ಲಂಡನ್(ಐಎಎನ್ಎಸ್): ಖುಷಿಗಾಗಿ ಹಂಬಲಿಸುವುದು ಮಾನವ ಸಹಜ ಗುಣ. ಹಳೇ ಜೀನ್ಸ್ಲ್ಲಿ ಸಿಗೋ ಹಣ, ಎಳೆಬಿಸಿಲಿನಲ್ಲಿ ಪಿಕಿನಿಕ್, ಪ್ರೀತಿಪಾತ್ರರು ನೀಡೊ ಚಾಕಲೇಟ್, ಬಾಸ್ ಹೇಳೊ ಥ್ಯಾಂಕ್ಸ್...ಹೀಗೆ ಆನಂದವಾಗಿರೋಕೆ ಇಂಥ ಸಣ್ಣ ಸಣ್ಣ ಸಂಗತಿಗಳು ಸಾಕಲ್ಲ..!

ನಮ್ಮ ಮನಸ್ಸು ಅರಳಲು ಇಂಥ 50 ಸಣ್ಣಪುಟ್ಟ ಕಾರಣಗಳು ಸಾಕು ಎನ್ನುತ್ತದೆ `ಥ್ರೀ ಬ್ಯಾರೆಲ್ಸ್ ಬ್ರೆಂಡಿ~ ನಡೆಸಿದ ನೂತನ ಸಂಶೋಧನೆ.

ಯಾರೋ ನಿಮ್ಮ ತೂಕ ಕಡಿಮೆ ಆಗಿದೆ ಎಂದರೆ ಒಳಗೊಳಗೇ ಖುಷಿಯ ಬುಗ್ಗೆ! ಇಳಿ ಸಂಜೆಯಲ್ಲಿ ವೃದ್ಧ ದಂಪತಿ ಕೈಹಿಡಿದು ನಡೆಯೋ ಕ್ಷಣ ನೋಡಿದರೆ ಸಂತಸದ ಕಡಲು...ಬೇಸರವನ್ನು ಹೊಡೆದೋಡಿಸಲು ಇಷ್ಟು ಸಾಕಲ್ಲವೇ? ಜೀವಜಗತ್ತಿನ ಚೈತನ್ಯ ಸೂರ್ಯನೆಂದರೆ ಯಾರಿಗೆ ತಾನೆ ಮನಸ್ಸು ಅರಳುವುದಿಲ್ಲ ಹೇಳಿ. ಎಳೆಬಿಸಿಲ ಕಚಗುಳಿ, ಉರಿಬಿಸಿಲ ತಾಪ, ಇಳಿಬಿಸಿಲ ಮುದ...ಹೀಗೆ ಸಂತಸದ ಪಟ್ಟಿಯಲ್ಲಿ ಸೂರ್ಯನ ಸಂಗಕ್ಕೆ ಅಗ್ರಸ್ಥಾನ. ಬೇಸರಕ್ಕೆ ಎಲ್ಲ ಸಂದರ್ಭಗಳಲ್ಲಿಯೂ ಕಾರಣ ಸಿಗದು. ಒಮ್ಮಮ್ಮೆ ಏಕಾಏಕಿ ಮೂಡ್ ಔಟ್ ಆಗುವುದುಂಟು.

ಕಚೇರಿ ಕೆಲಸದಲ್ಲಿ ಏನೋ ನಿರಾಸಕ್ತಿ. ಹೀಗಿರುವಾಗ ನಿಮ್ಮ ಬಾಸ್ ಹೇಳುವ ಒಂದು ಪುಟ್ಟ ಥ್ಯಾಂಕ್ಸ್ ಸಾಕು ನಿಮ್ಮ ಇಡೀ ದಿನವನ್ನು ಚಕಿತಗೊಳಿಸಲು! ಇಷ್ಟದ ಹಾಡು, ಆತ್ಮೀಯರ ಸಾಮೀಪ್ಯ, ರಜೆಯಲ್ಲಿ ಪ್ರವಾಸ, ಬೇಸಿಗೆಯಲ್ಲಿ ವಾಯುವಿಹಾರ, ಹಳೆಯ ಮಿತ್ರರ ದರ್ಶನ, ಹಳೆಯ ಭಾವಚಿತ್ರಗಳನ್ನು ನೋಡುವುದು, ಮಗುವಿನ ಕಿಲ ಕಿಲ ನಗು... ಹೀಗೆ ಸಂತಸಕ್ಕೆ `50~ ಕಾರಣಗಳು ಎನ್ನುತ್ತದೆ ಅಧ್ಯಯನ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.