ಗುರುವಾರ , ಮೇ 13, 2021
44 °C

ಗಣಿ ಮಾಫಿಯಾದಿಂದ ಹತ್ಯೆ ಯತ್ನ: ಮಹಿಳಾ ತಹಶೀಲ್ದಾರ್ ಪಾರು

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ದೇವಾಸ್ (ಮಧ್ಯಪ್ರದೇಶ) (ಪಿಟಿಐ): ಐಪಿಎಸ್ ಅಧಿಕಾರಿಯ ಹತ್ಯೆ ಮೂಲಕ ಅಟ್ಟಹಾಸ ಮೆರೆದಿದ್ದ ಮಧ್ಯ ಪ್ರದೇಶದ ಗಣಿ ಮಾಫಿಯಾ, ಮಹಿಳಾ ತಹಶೀಲ್ದಾರ್ ಮೇಲೆ ವಾಹನ ಹರಿಸಿ ಹತ್ಯೆಗೆ ಯತ್ನಿಸಿದ ಘಟನೆ ನಡೆದಿದೆ.ದೇವಾಸ್ ಜಿಲ್ಲೆಯ ಕುಸುಮಾನಿಯಾ ಗ್ರಾಮದಲ್ಲಿ ನಡೆಯುತ್ತಿದ್ದ ಅಕ್ರಮ ಕಲ್ಲು ಗಣಿಗಾರಿಕೆ ಸ್ಥಳದ ಪರಿಶೀಲನೆಗೆ ಬುಧವಾರ ತೆರಳಿದ್ದ ಕಣ್ಣೊಡ್ ತಹಶೀಲ್ದಾರ್ ಮೀನಾ ಪಾಲ್ ಅವರ ಮೇಲೆ ಮಣ್ಣೆತ್ತುವ ವಾಹನ (ಜೆಸಿಬಿ) ಹರಿಸುವ ಯತ್ನ ನಡೆಯಿತು. ಇದನ್ನು ಅರಿತ ಅಧಿಕಾರಿ ಪಕ್ಕಕ್ಕೆ ನೆಗೆದು ಪ್ರಾಣ ಉಳಿಸಿಕೊಂಡರು ಎನ್ನಲಾಗಿದೆ.ತಹಶೀಲ್ದಾರ್ ಮತ್ತು ಅಧಿಕಾರಿಗಳ ತಂಡ ಪೊಲೀಸ್ ಠಾಣೆಗೆ ತೆರಳಿ ಸ್ಥಳೀಯ ಬಿಜೆಪಿ ಧುರೀಣ ದಾರಾಸಿಂಗ್ ಪಟೇಲ್, ವಾಹನ ಚಾಲಕ ನರೇಂದ್ರ ಯಾದವ್ ಮತ್ತು ಇತರ ಐವರ ವಿರುದ್ಧ ದೂರು ನೀಡಿದೆ. ಪ್ರಕರಣ ದಾಖಲಿಸಿಕೊಂಡ ಪೊಲೀಸರು, ಗಣಿಗಾರಿಕೆ ನಡೆಯುತ್ತಿದ್ದ ಸ್ಥಳದಿಂದ ಯಂತ್ರೋಪಕರಣ ಹಾಗೂ ವಾಹನಗಳನ್ನು ವಶಪಸಿಕೊಂಡಿದ್ದಾರೆ.

 

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.