ದಾವಣಗೆರೆ: `ಕ್ಷಣಿಕ ಸುಖಕ್ಕಾಗಿ ದುಸ್ಸಾಹಸಕ್ಕೆ ಕೈ ಹಾಕಿ, ಏಡ್ಸ್ಗೆ ಬಲಿಯಾಗದಿರಿ~ ಎಂದು ಜಿಲ್ಲಾ ಪಂಚಾಯ್ತಿ ಮುಖ್ಯ ಕಾರ್ಯ ನಿರ್ವಹಣಾಧಿಕಾರಿ ಗುತ್ತಿ ಜಂಬುನಾಥ್ ಕರೆ ನೀಡಿದರು.

ನಗರದ ಚಿಗಟೇರಿ ಸಾರ್ವಜನಿಕ ಆಸ್ಪತ್ರೆಯಲ್ಲಿ ಗುರುವಾರ ಜಿಲ್ಲಾಡಳಿತ, ಜಿ.ಪಂ. ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ, ಜಿಲ್ಲಾ ಏಡ್ಸ್ ಪ್ರತಿಬಂಧಕ ಮತ್ತು ನಿಯಂತ್ರಣ ಘಟಕ, ವಿವಿಧ ಸ್ವಯಂಸೇವಾ ಸಂಸ್ಥೆಗಳ ಆಶ್ರಯದಲ್ಲಿ ನಡೆದ `ಏಡ್ಸ್ ಯುವ ಜಾಗೃತಿ ಆಂದೋಲನ: ಒಂದೇ ಹೆಜ್ಜೆ~ ಸಮಾರೋಪದಲ್ಲಿ ಅವರು ಮಾತನಾಡಿದರು.

ಸಂಯಮ ಮೀರಿದ ಸ್ಥಿತಿ, ಮೋಹದಿಂದ ಮನುಷ್ಯ ಕ್ಷಣಿಕ ಸುಖ ಪಡೆಯಲು ದುಸ್ಸಾಹಸ ಮಾಡುತ್ತಾನೆ. ಆದರೆ, ಇದರಿಂದ ಏಡ್ಸ್ಗೆ ಬಲಿಯಾಗಿ ಜೀವನವನ್ನೇ ಕೊನೆಗಾಣಿಸಿಕೊಳ್ಳುತ್ತಾನೆ. ದೇಶಕ್ಕೆ ಉಕ್ಕಿನ ನರ, ಮಾಂಸಖಂಡದ ಯುವಜನರ ಅಗತ್ಯವಿದೆ. ಭಗವದ್ಗೀತೆ ಓದುವುದಕ್ಕಿಂತ ಪುಟ್ಬಾಲ್ ಆಡುವುದು ಲೇಸು ಎಂಬ ಸ್ವಾಮಿ ವಿವೇಕಾನಂದರ ಮಾತು ಪ್ರಸ್ತುತ ಎಂದರು.

ಎಆರ್ಟಿ ಕೇಂದ್ರದ ವೈದ್ಯಾಧಿಕಾರಿ ಡಾ.ಕಠಾರಿ, ಪಾಲಿಕೆ ಮೇಯರ್ ಎಚ್.ಎನ್. ಗುರುನಾಥ್, ಜಿ.ಪಂ. ಉಪಾಧ್ಯಕ್ಷೆ ಪ್ರೇಮಾ ಸಿದ್ದೇಶ್, ಆರೋಗ್ಯ ಮತ್ತು ಶಿಕ್ಷಣ ಸ್ಥಾಯಿ ಸಮಿತಿ ಅಧ್ಯಕ್ಷೆ ಸುಧಾ ವೀರೇಂದ್ರ ಪಾಟೀಲ್ ಮಾತನಾಡಿದರು. ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ.ಬಿ.ಆರ್. ಸುಮಿತ್ರಾ ದೇವಿ ಅಧ್ಯಕ್ಷತೆ ವಹಿಸಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.