ಶನಿವಾರ, ಮೇ 28, 2022
25 °C

ಕ್ವಾರ್ಟರ್ ಫೈನಲ್‌ಗೆ ಜ್ವಾಲಾ- ದಿಜು

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಸಿಂಗಪುರ (ಐಎಎನ್‌ಎಸ್): ಭಾರತದ ಜ್ವಾಲಾ ಗುಟ್ಟಾ ಮತ್ತು ವಿ. ದಿಜು ಜೋಡಿ ಇಲ್ಲಿ ನಡೆಯುತ್ತಿರುವ ಸಿಂಗಪುರ ಓಪನ್ ಸೂಪರ್ ಸೀರಿಸ್ ಬ್ಯಾಡ್ಮಿಂಟನ್ ಟೂರ್ನಿಯ ಮಿಶ್ರ ಡಬಲ್ಸ್ ವಿಭಾಗದ ಕ್ವಾರ್ಟರ್ ಫೈನಲ್ ಪ್ರವೇಶಿಸಿತು.ಆರನೇ ಶ್ರೇಯಾಂಕ ಹೊಂದಿರುವ ಭಾರತದ ಜೋಡಿ ಗುರುವಾರ ನಡೆದ ಎರಡನೇ ಸುತ್ತಿನ ಪಂದ್ಯದಲ್ಲಿ 21-15, 21-15 ರಲ್ಲಿ ಮಲೇಷ್ಯದ ಅಯಿಕ್ ಕುವಾನ್ ತಾನ್ ಮತ್ತು ಪಿ ಜಿಂಗ್ ಲಾಯ್ ವಿರುದ್ಧ ಗೆಲುವು ಪಡೆಯಿತು.

ಆದರೆ ಜ್ವಾಲಾ ಅವರು ಮಹಿಳೆಯರ ಡಬಲ್ಸ್ ವಿಭಾಗದಲ್ಲಿ ನಿರಾಸೆ ಅನುಭವಿಸಿದರು. ಜ್ವಾಲಾ ಮತ್ತು ಅಶ್ವಿನಿ ಪೊನ್ನಪ್ಪ ಜೋಡಿ 15-21, 20-22 ರಲ್ಲಿ ಇಂಡೊನೇಷ್ಯದ ಮೆಲಿಯಾನ ಜೌಹರಿ ಹಾಗೂ ಗ್ರೇಸಿಯಾ ಪೊಲಿ ಎದುರು ಪರಾಭವಗೊಂಡಿತು.ಪುರುಷರ ಸಿಂಗಲ್ಸ್ ವಿಭಾಗದ ಎರಡನೇ ಸುತ್ತಿನ ಪಂದ್ಯದಲ್ಲಿ ಅಜಯ್ ಜಯರಾಮನ್ 15-21, 14-21 ರಲ್ಲಿ ವಿಯೆಟ್ನಾಂನ ತಿಯಾನ್ ಮಿನ್ ನುಯೆನ್ ಕೈಯಲ್ಲಿ ಸೋಲು ಅನುಭವಿಸಿದರು. ಭಾರತದ ಇನ್ನೊಬ್ಬ ಆಟಗಾರ ಪಿ. ಕಶ್ಯಪ್ ಮೊದಲ ಸುತ್ತಿನಲ್ಲೇ ಮುಗ್ಗರಿಸಿದ್ದರು. ಆನಂದ್ ಪವಾರ್ 19-21, 17-21 ರಲ್ಲಿ ಡೆನ್ಮಾರ್ಕ್‌ನ ವಿಕ್ಟರ್ ಅಕ್ಸೆಲ್‌ಸನ್ ಎದುರು ಸೋಲು ಅನುಭವಿಸಿದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.