ಮೆಲ್ಬರ್ನ್ (ಪಿಟಿಐ): ಸಾನಿಯಾ ಮಿರ್ಜಾ ಇಲ್ಲಿ ನಡೆಯುತ್ತಿರುವ ಆಸ್ಟ್ರೇಲಿಯನ್ ಓಪನ್ ಟೆನಿಸ್ ಟೂರ್ನಿಯ ಮಹಿಳೆಯರ ಡಬಲ್ಸ್ ಮತ್ತು ಮಿಶ್ರ ಡಬಲ್ಸ್ ವಿಭಾಗದ ಕ್ವಾರ್ಟರ್ ಫೈನಲ್ ಪ್ರವೇಶಿಸಿದರು.

ಮಿಶ್ರ ಡಬಲ್ಸ್ ವಿಭಾಗದ ಎರಡನೇ ಸುತ್ತಿನ ಪಂದ್ಯದಲ್ಲಿ ಸೋಮವಾರ ಸಾನಿಯಾ- ಮಹೇಶ್ ಭೂಪತಿ 3-6, 6-4, 12-10 ರಲ್ಲಿ ಜೆಕ್ ಗಣರಾಜ್ಯದ ಇವೆಟಾ ಬೆನೆಸೋವಾ ಮತ್ತು ಆಸ್ಟ್ರಿಯದ ಜರ್ಗನ್ ಮೆಲ್ಜರ್ ಅವರನ್ನು ಮಣಿಸಿದರು. ಭಾರತದ ಜೋಡಿ 2009 ರಲ್ಲಿ ಇಲ್ಲಿ ಪ್ರಶಸ್ತಿ ಜಯಿಸಿತ್ತು.

ಮೊದಲ ಸೆಟ್ನಲ್ಲಿ ಸೋಲು ಅನುಭವಿಸಿದರೂ ಮರುಹೋರಾಟ ನಡೆಸಿದ ಆರನೇ ಶ್ರೇಯಾಂಕದ ಸಾನಿಯಾ- ಭೂಪತಿ ಒಂದು ಗಂಟೆ 11 ನಿಮಿಷಗಳ ಸೆಣಸಾಟದ ಬಳಿಕ ಗೆಲುವಿನ ನಗು ಬೀರಿದರು.

ಇದಕ್ಕೂ ಮುನ್ನ ಸಾನಿಯಾ ಮಹಿಳೆಯರ ಡಬಲ್ಸ್ ವಿಭಾಗದಲ್ಲಿ ಎಂಟರಘಟ್ಟ ಪ್ರವೇಶಿಸಿದ್ದರು. ರಷ್ಯಾದ ಎಲೆನಾ ವೆಸ್ನಿನಾ- ಸಾನಿಯಾ 7-5, 6-3 ರಲ್ಲಿ ಆಸ್ಟ್ರೇಲಿಯಾದ ಜರ್ಮಿಲಾ ಗಜೊಸೋವಾ ಹಾಗೂ ಅಮೆರಿಕದ ಬೆಥನಿ ಮಟೆಕ್ ಅವರನ್ನು ಸೋಲಿಸಿದರು.

ರೋಹನ್ ಬೋಪಣ್ಣ ಮತ್ತು ಅಮೆರಿಕದ ಲೀಸಾ ರೇಮಂಡ್ ಮಿಶ್ರ ಡಬಲ್ಸ್ ವಿಭಾಗದ ಎಂಟರಘಟ್ಟ ಪ್ರವೇಶಿಸಿದರು. ಅವರು 6-4, 6-2 ರಲ್ಲಿ ಆಸ್ಟ್ರೇಲಿಯಾದ ಕ್ಯಾಸೆ ಡೆಲಾಕ್ವ- ಮ್ಯಾಥ್ಯೂ ಎಡೆನ್ ವಿರುದ್ಧ ಜಯ ಪಡೆದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.