ಹರಪನಹಳ್ಳಿ: ಮಹಾತ್ಮಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತ್ರಿ ಯೋಜನೆ ಅಡಿ ಕಾಮಗಾರಿ ನಿರ್ವಹಿಸಿದ ಗುತ್ತಿಗೆದಾರ ಒಬ್ಬರಿಗೆ ಕಾಮಗಾರಿಗೆ ಸಂಬಂಧಿಸಿದ ಹಣ ಬಿಡುಗಡೆ ಮಾಡುವಲ್ಲಿ ಅಧಿಕಾರಿಗಳು ಅನುಸರಿಸುತ್ತಿರುವ ನಿರ್ಲಕ್ಷ್ಯಧೋರಣೆಯಿಂದ ಬೇಸತ್ತು ತಾ.ಪಂ. ಕಾರ್ಯ ನಿರ್ವಹಣಾಧಿಕಾರಿ ಕಚೇರಿಗೆ ನುಗ್ಗಿದ ಗುತ್ತಿಗೆದಾರ ವಿಷಸೇವಿಸಿ ಆತ್ಮಹತ್ಯೆ ಮಾಡಿಕೊಳ್ಳಲು ಮುಂದಾದ ಘಟನೆ ಮಂಗಳವಾರ ಪಟ್ಟಣದಲ್ಲಿ ನಡೆದಿದೆ.

ತಾಲ್ಲೂಕಿನ ಹಿರೇಮೇಗಳಗೇರಿ ಗ್ರಾ.ಪಂ. ವ್ಯಾಪ್ತಿಗೆ ಬರುವ ಲಕ್ಷ್ಮೀಪುರ ತಾಂಡಾದ ನಿವಾಸಿ ಕುಮಾರನಾಯ್ಕ ಆತ್ಮಹತ್ಯೆಗೆ ಯತ್ನಿಸಿದ ಗುತ್ತಿಗೆದಾರ. ಲಕ್ಷ್ಮೀಪುರ ತಾಂಡಾದಲ್ಲಿ ಖಾತ್ರಿ ಯೋಜನೆ ಅಡಿ 2008-09ನೇ ಸಾಲಿನಲ್ಲಿ ಪಂಚಾಯ್ತಿ ಎಂಜಿನಿಯರ್ ಆದೇಶದ ಮೇರೆಗೆ ಸಿಸಿ ರಸ್ತೆ, ಬಾಕ್ಸ್ ಚರಂಡಿ ನಿರ್ಮಾಣ ಸೇರಿದಂತೆ ರೂ.8 ಲಕ್ಷ ವೆಚ್ಚದಲ್ಲಿ ವಿವಿಧ ಕಾಮಗಾರಿಗಳನ್ನು ಕುಮಾರನಾಯ್ಕ ನಿರ್ವಹಿಸಿದ್ದರು ಎನ್ನಲಾಗಿದೆ.

ಕಾಮಗಾರಿ ಪೂರ್ಣಗೊಂಡ ನಂತರ ಪರಿಶೀಲನೆ ನಡೆಸಿ ನಂತರ ಹಣ ಪಾವತಿಸು ವುದಾಗಿ ಹೇಳುತ್ತಿದ್ದ ಅಧಿಕಾರಿಗಳು ಮೂರು ವರ್ಷ ಗತಿಸಿದರೂ ಹಣವನ್ನು ಬಿಡುಗಡೆ ಮಾಡುವಲ್ಲಿ ಮೀನ-ಮೇಷ ಎಣಿಸುತ್ತಿದ್ದಾರೆ. ಬಳಿಕ ಇತ್ತೀಚೆಗೆ ಆನ್ಲೈನ್ನಲ್ಲಿ ಕ್ರಿಯಾಯೋಜನೆ ರೂಪಿಸದೇ ಹಣ ನೀಡಲು ಬರುವುದಿಲ್ಲ ಎಂದು ಹೇಳುತ್ತಿದ್ದಾರೆ. ಚಿನ್ನದ ಆಭರಣ ಅಡವಿಟ್ಟು ಹಾಗೂ ಸ್ನೇಹಿತರ ಬಳಿ ಸಾಲ ತಂದು ಕಾಮಗಾರಿ ಪೂರೈಸಿದ್ದೇನೆ.

ಸಾಲದ ಮೇಲಿನ ಬಡ್ಡಿಯೂ ಬೆಟ್ಟದಷ್ಟು ಬೆಳೆದಿದೆ. ಸಾಲಗಾರರ ಕಾಟವೂ ತಾಳದೇ ಬೇಸತ್ತು ಈ ನಿರ್ಧಾರಕ್ಕೆ ಬಂದಿದ್ದೇನೆ. ಹಣ ಪಾವತಿಸಿ ಇಲ್ಲವೇ; ವಿಷಸೇವಿಸಿ ನಿಮ್ಮ ಕಣ್ಮುಂದೆಯೇ ಸಾವನ್ನಪ್ಪುತ್ತೇನೆ ಎಂದು ಇಒ ಟಿ. ಪಾಂಡ್ಯಪ್ಪ ಅವರ ಎದುರು ಟೊಮೊಟೊ ಗಿಡಕ್ಕೆ ಸಿಂಪಡಿಸುವ ಕ್ರಿಮಿನಾಶಕದ ಬಾಟಲಿಯ ಮುಚ್ಚಳಿಕೆ ಬಿಚ್ಚಲು ಮುಂದಾಗಿದ್ದಾನೆ. ಕೂಡಲೇ ಅಕ್ಕಪಕ್ಕದ ಜನರ ಓಡಿ ಬಂದು ಆತನ ಕೈಯಿಂದ ಬಾಟಲಿ ಕಿತ್ತುಕೊಂಡಿದ್ದಾರೆ.

ತಾ.ಪಂ. ಅಧ್ಯಕ್ಷೆ ಜಯಮಾಲಾ ಅವರ ಅಧ್ಯಕ್ಷತೆಯಲ್ಲಿ ಸಾಮಾಜಿಕ ನ್ಯಾಯ ಸ್ಥಾಯಿ ಸಮಿತಿ ಅಧ್ಯಕ್ಷ ಎಸ್.ಬಿ. ಹನುಮಂತಪ್ಪ ಹಾಗೂ ಕಾರ್ಯ ನಿರ್ವಹಣಾಧಿಕಾರಿ ಟಿ. ಪಾಂಡ್ಯಪ್ಪ ತುರ್ತುಸಭೆ ನಡೆಸಿದ್ದಾರೆ. ಈ ಮಧ್ಯ ಸುದ್ದಿ ಕಾಡ್ಗಿಚ್ಚಿನಂತೆ ಹರಡುತ್ತಿದ್ದಂತಿಯೇ ಸೇರಿದ ಸಾರ್ವಜನಿಕರು, ಪ್ರಗತಿಪರ ಮುಖಂಡರು ಅಧಿಕಾರಿಗಳ ಕಾರ್ಯವೈಖರಿ ವಿರುದ್ಧ ಹರಿಹಾಯ್ದಿದ್ದಾರೆ.

ಸಭೆಯ ಬಳಿಕ ಇಒ ಪಾಂಡ್ಯಪ್ಪ ಮಾತನಾಡಿ, ಘಟನೆಯ ಸವಿಸ್ತಾರ ವರದಿಯನ್ನು ಜಿ.ಪಂ.ಗೆ ಫ್ಯಾಕ್ಸ್ ಮೂಲಕ ರವಾನಿಸಲಾಗಿದೆ. ಜಿ.ಪಂ. ಮುಖ್ಯ ಕಾರ್ಯನಿರ್ವಹಣಾಧಿಕಾರಿ ವಿದೇಶ ಪ್ರವಾಸದಲ್ಲಿದ್ದಾರೆ. ಸೆ. 17ರಂದು ವಾಪಸಾಗಲಿದ್ದು, ಅವರ ಆದೇಶದ ಅನ್ವಯ ಕ್ರಮ ಕೈಗೊಳ್ಳುವುದಾಗಿ ಭರವಸೆ ನೀಡಿದ ಬಳಿಕ ಗುತ್ತಿಗೆದಾರ ಆ ಗಡುವಿನವರೆಗೂ ಕಾಯುವುದಾಗಿ ತಿಳಿಸಿದ್ದಾನೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.