ಭಾನುವಾರ, ಜನವರಿ 19, 2020
28 °C

ಗಂಗೂಲಿ ವಜಾ: ವಾಹನ್ವತಿ ಶಿಫಾರಸು

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ನವದೆಹಲಿ(ಪಿಟಿಐ): ಪಶ್ಚಿಮ ಬಂಗಾಳ ಮಾನವ ಹಕ್ಕು ಆಯೋಗದ ಅಧ್ಯಕ್ಷ ಸ್ಥಾನದಿಂದ ಎ.ಕೆ.ಗಂಗೂಲಿ ಅವರನ್ನು ಕೆಳಗಿಳಿಸುವ ಸಂಬಂಧ ಅಟಾರ್ನಿ ಜನರಲ್‌ ಜಿ.ಇ ವಾಹನ್ವತಿ ಅವರು ಸರ್ಕಾರಕ್ಕೆ ಶಿಫಾರಸು ಮಾಡಿದ್ದಾರೆ.ಈ ನಡುವೆ  ಗಂಗೂಲಿ ಪ್ರಕರಣದಲ್ಲಿ ಸುಪ್ರೀಂಕೋರ್ಟ್‌ಗೆ ರಾಷ್ಟ್ರಪತಿ ಪ್ರಸ್ತಾವನೆ ಕಳುಹಿ­ಸುವ ಕುರಿತು ಮುಂದಿನ ವಾರ  ನಿರ್ಧಾರ ಕೈಗೊಳ್ಳಲಾಗುವುದು ಎಂದು ಗೃಹ ಸಚಿವ ಸುಶೀಲ್‌ ಕುಮಾರ್‌ ಶಿಂಧೆ ಹೇಳಿದ್ದಾರೆ.ಕಾನೂನು ತರಬೇತಿ ವಿದ್ಯಾರ್ಥಿನಿಗೆ ಲೈಂಗಿಕ ಕಿರುಕುಳ ನೀಡಿದ ಆರೋಪ ಎದುರಿಸುತ್ತಿರುವ ಗಂಗೂಲಿ ಅವರ ಪ್ರಕರಣದಲ್ಲಿ ಗೃಹ ಸಚಿವಾಲಯ ಹಾಗೂ ಕಾನೂನು ಸಚಿವಾಲಯ ಒಮ್ಮತದ ತೀರ್ಮಾನ ಕೈಗೊಳ್ಳಲಿವೆ ಎಂದು ಅವರು ಸುದ್ದಿಗಾರರಿಗೆ ತಿಳಿಸಿದರು.ಗಂಗೂಲಿ ವಿರುದ್ಧ ಸುಪ್ರೀಂಕೋರ್ಟ್‌ ನಿಂದ ವಿಚಾರಣೆ ನಡೆಸುವ ಬಗ್ಗೆ ರಾಷ್ಟ್ರಪತಿಗಳಿಗೆ ಶಿಫಾರಸು ಕಳುಹಿಸುವ ಮೊದಲು ಕೇಂದ್ರ ಸಂಪುಟ ಮೊದಲಿಗೆ ತೀರ್ಮಾನ ಕೈಗೊಳ್ಳಬೇಕು. 

ಪ್ರತಿಕ್ರಿಯಿಸಿ (+)