸಲಾಗಿದೆ’ ಎಂದು ಅಶೋಕ್ ಚಂದ್ ಹೇಳಿದ್ದಾರೆ.‘ಪಂದ್ಯ ಮುಗಿದ ನಂತರ ಲಾಭ, ನಷ್ಟದ ಲೆಕ್ಕಾಚಾರ ಹಾಕುತ್ತಿದ್ದ ವೇಳೆ ಬುಕ್ಕಿಗಳನ್ನು ಬಂಧಿಸಿರುವ ದೆಹಲಿ ಪೊಲೀಸರು, ಬುಕ್ಕಿಗಳು ಲ್ಯಾಪ್‌ಟಾಪ್, ಮೊಬೈಲ್ ಫೋನ್‌ಗಳನ್ನು ಬಳಸುತ್ತಿದ್ದರು ಎಂದು ತಿಳಿಸಿರುವ ಪೊಲೀಸರು, ದೆಹಲಿ ನಗರದಲ್ಲಿ ಬೆಟ್ಟಿಂಗ್ ವ್ಯವಹಾರದ ಜಾಲ ವ್ಯಾಪಕವಾಗಿ ಹರಡಿರುವ ಬಗ್ಗೆ ಸಂಶಯವಿದೆ. ಈ ಕುರಿತು ಶೀಘ್ರದಲ್ಲಿಯೇ ತನಿಖೆ ನಡೆಸಲಾಗುವುದು’ ಎಂದು ಕಮೀಷನರ್ ತಿಳಿಸಿದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.