ಶನಿವಾರ, ಜನವರಿ 18, 2020
23 °C

ಕ್ಲಾಸಿಕ್‌ ಚೆಸ್‌ ಟೂರ್ನಿ: ಅಭಿಜಿತ್‌ ಗುಪ್ತಾಗೆ ನಿರಾಸೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಲಂಡನ್‌ (ಪಿಟಿಐ): ಮಾಜಿ ವಿಶ್ವ ಜೂನಿಯರ್‌ ಚಾಂಪಿಯನ್‌ ಅಭಿಜಿತ್‌ ಗುಪ್ತಾ ಇಲ್ಲಿ ನಡೆಯುತ್ತಿರುವ ಲಂಡನ್‌ ಕ್ಲಾಸಿಕ್ ಚೆಸ್‌ ಟೂರ್ನಿಯ ಓಪನ್‌ ವಿಭಾಗದಲ್ಲಿ ಸೋಲು ಕಂಡಿದ್ದು ಏಳನೇ ಸ್ಥಾನ ಪಡೆದಿದ್ದಾರೆ.ಸೋಮವಾರ ನಡೆದ ಪಂದ್ಯದಲ್ಲಿ ಗ್ರ್ಯಾಂಡ್‌ಮಾಸ್ಟರ್‌ ಅಭಿಜಿತ್‌ ನಾರ್ವೆಯ ಜಾನ್ ಲುಡ್ವಿಗ್‌ ಹ್ಯಾಮರ್‌ ಎದುರು ಪರಾಭವಗೊಂಡರು. ಭಾರತದ ತಾನಿಯಾ ಸಚದೇವ್‌, ಇಶಾ ಕಾರ್ವಾಡೆ ಕೂಡ ನಿರಾಸೆ ಮೂಡಿಸಿದರು.ಈ ಟೂರ್ನಿಯ ಪ್ರೀಮಿಯರ್‌ ವಿಭಾಗದಲ್ಲಿ ಸ್ಪರ್ಧಿಸಿದ್ದ ಮಾಜಿ ವಿಶ್ವ ಚಾಂಪಿಯನ್‌ ವಿಶ್ವನಾಥನ್‌ ಆನಂದ್‌ ಅವರು ಕ್ವಾರ್ಟರ್‌ ಫೈನಲ್‌ನಲ್ಲಿ ಸೋಲು ಕಂಡಿದ್ದರು.

ಪ್ರತಿಕ್ರಿಯಿಸಿ (+)