ಕುಷ್ಟಗಿ: ಉದ್ಯೋಗ ಖಾತರಿ ಯೋಜನೆಯಲ್ಲಿ ಸಸಿ ನಾಟಿ ಮಾಡುವ ನೆಪದಲ್ಲಿ ಸಾಮಾಜಿಕ ಅರಣ್ಯ ಇಲಾಖೆಯಲ್ಲಿ ಭಾರಿ ಪ್ರಮಾಣದಲ್ಲಿ ಹಣ ದುರುಪಯೊಗ ನಡೆದಿದ್ದು ಸಂಬಂಧಿಸಿದ ಅಧಿಕಾರಿಗಳ ಮೇಲೆ ಶಿಸ್ತಿನ ಕ್ರಮಕ್ಕೆ ಜಿಲ್ಲಾ ಅರಣ್ಯಾಧಿಕಾರಿಗೆ ಪತ್ರ ಬರೆಯಲು ಮಂಗಳವಾರ ಇಲ್ಲಿ ನಡೆದ ತ್ರೈಮಾಸಿಕ ಕೆಡಿಪಿ ಸಭೆ ನಿರ್ಧರಿಸಿತು.

ವಿಷಯ ಪ್ರಸ್ತಾಪಿಸಿದ ಶಾಸಕ ಅಮರೇಗೌಡ ಬಯ್ಯಾಪೂರ, ಮಳೆ ಇಲ್ಲ, ನೀರಿಲ್ಲದಿದ್ದರೂ ಇಲಾಖೆ ಲಕ್ಷಗಟ್ಟಲೇ ಸಸಿ ನಾಟಿ ಮಾಡಿರುವುದನ್ನು ದಾಖಲಿಸಿದ್ದು ಬಂದಿರುವ ಮಾಹಿತಿ ಪ್ರಕಾರ ಶೇ 70ರಷ್ಟು ಹಣ ಪೋಲಾಗಿರುವ ಸಾಧ್ಯತೆ ಹಿನ್ನೆಲೆಯಲ್ಲಿ ತನಿಖೆ ನಡೆಸುವುದು ಅವಶ್ಯವಾಗಿದೆ ಎಂದರು. ಅಲ್ಲದೇ ರಸ್ತೆ ಬದಿ ಸಸಿಗಳನ್ನು ನಾಟಿ ಮಾಡಿದರೂ ನಿರ್ವಹಣೆ ಇಲ್ಲದೇ ಇಲಾಖೆ ಪ್ರಯತ್ನ ನೀರಿನಲ್ಲಿ ಹೋಮ ಮಾಡಿದಂತಾಗಿದೆಯಲ್ಲ ಎಂದು ಆಕ್ಷೇಪಿಸಿದರು.

ಗುರುಗಳೇ ಗುಳುಂ: ಸಮಾಜಕಲ್ಯಾಣ ಇಲಾಖೆ ಪ.ಜಾ/ಪ.ಪಂದ ವಿದ್ಯಾರ್ಥಿಗಳಿಗೆ ಮಂಜೂರು ಮಾಡುವ ಶಿಷ್ಯವೇತನವನ್ನು ಗುರುಗಳೇ ದುರುಪಯೋಗಪಡಿಸಿಕೊಳ್ಳುತ್ತಿರುವ ಬಗ್ಗೆ ಸಾಕಷ್ಟು ದೂರುಗಳಿವೆ, ಈ ಬಗ್ಗೆ ಗಮನಹರಿಸುವಂತೆ ಕ್ಷೇತ್ರ ಶಿಕ್ಷಣಾಧಿಕಾರಿಗೆ ಸೂಚನೆ ನೀಡಿದ ಶಾಸಕ, ಜನಸ್ಪಂದನ ಸಭೆಗೆ ಗೈರು ಹಾಜರಾದ ಬಿ.ಇ.ಒ ಅವರನ್ನು ತರಾಟೆಗೆ ತೆಗೆದುಕೊಂಡು, ಮಕ್ಕಳ ಶೈಕ್ಷಣಿಕ ಭವಿಷ್ಯ ಹಾಳು ಮಾಡುತ್ತಿದ್ದೀರಿ ಎಂದರು.

ಸಮಸ್ಯೆ ಇಲ್ಲವೆ?: ಹಳ್ಳಿಗಳಲ್ಲಿ ಕುಡಿಯುವ ನೀರು, ರಸ್ತೆ, ವಿದ್ಯುತ್ ಹೀಗೆ ಯಾವುದೇ ಸಮಸ್ಯೆಗಳಿದ್ದರೆ ಪರಿಹಾರಕ್ಕೆ ಯತ್ನಿಸೋಣ, ಪತ್ರದ ಮೂಲಕ ತಮ್ಮ ಗಮನಕ್ಕೆ ತರುವಂತೆ ಪ್ರತಿನಿಧಿಗಳು, ಸಿಬ್ಬಂದಿಗೆ ಹಲವಾರು ಬಾರಿ ಹೇಳಿದ್ದೇನೆ, ಮೂರು ವರ್ಷದ ಅವಧಿಯಲ್ಲಿ ಒಬ್ಬರೂ ಪತ್ರ ಬರೆದಿಲ್ಲವೆಂದರೆ ಈ ತಾಲ್ಲೂಕಿನಲ್ಲಿ ಸಮಸ್ಯೆಗಳೇ ಇಲ್ಲವೆ? ಎಂದು ಬಯ್ಯಾಪೂರ ಪ್ರಶ್ನಿಸಿದ್ದು ಸಭೆಯಲ್ಲಿ ಅಚ್ಚರಿ ಮೂಡಿಸಿತು.

ನೀರು ಮತ್ತಿತರೆ ಸಮಸ್ಯೆಗಳ ಬಗ್ಗೆ ನಿಗಾ ವಹಿಸಲು ಪ್ರತಿ ಗ್ರಾ.ಪಂಗೆ ಒಬ್ಬ ಉಸ್ತುವಾರಿ ಅಧಿಕಾರಿಯನ್ನು ನೇಮಿಸಲಾಗಿದೆ, ಪಿಡಿಒಗಳು ದಿನವೂ ಗ್ರಾ.ಪಂಗೆ ಭೇಟಿ ನೀಡಿ ಜನರಿಂದ ಬರುವ ಸಮಸ್ಯೆಗಳಿಗೆ ಪರಿಹಾರ ಒದಗಿಸಬೇಕು. ಬಗೆಹರಿಯದ ಸಮಸ್ಯೆಗಳನ್ನು ತಮ್ಮ ಗಮನಕ್ಕೆ ತರುವಂತೆ ಕಾರ್ಯನಿರ್ವಹಣಾಧಿಕಾರಿ ಈರಣ್ಣ ವಾಲಿ ಸಿಬ್ಬಂದಿಗೆ ಸೂಚಿಸಿದರು.

ಚೆಕ್ ವಿತರಣೆ: ಕೃಷಿ ಚಟುವಟಿಕೆಯಲ್ಲಿ ನಿರತರಾಗಿದ್ದಾಗ ಹಾವಿನಿಂದ ಕಚ್ಚಿಸಿಕೊಂಡು ಮೃತರಾದ ವಣಗೇರಿಯ ಪ್ರಕಾಶ ಚೌಡ್ಕಿ, ಎಂ.ಗುಡದೂರಿನ ಅಡಿವೆಪ್ಪ ಎಂಬುವವರ ಕುಟುಂಬದವರಿಗೆ ಕೃಷಿ ಇಲಾಖೆಯಿಂದ ಸಾಮಾಜಿಕ ಭದ್ರತಾ ಯೋಜನೆಯಲ್ಲಿ ತಲಾ ರೂ 1 ಲಕ್ಷ ಮೊತ್ತದ ಚೆಕ್ಗಳನ್ನು ವಿತರಿಸಲಾಯಿತು. ತಾ.ಪಂ ಅಧ್ಯಕ್ಷೆ ಶಾಂತವ್ವ ಮೇಟಿ, ಉಪಾಧ್ಯಕ್ಷೆ ಯಲ್ಲವ್ವ ಭೋವಿ, ಸಾಮಾಜಿಕ ನ್ಯಾಯ ಸಮಿತಿ ಅಧ್ಯಕ್ಷ ಶಿವನಗೌಡ ಇತರರು ಇದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.