ಬೆಂಗಳೂರು: ಹದಿಹರೆಯದ ಆಟಗಾರ ಮಾನಸ್ ಧಾಮ್ನೆ ಅವರು ಬೆಂಗಳೂರು ಓಪನ್ ಟೆನಿಸ್ ಟೂರ್ನಿಯ ಮೊದಲ ದಿನವಾದ ಸೋಮವಾರ ಐದನೇ ಶ್ರೇಯಾಂಕದ ಕ್ರೊವೇಷ್ಯಾ ಆಟಗಾರ ಮಾತೈ ದೊಡಿಗ್ ಅವರಿಗೆ ಮೂರು ಸೆಟ್ಗಳ ಹಣಾಹಣಿಯಲ್ಲಿ ಆಘಾತ ನೀಡಿದರು.

ವೈಲ್ಡ್ಕಾರ್ಡ್ ಮೂಲಕ ಪ್ರವೇಶ ಪಡೆದಿದ್ದ ಪುಣೆಯ ಆಟಗಾರನಿಗೆ ಇದು ವೃತ್ತಿಜೀವನದ ದೊಡ್ಡ ಗೆಲುವು ಎನಿಸಿತು. 18 ವರ್ಷ ವಯಸ್ಸಿನ ಧಾಮ್ನೆ ಒತ್ತಡ ನಿಭಾಯಿಸಿಕೊಂಡು ವಿಶ್ವಕ್ರಮಾಂಕದಲ್ಲಿ 231ನೇ ಸ್ಥಾನದಲ್ಲಿರುವ ಆಟಗಾರನನ್ನು 7–5, 4–6, 6–1 ರಿಂದ ಸೋಲಿಸಿ ಎರಡನೇ ಸುತ್ತು ಪ್ರವೇಶಿಸಿದರು. ಕಳೆದ ವರ್ಷ ಧಾಮ್ನೆ ಈ ಟೂರ್ನಿಯ ಮೊದಲ ಸುತ್ತಿನಲ್ಲೇ ನಿರ್ಗಮಿಸಿದ್ದರು.

ಹೋದ ವರ್ಷ ಗಾಯದ ಸಮಸ್ಯೆಗಳಿಂದ ಬಳಲಿದ್ದ ಭಾರತದ ಅಗ್ರ ಸಿಂಗಲ್ಸ್ ಆಟಗಾರ ಸುಮಿತ್ ನಾಗಲ್ ಮೊದಲ ಸುತ್ತಿನಲ್ಲಿ 6–3, 6–2 ರಿಂದ ಕರ್ನಾಟಕದ ಎಸ್.ಡಿ.ಪ್ರಜ್ವಲ್ ದೇವ್ ಅವರನ್ನು ಸುಲಭವಾಗಿ ಸೋಲಿಸಿದರು. ಇದು ಮೂರು ತಿಂಗಳಲ್ಲಿ ನಾಗಲ್ ಆಡಿದ ಮೊದಲ ಪಂದ್ಯವಾಗಿದ್ದು, ಚುರುಕಿನ ಚಲನೆಯಿಂದ ಅವರ ಫಿಟ್ ಆಗಿರುವುದು ಎದ್ದುಕಂಡಿತು.

ಪಂದ್ಯದ ಮೊದಲ ಗೇಮ್ನಲ್ಲೇ ನಾಗಲ್ ಸರ್ವ್ ಕಳೆದುಕೊಂಡಿದ್ದರು. ಆದರೆ ಅದರಿಂದೇನೂ ಪರಿಣಾಮ ಆಗಲಿಲ್ಲ. ತಕ್ಷಣ ಲಯಕ್ಕೆ ಮರಳಿದ ಅವರು ಗುಣಮಟ್ಟದ ಆಟ ಮತ್ತು ಬಿರುಸಿನ ಸರ್ವ್ಗಳನ್ನು ಮಾಡಿದರು. ಅವರಿಗೆ ಮೈಸೂರಿನ ಆಟಗಾರ ಸಾಟಿಯಾಗಲಿಲ್ಲ.

ಇದಕ್ಕೆ ಮೊದಲು, ಮೂರನೇ ಶ್ರೇಯಾಂಕ ಆಟಗಾರನಾದ ಬ್ರಿಟನ್ನ ಜೇ ಕ್ಲರ್ಕ್ ಅವರಿಗೆ 6–4, 1–6, 2–6 ರಿಂದ ಆಘಾತ ನೀಡಿದ ಫ್ರಾನ್ಸ್ನ ಮ್ಯಾಟಿಯೊ ಮಾರ್ಟಿನು ಅವರೂ ಎರಡನೇ ಸುತ್ತಿಗೆ ಮುನ್ನಡೆದರು.

ಭಾರತದ ಆಟಗಾರ ಇದ್ದ ಮುಖ್ಯ ಡ್ರಾದ ಮೊದಲ ಪಂದ್ಯದಲ್ಲಿ ಧಾಮ್ನೆ ಅವರ ಆಟ ಎದ್ದುಕಂಡಿತು. ಅವರು ಚುರುಕಾದ ಚಲನೆ, ಕೋರ್ಟ್ನುದ್ದಕೂ ಓಡಾಡಿ, ದೊಡಿಗ್ ಅವರ ಭರ್ಜರಿ ಸರ್ವ್ಗಳನ್ನು ನಿಭಾಯಿಸಿದರು. ಕ್ರೊವೇಷ್ಯಾದ ಆಟಗಾರನಿಗೆ ಸ್ಥಿರವಾದ ಆಟ ಕಂಡುಕೊಳ್ಳಲಾಗಲಿಲ್ಲ.

ಇಟಲಿಯ ಪಿಯಾಟಿ ಟೆನಿಸ್ ಸೆಂಟರ್ ನಲ್ಲಿ ಸುಮಾರು ಐದು ವರ್ಷಗಳಿಂದ ತರಬೇತಿಯಲ್ಲಿರುವ ಧಾಮ್ನೆ ಅವರ ಬ್ಯಾಕ್ಹ್ಯಾಂಡ್ ಹೊಡೆತಗಳು ಪರಿಣಾಮಕಾರಿ ಎನಿಸಿದವು. ದೊಡಿಗ್ ಅವರಿಗೆ ಲಯಕಂಡುಕೊಳ್ಳಲು ಭಾರತದ ಆಟಗಾರ ಅವಕಾಶ ನೀಡಲಿಲ್ಲ.

ರಷ್ಯಾದ ಪೀಟರ್ ಬರ್ ಬಿರ್ಯುಕೋವ್ (ಎಟಿಪಿ) ಇನ್ನೊಂದು ಪಂದ್ಯದಲ್ಲಿ ಎರಡನೇ ಶ್ರೇಯಾಂಕದ ಹೆರಾಲ್ಡ್ ಮಾಯೊಟ್ (ಫ್ರಾನ್ಸ್) ಅವರಿಗೆ 7–6 (4), 5–7, 4–6 ರಲ್ಲಿ ಮಣಿದರು.

ಕೆನಡಾದ ಡ್ಯಾನ್ ಮಾರ್ಟಿನ್ 6–7 (7–4), 7–5, 6–4 ರಿಂದ ಉಕ್ರೇನ್ನ ವ್ಲಾಡಿಸ್ಲಾವ್ ಒರ್ಲೋವ್ ಅವರನ್ನು ಸೋಲಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.