ಬುಧವಾರ, ಏಪ್ರಿಲ್ 14, 2021
31 °C

ಗಗನಚುಕ್ಕಿಗೆ ರಾಜ್ಯಪಾಲರ ಭೇಟಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಮಳವಳ್ಳಿ: ರಾಜ್ಯಪಾಲ ಎಚ್.ಆರ್. ಭಾರದ್ವಜ್ ಹಾಗೂ ಅವರ ಕುಟುಂಬದ ಸದಸ್ಯರು ಬುಧವಾರ ತಾಲ್ಲೂಕಿನ ಪ್ರಸಿದ್ಧ ಪ್ರವಾಸಿ ತಾಣ ಶಿವನಸಮುದ್ರಂ (ಬ್ಲಫ್)ನ ಸಮೀಪದ ಗಗನಚುಕ್ಕಿ ಜಲಪಾತ ವಿಕ್ಷಿಸಿದರು.ಮೊದಲಿಗೆ ಪ್ರವಾಸಿ ಮಂದಿರಕ್ಕೆ ಭೇಟಿ ನೀಡಿ ವಂದನೆ ಸ್ವೀಕರಿಸಿ, ಜಲವಿದ್ಯುತ್ ಉತ್ಪಾದನಾ ಸ್ಥಾವರ ವೀಕ್ಷಣೆ ಮಾಡಿದರು. ನಂತರ ಗಗನ ಚುಕ್ಕಿ ಜಲಪಾತ ವೀಕ್ಷಿಸಿದರು. ನಂತರ ಭರಚುಕ್ಕಿಗೆ ಭೇಟಿ ನೀಡಿ ಪ್ರವಾಸಿ ಮಂದಿರದಲ್ಲಿ ವಿಶ್ರಾಂತಿ ಪಡೆದು ತಲಕಾಡಿಗೆ ತೆರಳಿದರು.ಶಾಸಕ ಪಿ.ಎಂ. ನರೇಂದ್ರಸ್ವಾಮಿ, ಜಿಲ್ಲಾಧಿಕಾರಿ ಡಾ.ಪಿ.ಸಿ. ಜಾಫರ್, ಎಸ್ಪಿ ಕೌಶಲೇಂದ್ರ ಕುಮಾರ್, ಜಿಲ್ಲಾ ಪಂಚಾಯಿತಿ ಸದಸ್ಯ ಆರ್.ಎನ್. ವಿಶ್ವಾಸ್ ಮಾಜಿ ಸದಸ್ಯ ಪುಟ್ಟಯ್ಯ, ತಾ.ಪಂ. ಸದಸ್ಯರಾದ ಮಹದೇವು, ಗುರುಸ್ವಾಮಿ, ಮಹೇಶ್, ಪುರಸಭೆ ಸದಸ್ಯರಾದ ಗಂಗರಾಜೇ ಅರಸು, ಎಂ.ಎಚ್. ದೊಡ್ಡಯ್ಯ, ಗ್ರಾ.ಪಂ. ಮಾಜಿ ಅಧ್ಯಕ್ಷ ಶಿವಮಾದೇಗೌಡ, ರವೀಂದ್ರಕುಮಾರ್, ಎಪಿಎಂಸಿ ನಿರ್ದೇ ಶಕರಾದ ಅಂಬರೀಶ್, ಆನಂದ್ ಇತರರು ಇದ್ದರು.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.