ಗುರುವಾರ , ಜೂನ್ 24, 2021
25 °C

ಖಾಸಗಿ ಬಡಾವಣೆ ನಿರ್ಮಾತೃಗಳಿಗೆ ಎಚ್ಚರಿಕೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಮೈಸೂರು: ನಗರಾಭಿವೃದ್ಧಿ ಪ್ರಾಧಿಕಾರದ ನಿಯಮ ಗಳನ್ನು ಗಾಳಿಗೆ ತೂರಿರುವ ಕೆಲವು ಖಾಸಗಿ ಬಡಾವಣೆ ಗಳು ಅನುಮತಿ ನೀಡಿದ ನಿವೇಶನಗ ಳಿಗಿಂತಲೂ ಹೆಚ್ಚಿನ ನಿವೇಶನಗಳನ್ನು ಉಪ ನೋಂದಣಾ ಧಿಕಾರಿಗಳಲ್ಲಿ ನೋಂದಣಿ ಮಾಡಿಸುತ್ತಿವೆ ಎಂದು ಮುಡಾ ಅಧ್ಯಕ್ಷ ಎಲ್.ನಾಗೇಂದ್ರ ಆರೋಪ ಮಾಡಿದರು.ಗುರುವಾರ ಸುದ್ದಿಗಾರರೊಂದಿಗೆ ಮಾತನಾ ಡಿದ ಅವರು, `ಯಾವುದೇ ಹೊಸ ಬಡಾವಣೆ ಯನ್ನು ಮಾಡುವಾಗ ಮೊದಲ ಹಂತದಲ್ಲಿ ಶೇ. 60ರಷ್ಟು ನಿವೇಶನಗಳ ಮಾರಾಟ ಮತ್ತು ಅಭಿವೃದ್ಧಿಗೆ ಮುಡಾ ಅನುಮತಿ ನೀಡಿರುತ್ತದೆ. ನಂತರ ಎರಡನೇ ಹಂತದಲ್ಲಿ ಅಭಿವೃದ್ಧಿ ಕಾಮಗಾರಿ ಮತ್ತು ಸಂಬಂಧಪಟ್ಟ ಇಲಾಖೆಗಳ ನಿರಪೇಕ್ಷಣಾ ಪತ್ರಗಳನ್ನು ಆಧರಿಸಿ ಉಳಿದಿದ್ದರಲ್ಲಿ ಶೇ.20ರಷ್ಟು ನಿವೇಶನಗಳಿಗೆ ಅನುಮತಿ ನೀಡಲಾಗುತ್ತದೆ.ಆದರೆ ಲೇಔಟ್ ಅಭಿವೃದ್ಧಿದಾರರು ಪೂರ್ತಿ ಶೇ.100ರಷ್ಟು ನಿವೇಶನಗಳಿಗೆ ನೋಂದಣಿ ಮಾಡಿಸಿಕೊಳ್ಳು ತ್ತಿದ್ದಾರೆ. ಇದರಿಂದ ಸಾರ್ವಜನಿಕರು ತೊಂದರೆಗೊಳಗಾಗುತ್ತಿದ್ದಾರೆ. ಇಂತಹ ನಿವೇಶನ ಖರೀದಿಸುವವರಿಗೆ ಬ್ಯಾಂಕ್ ಸಾಲ, ವಿದ್ಯುತ್, ನೀರಿನ ಸಂಪರ್ಕ ಸೇರಿದಂತೆ ಮತ್ತಿತರ ಸೌಲಭ್ಯಗಳು ಸಿಗುವುದಿಲ್ಲ~ ಎಂದು ಹೇಳಿದರು.`ಈ ಸಮಸ್ಯೆಯನ್ನು ಕೂಲಂಕಷವಾಗಿ ಪರಿಶೀಲಿಸಿ ಈಚೆಗಷ್ಟೇ ಉಪ ನೋಂದಣಾ ಧಿಕಾರಿಗಳೊಂದಿಗೆ ಸಭೆ ನಡೆಸಿದ್ದೇವೆ. ಅವರಿಗೂ ಈ ಬಗ್ಗೆ ಪತ್ರ ಬರೆದು ಅನಧಿಕೃತ ನಿವೇಶನ ನೋಂದಣಿ ಮಾಡದಂತೆ ತಿಳಿಸಿದ್ದೇವೆ. ಈಗಾಗಲೇ ನೋಂದಣಿಯಾಗಿರುವ ನಿವೇಶನಗಳಲ್ಲಿ ಶೀಘ್ರದಲ್ಲಿ ಅಭಿವೃದ್ಧಿ ಕಾಮಗಾರಿಗ ಳನ್ನು ಮಾಡಬೇಕು ಎಂದು ಡೆವಲಪರ್ಸ್‌ಗೆ ಕಾಲಮಿತಿ ಯನ್ನು ನೀಡಲಾಗಿದೆ~ ಎಂದು ತಿಳಿಸಿದರು.ಯೋಜನೆಗಳಿಗೆ ಸಿಎಂ ಚಾಲನೆ: `ವಿಜಯನಗರ ಮೊದಲನೇ ಹಂತದಲ್ಲಿರುವ ಕ್ರೀಡಾ ಸಂಕೀರ್ಣ ವನ್ನು ಮಾರ್ಚ್ 3 ರಂದು ಮುಖ್ಯಮಂತ್ರಿ ಡಿ.ವಿ. ಸದಾನಂದಗೌಡ ಉದ್ಘಾಟಿಸಲಿದ್ದಾರೆ. 2.76 ಕೋಟಿ ರೂಪಾಯಿ ವೆಚ್ಚದಲ್ಲಿ ಈ ಕ್ರೀಡಾಂಗ ಣವನ್ನು ನಿರ್ಮಿಸ ಲಾಗಿದೆ. ಇದರೊಂದಿಗೆ ಸುಮಾರು 22  ಕಾಮಗಾರಿಗಳಿಗೆ ಶಿಲಾನ್ಯಾಸ ಮತ್ತು12 ಯೋಜನೆ ಗಳನ್ನು ಘೋಷಣೆ ಮಾಡುವ ಕಾರ್ಯ ಕ್ರಮಗಳಿಗೂ ಸದಾನಂದಗೌಡ ಚಾಲನೆ ನೀಡಲಿದ್ದಾರೆ~ ಎಂದು ಅಧ್ಯಕ್ಷ ಎಲ್.ನಾಗೇಂದ್ರ ಮತ್ತು ಆಯುಕ್ತ ಜಿ.ಎಂ.ಬೆಟಸೂರ್‌ಮಠ ತಿಳಿಸಿದರು.`ಈ ಯೋಜನೆಗಳಲ್ಲಿ ಪ್ರಮುಖವಾಗಿ 14.66 ಕೋಟಿ ರೂಪಾಯಿ ವೆಚ್ಚದಲ್ಲಿ ಡಾ.ಬಿ.ಆರ್. ಅಂಬೇಡ್ಕರ್ ಭವನ ನಿರ್ಮಾಣ , 4.50 ಕೋಟಿ ಯಲ್ಲಿ ಡಾ.ಬಾಬು ಜಗಜೀವನರಾಂ ಭವನ, 4.92 ಕೋಟಿಯಲ್ಲಿ ವಾಲ್ಮೀಕಿ ಭವನ ನಿರ್ಮಾಣ ಕಾಮಗಾರಿಗಳಿಗೆ ಶಿಲಾನ್ಯಾಸ  ನಡೆಯಲಿದೆ. ಒಟ್ಟು 71.49 ಕೋಟಿ ರೂಪಾಯಿ ವೆಚ್ಚದಲ್ಲಿ ಈ ಕಾಮಗಾರಿಗಳು ನಡೆಯಲಿವೆ~ ಎಂದು ಅವರು ತಿಳಿಸಿದರು.`ವೀರಪ್ಪನ್ ಕಾರ್ಯಾ ಚರಣೆಯಲ್ಲಿ ಭಾಗವಹಿಸಿದ್ದ ಪೊಲೀಸ್ ಪಡೆಯ ಪಿಎಸ್‌ಐ ಮಟ್ಟದೊಳಗಿನವರಿಗೆ 267 ನಿವೇಶನಗಳು, ಡಿವೈಎಸ್ಪಿ ಮೇಲ್ಪಟ್ಟವರಿಗೆ 40-60 ಅಳತೆಯ ನಾಲ್ಕು ನಿವೇಶನ ಗಳನ್ನು ಮಂಜೂರು ಮಾಡ ಲಾಗಿದ್ದು, ಅವುಗಳ ವಿತರಣೆ ಯನ್ನೂ ಮುಖ್ಯಮಂತ್ರಿಗಳು ಅಂದು ಮಾಡುವರು.

 

ನಗರದಲ್ಲಿರುವ ಮೋಟಾರು ಗ್ಯಾರೇಜ್‌ಗಳಿಗೆ  ನಗರದ ಅನುಕೂಲಕರ ಭಾಗಗಳಲ್ಲಿ ಆಟೋನಗರ ಸ್ಥಾಪಿಸಲಾಗುತ್ತಿದೆ. ಈಚೆಗೆ ನಂಜನಗೂಡು ರಸ್ತೆಯಲ್ಲಿ ಆರಂಭ ವಾಗಿರುವ ಟ್ರಕ್ ಟರ್ಮಿನಲ್ ಸಮೀಪ ಒಂದು ನಿವೇಶನ ಗುರುತಿಸಲಾಗಿದ್ದು, ಅಲ್ಲಿಯೂ ಸಿಎಂ ಚಾಲನೆ ನೀಡುವರು. ನಗರದಲ್ಲಿ ಒಟ್ಟು 5.43 ಲಕ್ಷ ವಾಹನಗಳು ಇವೆ. ಆ ವಾಹನಗಳ ಸರ್ವೀಸಿಂಗ್, ದುರಸ್ತಿ ಮತ್ತಿತರ ಕಾರ್ಯಗಳಿಗೆ ಆಟೋ ನಗರಗಳು ಅನುಕೂಲವಾಗಲಿವೆ~ ಎಂದು ಅವರು ತಿಳಿಸಿದರು.

ಶಿಲಾನ್ಯಾಸಗಳು

1. ಡಾ. ಬಿ.ಆರ್ ಅಂಬೇಡ್ಕರ್ ಭವನ.2. ಡಾ. ಬಾಬು ಜಗಜೀವನರಾಂ ಭವನ.3. ವಾಲ್ಮೀಕಿ ಭವನ.4. ಟೆರೆಷಿಯನ್ ವೃತ್ತದಿಂದ ಅಜೀಜ್ ಸೇಟ್ ಜೋಡಿ ರಸ್ತೆಯವರೆಗೆ, ಡಾ. ರಾಜಕುಮಾರ್ ರಸ್ತೆ ಅಭಿವೃದ್ಧಿ ಅಗಲೀಕರಣ ಮತ್ತು ಮರು ಡಾಂಬರೀಕರಣ ಕಾಮಗಾರಿ.5. ಶಾಂತವೇರಿ ಗೋಪಾಲಗೌಡ ಆಸ್ಪತ್ರೆಯಿಂದ ಡಾ. ರಾಜಕುಮಾರ್ ರಸ್ತೆಯವರೆಗೆ ಜೋಡಿ ರಸ್ತೆ ನಿರ್ಮಾಣ.6. ಕುವೆಂಪುನಗರ ಬಡಾವಣೆಯಲ್ಲಿ ಆದಿಚುಂಚನಗಿರಿ ರಸ್ತೆ ಅಗಲೀಕರಣ ಕಾಮಗಾರಿ. 7. ಸರ್ಕಾರಿ ಉತ್ತನಹಳ್ಳಿ ಗ್ರಾಮದ ಬಾಕಿ ಉಳಿದಿರುವ ಯುಜಿಡಿ ಹಾಗೂ ರಸ್ತೆ ಅಭಿವೃದ್ಧಿ ಕಾಮಗಾರಿ. 8. ನಂಜನಗೂಡು ತಾಂಡವಪುರ ಗ್ರಾಮದ ಸರ್ವಾಂಗೀಣ ಅಭಿವೃದ್ಧಿ ಕಾಮಗಾರಿ.9. ನಂಜನಗೂಡು ಬಂಚಳ್ಳಿಹುಂಡಿ ಮತ್ತು ಚಿಕ್ಕಯ್ಯನಛತ್ರ ಸರ್ವಾಂಗೀಣ ಅಭಿವೃದ್ಧಿ .10.ಗುಡಮಾದನಹಳ್ಳಿ ಬಾಕಿ ಉಳಿದಿರುವ ಯು.ಜಿ.ಡಿ ಹಾಗೂ ರಸ್ತೆ ಅಭಿವೃದ್ಧಿ. 11.ಕೆಸರೆ ಗ್ರಾಮಕ್ಕೆ ಮೂಲ ಸೌಕರ್ಯ ಒದಗಿಸುವುದು. 12.ಮೈಸೂರು ತಾಲ್ಲೂಕು ಬೆಳವಾಡಿಗೆ ಒಳಚರಂಡಿ ವ್ಯವಸ್ಥೆ ಅಳವಡಿಸುವುದು ಮತ್ತು ರಸ್ತೆಗಳ ಅಭಿವೃದ್ಧಿಪಡಿಸುವ ಕಾಮಗಾರಿ.13.ಹೊಸಹುಂಡಿ ಗ್ರಾಮದ ಬಾಕಿ ಉಳಿದಿರುವ ಯುಜಿಡಿ ಮತ್ತು ರಸ್ತೆ ಅಭಿವೃದ್ಧಿ ಕಾಮಗಾರಿ.14.ವಿಜಯನಗರ 1ನೇ ಹಂತ. ಕ್ರೀಡಾ ಸಂಕೀರ್ಣದ ಪಶ್ಚಿಮ ಭಾಗದ ಕಂಪೌಂಡ್ ನಿರ್ಮಾಣ.15 ಚಾಮುಂಡಿ ವಿಹಾರ ಕ್ರೀಡಾಂಗಣದ ಹಾಕಿ ಮೈದಾನಕ್ಕೆ ಸಿಂಥೆಟಿಕ್ ಹಾಕಿ ಸರ್ಫೇಸ್ ಅಳವಡಿಸುವ ಕಾಮಗಾರಿ.16.ಚಾಮುಂಡಿ ವಿಹಾರ ಒಳಾಂಗಣ ಕ್ರೀಡಾಂಗಣಕ್ಕೆ ವುಡನ್ ಫ್ಲೋರಿಂಗ್ ಕಾಮಗಾರಿ.17.ಜಯನಗರ ಜೆಸಿಎಸ್‌ಟಿಕೆ ಬ್ಲಾಕ್‌ನ ನ್ಯೂ ಕಾಂತರಾಜ ಅರಸ್ ರಸ್ತೆಯಿಂದ ಅಪೋಲೋ ರಸ್ತೆ ಪಕ್ಕದಲ್ಲಿರುವ ಮಳೆನೀರಿನ ಚರಂಡಿ.18.ಲಲಿತಮಹಲ್ ರಸ್ತೆ ಹಾಗೂ ಟಿ. ನರಸೀಪುರ ಜಂಕ್ಷನ್ ಪಕ್ಕದ ಉದ್ಯಾನವನಕ್ಕೆ ಶಾರ್ಟ್ ಬೇಸ್‌ಮೆಂಟ್ ಮತ್ತು ಚೈನ್ ಲಿಂಗ್ ಬೇಲಿ ನಿರ್ಮಾಣ ಕಾಮಗಾರಿ.19.ಬೋಗಾದಿ ಆಶ್ರಯ ಬಡಾವಣೆ ಅಭಿವೃದ್ಧಿ ಕಾಮಗಾರಿ.20.ಹುಣಸೂರು ಮುಖ್ಯರಸ್ತೆಯ ಕಲಾಮಂದಿರದಿಂದ ಕುಕ್ಕರಹಳ್ಳಿ ಕೆರೆಯವರೆಗೆ ರಸ್ತೆ ಅಗಲೀಕರಣ ಹಾಗೂ ಅಭಿವೃದ್ಧಿ.21.ಹುಣಸೂರು ಮುಖ್ಯರಸ್ತೆಯ ನೀಲಗಿರಿ ಸ್ಟೋರ್‌ನಿಂದ ಬೋಗಾದಿ ರಸ್ತೆ  ಸೇರುವ ರಸ್ತೆ ಅಭಿವೃದ್ಧಿ.22.ಹುಣಸೂರು ಮುಖ್ಯರಸ್ತೆಯ ಪ್ರೀಮಿಯರ್ ಸ್ಟುಡಿಯೋದಿಂದ ನ್ಯೂ ಕಾಂತರಾಜ ಅರಸು ರಸ್ತೆ (ಮಾರ್ಗ: ವಾಕ್ ಮತ್ತು ಶ್ರವಣ ಸಂಸ್ಥೆ) ವರೆಗೆ ರಸ್ತೆ ಅಗಲೀಕರಣ.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.