ಗುರುವಾರ , ಜನವರಿ 23, 2020
23 °C

ಕ್ರೀಡೆಗೂ ಮಹತ್ವ ನೀಡಿ: ಶಿವಶಂಕರ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಹುಮನಾಬಾದ್: ವಿದ್ಯಾರ್ಥಿಗಳು ಓದಿನಷ್ಟೆ ಮಹತ್ವ ಕ್ರೀಡೆಗೂ ನೀಡ­ಬೇಕು. ಹೆಚ್ಚು ಶ್ರಮ ಬೇಡುವ ಕ್ರೀಡೆಯಲ್ಲಿ ಪಾಲ್ಗೊಳ್ಳುವುದಕ್ಕೆ ಸಾಧ್ಯ­ವಾಗದಿದ್ದರೆ ಪ್ರತಿಯೊಬ್ಬ ವಿದ್ಯಾರ್ಥಿ­ಕನಿಷ್ಠ ಓಟದಲ್ಲಾದರೂ ಕಡ್ಡಾಯ­ವಾಗಿ ಭಾಗವಹಿಸಬೇಕು ಎಂದು ಲಕ್ಷ್ಮಿವೆಂಕಟೇಶ್ವರ ಬಾಲಭಾರತಿ ವಿದ್ಯಾಮಂದಿರ ಕಾರ್ಯದರ್ಶಿ ಶಿವಶಂಕರ ತರನಳ್ಳಿ ಹೇಳಿದರು.ಸಂಸ್ಥೆಯ ವಾರ್ಷಿಕೋತ್ಸವ ಅಂಗ­ವಾಗಿ ಈಚೆಗೆ ಏರ್ಪಡಿಸಿದ್ದ ಶಾಲಾ ಮಟ್ಟದ ಕ್ರೀಡಾಸ್ಪರ್ಧೆ ಉದ್ಘಾಟನಾ ಸಮಾರಂಭದಲ್ಲಿ ಅಧ್ಯಕ್ಷತೆ ವಹಿಸಿ, ಮಾತನಾಡಿದರು.ತಾಲ್ಲೂಕು ದೈಹಿಕ ಶಿಕ್ಷಕರ ಸಂಘದ ಉಪಾಧ್ಯಕ್ಷ ಉಮಾಕಾಂತ ಕುಂಬಾರ ಮಾತನಾಡಿ, ಮನುಷ್ಯನಿಗೆ ಆಹಾರ­ದಷ್ಟೇ ಕ್ರೀಡೆಮುಖ್ಯ. ಈ ಭಾಗ­ದವರಲ್ಲಿ ಇರುವ ಹಿಂದುಳಿದವರು ಎಂಬ ಮನೋಭಾವನೆ ಹೊಡೆದೋಡಿ­ಸಲು ರಾಜ್ಯ ಹಾಗೂ ರಾಷ್ಟ್ರ ಮಟ್ಟದ ಸ್ಪರ್ಧೆಯಲ್ಲಿ ಭಾಗವಹಿಸಿ, ಯಾರಿಗೂ ಕಮ್ಮಿಯಲ್ಲ ಎಂಬುದನ್ನು ಸಾಬೀತು­ಪಡಿಸಬೇಕು ಎಂದು ತಿಳಿಸಿದರು.ಸಬ್‌ ಇನ್‌ಸ್ಪೆಕ್ಟರ್‌ ಎಲ್‌.ಬಿ ಅಗ್ನಿ ಸ್ಪರ್ಧೆ ಉದ್ಘಾಟಿಸಿದರು. ಸಂಸ್ಥೆಯ ನಿರ್ದೇಶಕ ನಾರಾಯಣರಾವ ಚಿದ್ರಿ ಮಾತನಾಡಿ, ’ಊಟ ಬಲ್ಲವನಿಗೆ ರೋಗವಿಲ್ಲ. ’ಮಾತು ಬಲ್ಲವನಿಗೆ ಜಗಳವಿಲ್ಲ’ ಎಂಬ ಹಿರಿಯರ ಮಾತನ್ನು ವಿದ್ಯಾರ್ಥಿಗಳು ಜೀವನ­ದಲ್ಲಿ ಮರೆಯ­ಬಾರದು ಎಂದರು.ಪ್ರೌಢಶಾಲೆ ಮುಖ್ಯಶಿಕ್ಷಕ ಕೆ.ಕೆ ಯರಂತೇಲಿ ಮಠ್‌, ಪ್ರಾಥಮಿಕ ವಿಭಾಗದ ಅಶೋಕಕುಮಾರ ವಡ್ಡನಕೇರಿ ಇದ್ದರು.

ದಿಲೀಪಕುಮಾರ ಗಾಯಕವಾಡ ನಿರೂಪಿಸಿದರು. ಉದಯಕುಮಾರ ಕಲ್ಲೂರ ವಂದಿಸಿದರು.

ಪ್ರತಿಕ್ರಿಯಿಸಿ (+)