ಸೋಮವಾರ, ಜೂನ್ 21, 2021
29 °C
ಯುಎಇನಲ್ಲಿ ಐಪಿಎಲ್‌ ಟೂರ್ನಿ

ಕ್ರೀಡಾಂಗಣಗಳ ಬಗ್ಗೆ ಬಿಸಿಸಿಐ ಮೆಚ್ಚುಗೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ನವದೆಹಲಿ (ಪಿಟಿಐ): ಇಂಡಿಯನ್‌ ಪ್ರೀಮಿಯರ್‌ ಲೀಗ್‌ (ಐಪಿಎಲ್‌) ಏಳನೇ ಆವೃತ್ತಿಯ ಟೂರ್ನಿಯ ಮೊದಲ 20 ಪಂದ್ಯಗಳ ಆತಿಥ್ಯ ವಹಿಸಿರುವ ಯುನೈಟೆಡ್‌ ಅರಬ್‌ ಎಮಿರೇಟ್ಸ್‌ನ (ಯುಎಇ) ಮೂರು ಕ್ರೀಡಾಂಗಣಗಳನ್ನು ಬಿಸಿಸಿಐ ಅಧಿಕಾರಿಗಳ ತಂಡ ಪರಿಶೀಲಿಸಿದ್ದು,  ಅಲ್ಲಿನ ಸೌಕರ್ಯಗಳ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದೆ.ಬಿಸಿಸಿಐ ಜನರಲ್‌ ಮ್ಯಾನೇಜರ್‌ (ಕ್ರಿಕೆಟ್‌ ವ್ಯವಹಾರ) ಎಂ.ವಿ.ಶ್ರೀಧರ್‌ ಮತ್ತು ಕ್ಯೂರೇಟರ್‌ ವಿಶ್ವನಾಥನ್‌ ಅವರನ್ನೊಳಗೊಂಡ ತಂಡ ಶುಕ್ರವಾರ ಮತ್ತು ಶನಿವಾರ ಅಬುಧಾಬಿಯ ಜಾಯೇದ್‌ ಕ್ರೀಡಾಂಗಣ,ಶಾರ್ಜಾ ಕ್ರೀಡಾಂಗಣ ಮತ್ತು ದುಬೈ ಅಂತರರಾಷ್ಟ್ರೀಯ ಕ್ರೀಡಾಂಗಣಗಳಿಗೆ ಭೇಟಿ ನೀಡಿ ಪರಿಶೀಲನೆ ನಡೆಸಿತು.‘ಪಂದ್ಯಗಳು ನಡೆಯುವ ಕ್ರೀಡಾಂಗಣಗಳಲ್ಲಿರುವ ಸೌಲಭ್ಯಗಳು ತೃಪ್ತಿದಾಯಕವಾಗಿವೆ.   ಕ್ರೀಡಾಂಗಣ ಗಳಲ್ಲಿರುವ ಪಿಚ್‌ ಅತ್ಯುತ್ತಮ ಗುಣಮಟ್ಟದಿಂದ ಕೂಡಿದೆ’  ಎಂದು ಶ್ರೀಧರ್‌ ತಿಳಿಸಿದ್ದಾರೆ.‘ಪಂದ್ಯಗಳು ಜರುಗುವ ಕ್ರೀಡಾಂಗಣಗಳ ಪರಿಸ್ಥಿತಿ, ಪಿಚ್‌ಗಳ ಗುಣಮಟ್ಟ ಮತ್ತು ಅಭ್ಯಾಸಕ್ಕೆ ಬೇಕಿರುವ ಅಗತ್ಯ ಸೌಕರ್ಯಗಳನ್ನು ಪರಿಶೀಲಿಸುವ ಉದ್ದೇಶದಿಂದ ಅಧಿಕಾರಿಗಳ ತಂಡ ಯುಎಇಗೆ ಭೇಟಿ ನೀಡಿತ್ತು’ ಎಂದು ಬಿಸಿಸಿಐ ಕಾರ್ಯದರ್ಶಿ ಸಂಜಯ್‌ ಪಟೇಲ್‌ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.ಈ ಇಬ್ಬರು ಅಧಿಕಾರಿಗಳ ತಂಡ ಟೂರ್ನಿಯಲ್ಲಿ ಪಾಲ್ಗೊಳ್ಳುವ ಎಂಟೂ ತಂಡಗಳ ತರಬೇತಿಯ ವೇಳಾಪಟ್ಟಿಯನ್ನು ಸಿದ್ಧಪಡಿಸಲಿದೆ.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.