ಭಾನುವಾರ, ಜೂಲೈ 12, 2020
28 °C

ಖಾಸಗಿ ಪಿಂಚಣಿಗೆ ವಿರೋಧ: 3ನೇ ದಿನಕ್ಕೆ ಧರಣಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಖಾಸಗಿ ಪಿಂಚಣಿಗೆ ವಿರೋಧ: 3ನೇ ದಿನಕ್ಕೆ ಧರಣಿ

ಕೋಲಾರ: ಖಾಸಗಿ ಪಿಂಚಣಿ ನೀತಿ ವಿರೋಧಿಸಿ ನಗರದ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಉಪನಿರ್ದೇಶಕರ ಕಚೇರಿ ಮುಂದೆ ಅಂಗನವಾಡಿ ನೌಕರರ ಸಂಘದ ಜಿಲ್ಲಾ ಶಾಖೆಯ ಸದಸ್ಯರು ನಡೆಸುತ್ತಿರುವ ಧರಣಿ ಬುಧವಾರ ಮೂರನೇ ದಿನಕ್ಕೆ ಕಾಲಿಟ್ಟಿತು.ಜನಸಮುದಾಯದ ಆರೋಗ್ಯಕ್ಕಾಗಿ ದುಡಿಯುತ್ತಿರುವ ಅಂಗನವಾಡಿ ನೌಕರರ ಹಿತರಕ್ಷಣೆಗಾಗಿ ಸರ್ಕಾರವೇ ಪಿಂಚಣಿ ಯೋಜನೆಯನ್ನು ರೂಪಿಸ ಜಾರಿಗೊಳಿಸಬೇಕು.

 

ಖಾಸಗಿ ಸಂಸ್ಥೆಗೆ ವಹಿಸಬಾರದು. ಪಿಂಚಣಿ ನಿಗದಿಯಾಗುವವರೆಗೂ ನೌಕರರನ್ನು ಕೆಲಸದಿಂದ ನಿವೃತ್ತಿಗೊಳಿಸಬಾರದು. ಪ್ರತಿಭಟನೆಯ ಹಕ್ಕನ್ನು ಮೊಟುಕುಗೊಳಿಸುವ ಆದೇಶವನ್ನು ವಾಪಸ್ ಪಡೆಯಬೇಕು ಎಂದು ಧರಣಿ ನಿರತರು ಆಗ್ರಹಿಸಿದರು.ಕಾರ್ಯಕರ್ತೆಯರ ನೇಮಕಕ್ಕೆ ಮೊದಲು ವರ್ಗಾವಣೆಗೆ ಆದ್ಯತೆ ನೀಡಬೇಕು. ಖಾಲಿ ಹುದ್ದೆಗಳನ್ನು ಕೂಡಲೇ ಭರ್ತಿ ಮಾಡಬೇಕು. ಮಾಸಿಕಸಭೆಗಳನ್ನು ನಡೆಸಬೇಕು. ನೌಕರರನ್ನು 3 ಮತ್ತು 4ನೇ ದರ್ಜೆ ನೌಕರರರೆಂದು ಪರಿಗಣಿಸಬೇಕು.

 

ಪ್ರತಿ ತಿಂಗಳ 10ನೇ ತಾರೀಖಿನೊಳಗೆ ವೇತನ ಮತ್ತು ಕಟ್ಟಡ ಬಾಡಿಗೆ ಹಣವನ್ನು ನೀಡಬೇಕು  ಎಂಬುದೂ ಸೇರಿದಂತೆ ಹಲವು ಬೇಡಿಕೆಗಳನ್ನು ಈಡೇರಿಸುವವರೆಗೂ ಧರಣಿ ನಿಲ್ಲಿಸುವುದಿಲ್ಲ ಎಂದು ಎಚ್ಚರಿಸಿದರು.ಮುಖಂಡರಾದ ಗಾಂಧಿನಗರ ನಾರಾಯಣಸ್ವಾಮಿ, ಮುನಿರಾಜಮ್ಮ, ರಾಜಮ್ಮ, ಜಯಲಕ್ಷ್ಮಿ, ಮಂಜುಳಾ, ಬಿ.ಎಸ್.ನಾಗರತ್ನಮ್ಮ, ಅನಸೂಯಮ್ಮ, ಈಶ್ವರಮ್ಮ, ರಾಜಮ್ಮ, ಜಯಮ್ಮ, ವಿಶಾಲಾಕ್ಷಿ ನೇತೃತ್ವ ವಹಿಸಿದ್ದರು.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.