ಗುರುವಾರ , ಏಪ್ರಿಲ್ 15, 2021
26 °C

ಕ್ರಿಕೆಟ್ ವಿಶ್ವಕಪ್: ದಾಳಿಗೆ ಸಂಚು- ಉಗ್ರ ಪಾಕ್‌ನಲ್ಲಿ ಸೆರೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಇಸ್ಲಾಮಾಬಾದ್ (ಪಿಟಿಐ): ಕ್ರಿಕೆಟ್ ವಿಶ್ವಕಪ್ ಪಂದ್ಯಾವಳಿ ಸಂದರ್ಭದಲ್ಲಿ ಶ್ರೀಲಂಕಾದಲ್ಲಿ ಭಯೋತ್ಪಾದನಾ ದಾಳಿ ನಡೆಸಲು ಸಂಚು ಹೂಡಿದ್ದ ಉಗ್ರಗಾಮಿಯೊಬ್ಬನನ್ನು ಬಂಧಿಸಿರುವುದಾಗಿ ಪಾಕಿಸ್ತಾನದ ಒಳಾಡಳಿತ ಸಚಿವ ರೆಹಮಾನ್ ಮಲಿಕ್ ಗುರುವಾರ ಇಲ್ಲಿ ತಿಳಿಸಿದರು.ಈ ಪಂದ್ಯಾವಳಿಯ ಅವಧಿಯಲ್ಲಿ ಭಯೋತ್ಪಾದನಾ ದಾಳಿ ನಡೆಸಲು ಗಂಭೀರ ಪ್ರಯತ್ನವನ್ನು ನಡೆಸಲಾಗಿದೆ.  ಭಾರತಕ್ಕೆ ಈ ಮಾಹಿತಿ ತಲುಪಿಸಲಾಗಿದೆ. ಜೊತೆಗೆ ತಾಲಿಬಾನ್ ತನ್ನ ಕುಕೃತ್ಯವನ್ನು ಭಾರತಕ್ಕೂ ವಿಸ್ತರಿಸಿರುವ ಅಂಶವನ್ನು ತಿಳಿಸಲಾಗಿದೆ ಎಂದು ಹೇಳಿದ ಅವರು, ಆದರೆ ಬಂಧಿತನ ರಾಷ್ಟ್ರೀಯತೆ ಅಥವಾ ಇತರ ಗುರುತನ್ನು ಬಹಿರಂಗಪಡಿಸಿಲ್ಲ. 

ಈಕಾರ್ಯಾಚರಣೆಯಲ್ಲಿ ಅಂತರರಾಷ್ಟ್ರೀಯ ಪೊಲೀಸ್ ಸಂಸ್ಥೆ ನೆರವಾಗಿರುವುದಾಗಿ ಇಂಟರ್‌ಪೋಲ್ ಮುಖ್ಯಸ್ಥ ರೊನಾಲ್ಡ್ ನೋಬಲ್ ಅವರೊಂದಿಗೆ ನಡೆಸಿದ ಈ ಜಂಟಿ ಸುದ್ದಿಗೋಷ್ಠಿಯಲ್ಲಿ ಮಲಿಕ್ ತಿಳಿಸಿದರು.

 

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.