ಗುರುವಾರ , ಜೂನ್ 24, 2021
25 °C

ಕ್ರಿಶ್ಚಿಯನ್ನರ ಚೀಯೂನ್ ಹಬ್ಬಕ್ಕೆ ವೇದಿಕೆ ವಿರೋಧ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಗಂಗಾವತಿ: ತಾಲ್ಲೂಕಿನ ಶ್ರೀರಾಮನಗರದಲ್ಲಿ ಕ್ರೈಸ್ತರು ನಡೆಸುತ್ತಿರುವ ಚೀಯೂನ್ ಹಬ್ಬ ಕೇವಲ ಧಾರ್ಮಿಕ ಜಾಗೃತಿ ಸಭೆ ಹಬ್ಬ ಅಲ್ಲ. ಅದರ ಬದಲಿಗೆ ಮತಾಂತರ ಮಾಡುವ ಹಬ್ಬವಾಗಿ ನಡೆಯುತ್ತಿದೆ ಎಂದು ಹಿಂದು ಜಾಗರಣ ವೇದಿಕೆ ಜಿಲ್ಲಾ ಘಟಕ ಆರೋಪಿಸಿದೆ.ಬುಧವಾರ ನಗರದಲ್ಲಿ ಪ್ರತಿಭಟನೆ ನಡೆಸಿದ ಕಾರ್ಯಕರ್ತರು ಬಳಿಕ ಮಿನಿ ವಿಧಾನಸೌಧಕ್ಕೆ ತೆರಳಿ ತಹಸೀಲ್ದಾರ್ ಅವರಿಗೆ ಮನವಿ ಸಲ್ಲಿಸಿದ ಕಾರ್ಯಕರ್ತರು, ಚೀಯೂನ್ ಹಬ್ಬದ ಬಗ್ಗೆ ನಿಗಾ ವಹಿಸುವಂತೆ ಒತ್ತಾಯಿಸಿದರು.ಪಾಶ್ಚಾತ್ಯ ರಾಷ್ಟ್ರಗಳಲ್ಲಿ ಭಾರತದ ಬಗ್ಗೆ ಅಪ ಪ್ರಚಾರ ಮಾಡುತ್ತಿರುವ ಕೆಲ ಕ್ರೈಸ್ತ ಮಿಶನರಿಗಳು ಸಾಕಷ್ಟು ಆರ್ಥಿಕ ಸಹಾಯ ಪಡೆದು ದೇಶದಲ್ಲಿ ಮತಾಂತರ ನಡೆಸುತ್ತಿದ್ದಾರೆ. ಇದಕ್ಕೆ ಸೂಕ್ತ ಉದಾಹರಣೆ ಎಂದರೆ ಕನಕಗಿರಿಯಲ್ಲಿ ನಡೆದ ಪ್ರಕರಣ.ಬೆಂಗಳೂರಿನ ಸುನಿಲ್, ಟಿ.ಡಬ್ಲೂ.ಡಿ. ಸಂಸ್ಥೆಯ ಜಾನಪಾಲ್, ವೈ. ಜಾನಪಾಲ್, ಪಾಸ್ಟರ್ ಸಾಲೋಮನ್ ಅವರು ಪಿಡಬ್ಲೂಡಿಯ ರಾಜೇಶ ವಸ್ತ್ರದ ಅವರ ಸಹಾಯದಿಂದ ಗ್ರಾಮದ ಶ್ರೀಮಂತರ ಮನೆತನ ಹೆಣ್ಣು ಮಗಳಿಗೆ ಸಂಮೋಹನ ಮಾಡಿ ವಂಚಿಸಿದ್ದರು.ಇದು ಜನರ ನೆನಪಿನಿಂದ ಅಳಿಯುವ ಮುನ್ನವೇ ಅನಿಲ್‌ಕುಮಾರ್ ಮತ್ತವರ ತಂಡ ಚೀಯೂನ್ ಹಬ್ಬದ ನೆಪದಲ್ಲಿ ಶ್ರೀರಾಮನಗರದಲ್ಲಿ ಅಸಹಾಯಕ ಬಡವರನ್ನು ಮತಾಂತರ ಪ್ರಕ್ರಿಯೆಗೆ ಒಳಪಡಿಸುತ್ತಿದ್ದಾರೆ ಎಂದು ಸಂಘಟಕರು ಆರೋಪಿಸಿದರು.ವೇದಿಕೆಯಲ್ಲಿ ಹಣ, ಬಟ್ಟೆ, ಗ್ರಹೋಪಯೋಗಿ ವಸ್ತು ಕಾಣಿಕೆಯಾಗಿ ನೀಡುವುದನ್ನು ತಡೆಯಬೇಕು, ಹಿಂದು ಧರ್ಮದ ಅವಹೇಳನ ಸಲ್ಲ. ಪವಾಡದಂತ ಕಾರ್ಯ ಕೈಬಿಡಬೇಕು, ಮತಾಂತರಕ್ಕೆ ಪ್ರಚೋದಿಸುವುದು ಕೈಬಿಡುವಂತೆ ಒತ್ತಾಯಿಸಲಾಯಿತು.ಈ ಸಂದರ್ಭದಲ್ಲಿ ಸಂಘಟನೆಯ ಜಿಲ್ಲಾ ಸಂಚಾಲಕ ಅಯ್ಯನಗೌಡ ಹೇರೂರು, ಸಹ ಸಂಚಾಲಕ ನೀಲಕಂಠಪ್ಪ ನಾಗಶೆಟ್ಟಿ, ಜಗದೀಶ ಹೇರೂರು, ಸಿದ್ದರಾಮಗೌಳಿ, ಶಿವು ಅರಿಕೇರಿ, ಮಲ್ಲಿಕಾರ್ಜುನ, ಮದನಕುಮಾರ, ಸಂದೇಶ ಕುಮಾರ, ಚಂದ್ರು ಇತರರಿದ್ದರು. 

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.