ಚಿಕ್ಕಬಳ್ಳಾಪುರ: ಘಟಾನುಘಟಿ ರಾಜಕಾರಣಿ ಎದುರು ಕನ್ನಡ ಚಿತ್ರರಂಗದ ಖ್ಯಾತ ನಟ ಮತ್ತು ನಟಿ ಅದೃಷ್ಟ ಪರೀಕ್ಷಿಸಲು ಸ್ಪರ್ಧಿಸಿ ಸೋತ ಕ್ಷೇತ್ರ ಚಿಕ್ಕಬಳ್ಳಾಪುರ.

1998ರಲ್ಲಿ ಇಲ್ಲಿ ಲೋಕಶಕ್ತಿ ಅಭ್ಯರ್ಥಿಯಾಗಿ 204359 ಮತಗಳನ್ನು ಗಳಿಸಿದ್ದ ಜಯಂತಿ ಅವರನ್ನು ಕಾಂಗ್ರೆಸ್ನ ಆರ್.ಎಲ್.ಜಾಲಪ್ಪ 156402 ಮತಗಳ ಅಂತರದಿಂದ ಪರಾಭವಗೊಳಿಸಿದ್ದರು.

2004ರ ಚುನಾವಣೆಯಲ್ಲಿ ಜೆಡಿಎಸ್ ಅಭ್ಯರ್ಥಿಯಾಗಿದ್ದ ನಟ ಶಶಿಕುಮಾರ್ ಅವರನ್ನು ಜಾಲಪ್ಪ 60022 ಮತಗಳ ಅಂತರದಿಂದ ಸೋಲಿಸಿದ್ದರು.

ಚುನಾವಣೆಯಲ್ಲಿ ಒಮ್ಮೆ ಸೋತ ಬಳಿಕ ಜಯಂತಿ ಮತ್ತು ಶಶಿಕುಮಾರ್ ಇಬ್ಬರೂ ಕ್ಷೇತ್ರದತ್ತ ಸುಳಿಯಲಿಲ್ಲ. ಚುನಾವಣೆಯ ಸಹವಾಸಕ್ಕೂ ಬರಲಿಲ್ಲ.ಇಂಥ ಅನೇಕ ವಿಶೇಷಗಳನ್ನು ಈ ಕ್ಷೇತ್ರ ತನ್ನೊಳಗೆ ಅಡಗಿಸಿಕೊಂಡಿದೆ.

ಹೆಸರಿಗೆ ಇದು ಚಿಕ್ಕಬಳ್ಳಾಪುರ ಕ್ಷೇತ್ರ. ಆದರೆ ಈ ಜಿಲ್ಲೆಯ ಮೂರು ವಿಧಾನಸಭಾ ಕ್ಷೇತ್ರ ಮಾತ್ರ ಇದರಲ್ಲಿದೆ. ಉಳಿದಂತೆ ಬೆಂಗಳೂರು ಗ್ರಾಮಾಂತರ ಜಿಲ್ಲೆಯ ನಾಲ್ಕು ವಿಧಾನಸಭಾ ಕ್ಷೇತ್ರ, ಬೆಂಗಳೂರು ನಗರದ ಒಂದು ವಿಧಾನಸಭಾ ಕ್ಷೇತ್ರ ಇದರ ವ್ಯಾಪ್ತಿಗೆ ಬರುತ್ತವೆ ನೆಲಮಂಗಲ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯಲ್ಲಿರುವ ಮಾಗಡಿ ತಾಲ್ಲೂಕಿನ ಸೋಲೂರು ಹೋಬಳಿ ಈ ಕ್ಷೇತ್ರದ ವ್ಯಾಪ್ತಿಯಲ್ಲಿದೆ.

ಬೇರೆ ಬೇರೆ ಹೆಸರು: 1951 ಮತ್ತು 1957ರ ಲೋಕಸಭಾ ಚುನಾವಣೆಗಳಲ್ಲಿ ಒಂದೇ ಕ್ಷೇತ್ರಕ್ಕೆ ಇಬ್ಬರು ಸದಸ್ಯರನ್ನು ಆಯ್ಕೆ ಮಾಡುವ ವ್ಯವಸ್ಥೆ ಇತ್ತು. ಆಗ ಇದು ಕೋಲಾರಕ್ಕೆ ಸೇರಿತ್ತು.

ನಂತರ 1962ರಲ್ಲಿ ಚಿಕ್ಕಬಳ್ಳಾಪುರ ಪ್ರತ್ಯೇಕವಾಯಿತು. 1967 ಮತ್ತು 1971ರ ಲೋಕಸಭಾ ಚುನಾವಣೆಯಲ್ಲಿ ಹೊಸಕೋಟೆ

ಕ್ಷೇತ್ರವೆಂದು ನಾಮಕರಣಗೊಂಡಿತು. 1977ರ ಚುನಾವಣೆಯಲ್ಲಿ ಪುನರ್ನಾಮಕರಣಗೊಂಡು ಹೊಸಕೋಟೆ ಬದಲು ಚಿಕ್ಕಬಳ್ಳಾಪುರ ಕ್ಷೇತ್ರವಾಗಿ ಅಸ್ತಿತ್ವಕ್ಕೆ ಬಂತು. ನಂತರ ಸರಿಯಾಗಿ 30 ವರ್ಷಗಳ ಬಳಿಕ 2007ರ ಆಗಸ್ಟ್ 23ರಂದು ಕೋಲಾರದಿಂದ ಬೇರ್ಪಟ್ಟು ಹೊಸ ಜಿಲ್ಲೆಯಾಯಿತು.

ಕಾಂಗ್ರೆಸ್ನ ಭದ್ರಕೋಟೆಯಾಗಿರುವ ಈ ಕ್ಷೇತ್ರದಲ್ಲಿ ಬೇರೆ ಪಕ್ಷದವರಿಗೆ ನೆಲೆಯೂರಲು ಅವಕಾಶವೇ ಸಿಕ್ಕಿಲ್ಲ.
1996ರಲ್ಲಿ ಜನತಾದಳ ಗೆದ್ದರೂ ಆಗ ಅದರ ಅಭ್ಯರ್ಥಿಯಾಗಿದ್ದವರು ಆರ್.ಎಲ್.ಜಾಲಪ್ಪ. ಅವರು ಅದರ ನಂತರ ಜಯ ಗಳಿಸಿದ್ದು ಕಾಂಗ್ರೆಸ್ನಿಂದ. 2009ರಲ್ಲಿ ದಕ್ಷಿಣ ಕನ್ನಡದಿಂದ ಬಂದು ಕಾಂಗ್ರೆಸ್ನಿಂದ ಕಣಕ್ಕಿಳಿದ ವೀರಪ್ಪ ಮೊಯಿಲಿ ಅವರನ್ನೂ ಇಲ್ಲಿನ ಮತದಾರರು ಆಯ್ಕೆ ಮಾಡಿದ್ದರು. ಅಷ್ಟರ ಮಟ್ಟಿಗೆ ಇಲ್ಲಿದೆ ಕಾಂಗ್ರೆಸ್ ಮೋಹ.

ಇಲ್ಲಿಂದ ಆಯ್ಕೆಯಾದ ಎಂ.ವಿ.ಕೃಷ್ಣಪ್ಪ, ಮೊಯಿಲಿ ಕೇಂದ್ರ ಸಚಿವರಾದರು.

ಪ್ರಭಾವಿ ಪ್ರತಿಸ್ಪರ್ಧಿಗಳದ್ದೇ ಕೊರತೆ
ಎಂ.ವಿ.ಕೃಷ್ಣಪ್ಪ (1967, 1971 ಮತ್ತು 1977) ಮತ್ತು ವಿ.ಕೃಷ್ಣರಾವ್ ಸತತ ಮೂರು ಬಾರಿ (1984, 1989 ಮತ್ತು 1990) ಇಲ್ಲಿಂದ ಗೆದ್ದಿದ್ದಾರೆ. ಇವರಿಬ್ಬರನ್ನು ಮೀರಿಸಿದ ಆರ್.ಎಲ್.ಜಾಲಪ್ಪ ಒಂದು ಹೆಜ್ಜೆ ಮುಂದೆ ಹೋಗಿ, ಸತತ ನಾಲ್ಕು ಸಲ (1996, 1998, 1999 ಮತ್ತು 2004) ಸಂಸದರಾಗಿದ್ದಾರೆ.

ಹೀಗೆ ಈ ಘಟಾನುಘಟಿಗಳು ಗೆಲ್ಲಲು ಕಾರಣವೇನು ಎಂದು ಇಲ್ಲಿನ ಸ್ಥಳೀಯರನ್ನು ಪ್ರಶ್ನಿಸಿದರೆ, ಆಗಿನ ಕಾಲದಲ್ಲಿ ಅವರ ಜನಪ್ರಿಯತೆ ಚೆನ್ನಾಗಿತ್ತು ಮತ್ತು ಪ್ರಬಲ ಪ್ರತಿಸ್ಪರ್ಧೆ ನೀಡಬಲ್ಲ ಅಭ್ಯರ್ಥಿಗಳ ಕೊರತೆಯೂ ಇತ್ತು ಎಂಬ ಉತ್ತರ ಸಿಗುತ್ತದೆ. ಈ ಪ್ರಮುಖರು ಸ್ಪರ್ಧಿಸುತ್ತಿರುವುದು ಖಚಿತವಾದರೆ ಸಾಕು, ಜನರ ಗಮನ ಎಲ್ಲವೂ ಅವರತ್ತ ತಿರುಗುತ್ತಿತ್ತೇ ಹೊರತು ಪ್ರತಿಸ್ಪರ್ಧಿಯನ್ನು ಗಂಭೀರವಾಗಿ ಪರಿಗಣಿಸುತ್ತಲೇ ಇರಲಿಲ್ಲ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.