ಭಾನುವಾರ, ಜನವರಿ 26, 2020
18 °C

ಖೋಡೊರ್ಕೊವಿಸ್ಕಿಗೆ ಕ್ಷಮಾದಾನ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಮಾಸ್ಕೊ (ಎಎಫ್‌ಪಿ): ಅಚ್ಚರಿಯ ಬೆಳವಣಿಗೆ ಯೊಂದರಲ್ಲಿ ರಷ್ಯಾದ ಜನಪ್ರಿಯ ಕೈದಿ ಹಾಗೂ ಸರ್ಕಾರದ ಟೀಕಾಕಾರ ಮಿಖೈಲ್‌ ಖೋಡೊ­ರ್ಕೊ­ವಿಸ್ಕಿ ಅವರಿಗೆ ಅಧ್ಯಕ್ಷ ವ್ಲಾಡಿಮಿರ್‌ ಪುಟಿನ್‌ ಕ್ಷಮಾದಾನ ನೀಡಿದ್ದಾರೆ.

ಅಕ್ರಮ ಹಣ ವರ್ಗಾವಣೆ ಆರೋಪ­ದಲ್ಲಿ ಹತ್ತು ವರ್ಷಗಳ ಕಾಲ ಶಿಕ್ಷೆ ಅನು­ಭವಿಸಿದ ಬಳಿಕ ಒಂದು ಕಾಲದ ಸಿರಿವಂತ ಖೋಡೊರ್ಕೊವಿಸ್ಕಿ, ಶುಕ್ರವಾರ ಜೈಲಿನಿಂದ ಬಿಡುಗಡೆ­ಗೊಂಡಿದ್ದಾರೆ.

ತಮ್ಮ ತಾಯಿ ಅನಾರೋಗ್ಯದಿಂದ ಬಳಲುತ್ತಿದ್ದು, ಅವರನ್ನು ನೋಡಿ­ಕೊಳ್ಳು­ವುದಕ್ಕಾಗಿ ಮಾನವೀಯ ಆಧಾರದಲ್ಲಿ ಕ್ಷಮಾದಾನ ನೀಡಬೇಕು ಎಂದು ಖೋಡೊ­ರ್ಕೊ­ವಿಸ್ಕಿ ಮನವಿ ಮಾಡಿದ್ದರು.

ಪ್ರತಿಕ್ರಿಯಿಸಿ (+)