ಮಂಗಳವಾರ, ಮೇ 18, 2021
24 °C

ಗಣಿ ಸ್ಥಗಿತ: ಗುಳೆ ಹೊರಟ ಕೂಲಿ ಕಾರ್ಮಿಕರು

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಸಂಡೂರು: ಸುಶೀಲಾನಗರ ಗ್ರಾಮದಲ್ಲಿ ಸ್ವಚ್ಚತೆ ಮಾಯವಾಗಿದ್ದು, ಡುಡಿಮೆಗೆ ಆಸರೆಯಾಗಿದ್ದ ಗಣಿಗಾರಿಕೆ ಬಂದ್ ಆಗಿದೆ. ರೈತಾಪಿ ಮೂಲಕ  ಬರುವ ಕೂಲಿಯಿಂದ  ಕುಟುಂಬಗಳನ್ನು ನಿರ್ವಹಣೆ ಮಾಡಲಾಗದೇ ಜನರು ದೂರದ ಊರುಗಳಲ್ಲಿ ಉದ್ಯೋಗ ಅರಸಿಕೊಂಡು ಗುಳೆಹೋಗುತ್ತಿದ್ದಾರೆ.ಪ್ರತೀ ವರ್ಷ ಗ್ರಾಮದಿಂದ ಹತ್ತಿಪ್ಪತ್ತು ಮಂದಿ ಮಾತ್ರ ಗ್ರಾಮತೊರೆಯತ್ತಿದ್ದರು ಈ ವರ್ಷ ಗ್ರಾಮದ ಸಾವಿರ ಮಂದಿ ಮಂಡ್ಯ, ಮೈಸೂರು, ಕೊಪ್ಪ, ಕೇರಳ ಕಡೆಗೆ ಕಬ್ಬುಕಡಿಯಲು ಹೋಗಿದ್ದಾರೆ ಎಂದು ಗ್ರಾಮದ ಮಲ್ಲಿಕಾರ್ಜುನ ತಿಳಿಸುತ್ತಾರೆ.ಗ್ರಾಮದಲ್ಲಿ ಸ್ವಚ್ಚತೆ ಇಲ್ಲದಾಗಿದ್ದು ಚರಂಡಿಗಳ ನಿರ್ಮಾಣ ಮತ್ತು ಸಿಸಿರಸ್ತೆ ನಿರ್ಮಾಣ ಅಗತ್ಯವಾಗಿ ಆಗಬೇಕಿದೆ ಎನ್ನತ್ತಾರೆ ಗ್ರಾಮ ಪಂಚಾಯಿತಿ ಸದಸ್ಯಕೀರು ನಾಯ್ಕ. ಪ್ರಾಥಮಿಕ ಆರೋಗ್ಯ ಕೇಂದ್ರದ ಅರೋಗ್ಯ ಸಹಾಯಕಿ ಸರಿ ಯಾಗಿ ಕಾರ್ಯನಿರ್ವಹಿಸಿದ್ದಕಿಂತ ಗೈರು ಹಾಜರಾಗಿದ್ದೆ ಹೆಚ್ಚು ಎನ್ನುತ್ತಾರೆ ಕೆಲ ಮಹಿಳೆಯರು.13ನೇ ಹಣಕಾಸಿನಲ್ಲಿ ಗ್ರಾಮ ಪಂಚಾಯ್ತಿಗೆ ಸದರಿ ವರ್ಷದಲ್ಲಿ ರೂ. 4.50 ಲಕ್ಷ ಹಣ ಬಂದಿತ್ತು ಎಲ್ಲ ಸದಸ್ಯರು ಕೆಲ ಕೆಲಸಗಳನ್ನು ಮಾಡಿಸಿದ್ದು ಬಿಟ್ಟರೆ ಹಳ್ಳಿ ಅಭಿವೃದ್ಧಿಗೆ ಯಾವ ಗ್ರ್ಯಾಂಟ್ ಬಂದಿಲ್ಲ ಎಂದು ಗ್ರಾಮ ಪಂಚಾಯಿತಿ ಸದಸ್ಯ ಚಂದ್ರ ನಾಯ್ಕ ಆರೋಪಿಸಿದರು.ಗಣಿಗಾರಿಕೆ ನಡೆವ ವೇಳೆ ಪ್ರತಿ ವರ್ಷ ಗ್ರಾಮ ಪಂಚಾಯಿತಿಗೆ 21 ಗಣಿ ಕಂಪೆನಿಗಳಿಂದ ತೆರಿಗೆ ರೂಪದಲ್ಲಿ ಲಕ್ಷಾಂತರ ರೂಪಾಯಿಗಳ ಹಣ ಸಂದಾಯವಾಗುತ್ತಿತ್ತು, ಅಭಿವೃದ್ದಿ ಕಾರ್ಯಗಳಿಗೆ ಬಳಸದೇ ಜನಪ್ರತಿನಿಧಿ ಗಳಿಗೆ ದಾರಿ ತಪ್ಪಿಸುವ ಕೆಲಸವನ್ನು ಕಾರ್ಯದರ್ಶಿ, ಪಂಚಾಯಿತಿ ಅಭಿವೃಧ್ಧಿ ಅಧಿಕಾರಿಗಳಾಗಿದ್ದವರು ಮಾಡಿದ್ದಾರೆ ಎಂದು ಆರೋಪಿಸುತ್ತಾರೆ ಎರಡನೇ ಬಾರಿ ಗ್ರಾಮ ಪಂಚಾಯಿತಿ ಸದಸ್ಯನಾಗಿ ರುವ ಚಂದ್ರನಾಯ್ಕ.ಅಂದಾಜು 4 ಸಾವಿರ ಜನಸಂಖ್ಯೆ ಇರುವ ಗ್ರಾಮದಲ್ಲಿ ಪರಿಶಿಷ್ಟ ಜಾತಿಗೆ ಸೇರುವ ಲಂಬಾಣಿಗರೇ ಹೆಚ್ಚನ ಸಂಖ್ಯೆಯಲ್ಲಿದ್ದಾರೆ. ಗುಳೇ ಹೋಗಿರುವ ವರೆಲ್ಲ ಇದೇ ಕೋಮಿಗೆ ಸೇರಿದವ ರಾಗಿದ್ದು, ಬಾಲ್ಯದಲ್ಲಿ ನಾಲ್ಕಕ್ಷರ ಕಲಿಯ ಬೇಕಾದ ಮಕ್ಕಳು, ಅಂಗಳದಲ್ಲಿ ಆಟ ಆಡಿ ನಲಿಯ ಬೇಕಾದ ಹಸುಗೂಸು ಗಳೊಂದಿಗೆ, ತಂದೆ ತಾಯಿಗಳು ಪೋಷಕರು ದೂರದ ಊರುಗಳಿಗೆ ಉದರ ಪೋಷಣೆಗಾಗಿ ಲಾರಿಗಳನ್ನೇರಿ ಭಾರವಾದ ಮನಸ್ಸುಗಳೊಂದಿಗೆ ಹಳ್ಳಿಗಳನ್ನು ಬಿಡುತ್ತಿದ್ದಾರೆ.ಸರ್ಕಾರದ ಯೋಜನೆಗಳನ್ನು ಬಡ ಜನರಿಗೆ ತಲುಪಿಸಬೇಕಾದ ಆಡಳಿತ ವರ್ಗದವರೂ ಜನಪ್ರತಿನಿಧಿಗಳಿಂದ ಜನರು ಗುಳೆ ಹೋಗುವುದನ್ನು ನಿಲ್ಲಿಸುವ ಪ್ರಯತ್ನ ಮಾಡಬೇಕೆಂಬ ಆಗ್ರಹ ಸ್ಥಳೀಯರದ್ದು.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.