ಭಾನುವಾರ, ಏಪ್ರಿಲ್ 11, 2021
25 °C

ಗರ್ಭಿಣಿಯರು ಸೌಲಭ್ಯ ಪಡೆಯಲು ಮುಂದಾಗಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಗದಗ:  ಸುರಕ್ಷಿತ ತಾಯ್ತನ ಮತ್ತು ಮಗುವಿನ ಉತ್ತಮ ಆರೋಗ್ಯಕ್ಕೆ ಪ್ರತಿ ಗರ್ಭಿಣಿಯರು ಆಸ್ಪತ್ರೆಗಳಲ್ಲಿ ಹೆರಿಗೆ ಮಾಡಿಸಿಕೊಳ್ಳಬೇಕು ಎಂದು ಹುಯಿಲಗೋಳ ಗ್ರಾಮ ಪಂಚಾಯಿತಿ  ಉಪಾಧ್ಯಕ್ಷೆ   ಶಾರವ್ವ ಪೂಜಾರ ಸಲಹೆ ನೀಡಿದರು.   ತಾಲ್ಲೂಕಿನ ಹುಯಿಲ ಗೋಳದ ಸುಗೂರೇಶ್ವರ ದೇವಸ್ಥಾ ನದಲ್ಲಿ   ಜನನಿ ಶಿಶು ಸುರಕ್ಷಾ ಯೋಜನೆ ಮತ್ತು ಚುಚ್ಚುಮದ್ದು ಕಾರ್ಯಕ್ರಮ  ಉದ್ಘಾಟಿಸಿ ಮಾತ ನಾಡಿದರು.  ಮಹಿಳೆ ಗರ್ಭವತಿಯಾದಾಗ  ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ತನ್ನ ಹೆಸರನ್ನು ನೋಂದಾಯಿಸಿಕೊಳ್ಳಬೇಕು.  ಇದರಿಂದ ಸರಕಾರದ  ಜನನಿ ಶಿಶು  ಸುರಕ್ಷಾ ಯೋಜನೆಯ ಎಲ್ಲ ಸೌಲಭ್ಯ ಗಳನ್ನು ಪಡೆಯಬಹುದು ಎಂದರು.ಹುಯಿಲಗೋಳ ಪ್ರಾಥಮಿಕ ಆರೋಗ್ಯ ಕೇಂದ್ರದ ವೈದ್ಯಾಧಿಕಾರಿ ಡಾ.ಇಮಾಂಬಿ ಮಾತನಾಡಿ,  ವೈದ್ಯರು ಮತ್ತು ಆರೋಗ್ಯ ಸಹಾಯಕರು ನೀಡಿರುವ ಸಲಹೆಗಳನ್ನು ಅಚ್ಚುಕಟ್ಟಾಗಿ ಪಾಲಿಸಬೇಕು ಹಾಗೂ ವೈದ್ಯಕೀಯ ಸೌಲಭ್ಯಗಳನ್ನು ಸದುಪಯೋಗ ಪಡಿಸಿಕೊಳ್ಳಬೇಕು. ಗರ್ಭಿಣಿಯರು  ಕಡ್ಡಾಯವಾಗಿ ಹೆರಿಗೆಗೆ ಮುನ್ನ 3 ಬಾರಿ ವೈದ್ಯಕೀಯ ತಪಾಸಣೆಗೆ ಒಳಗಾಗಬೇಕು. ಗರ್ಭಿಣಿ  ತನಗೆ ನೀಡಿರುವ ತಾಯಿ ಕಾರ್ಡ್‌ನ್ನು ಬೇರೆಯವರೊಂದಿಗೆ ಕಳುಹಿಸದೇ ಕಡ್ಡಾಯವಾಗಿ ತಾವೇ ಬಂದು ಪರೀಕ್ಷೆಗೆ ಒಳಪಡಬೇಕು.  ಇದರಿಂದ ಗರ್ಭಿಣಿಯಲ್ಲಿ ಆಗುವ ಬದಲಾವಣೆಗಳನ್ನು ಗಮನಿಸಿಕೊಂಡು ಹೆಚ್ಚಿನ ಚಿಕಿತ್ಸೆ ಅವಶ್ಯಕತೆ ಕಂಡು ಬಂದಲ್ಲಿ ಪಡೆಯಲು ಸಹಾಯವಾಗುತ್ತದೆ.  ಎಂದರು.ಹುಯಿಲಗೋಳದ ಹಿರಿಯ ಆರೋಗ್ಯ ಸಹಾಯಕ ಆರ್.ಕೆ. ರಡ್ಢೆರ ಮಾತನಾಡಿ, ಮಗುವಿಗೆ 7 ಮಾರಕ ರೋಗಗಳನ್ನು ತಪ್ಪಿಸಲು ಸರಿಯಾದ ಸಮಯಕ್ಕೆ ಚುಚ್ಚು ಮದ್ದುಗಳನ್ನು ಹಾಕಿಸಬೇಕು.  ಇವು ಸರಕಾರಿ ಆಸ್ಪತ್ರೆಗಳಲ್ಲಿ ಉಚಿತವಾಗಿರುತ್ತವೆ. ತಾಯಿ ಮತ್ತು ಮಗುವಿನ ಆರೋಗ್ಯಕ್ಕೆ ಸಂಬಂಧಿಸಿದ ಎಲ್ಲ ಯೋಜನೆಗಳೂ ಉಚಿತವಾಗಿದ್ದು ಅವುಗಳ ಸದುಪಯೋಗವನ್ನು ಎಲ್ಲರೂ ಪಡೆದುಕೊಳ್ಳಬೇಕು ಎಂದರು.  ಗ್ರಾಮ ಪಂಚಾಯಿತಿ ಸದಸ್ಯೆ  ಫಕೀರವ್ವ,  ಕ್ಷೇತ್ರ ಪ್ರಚಾರ ಸಹಾಯಕ ಸಿ.ಕೆ. ಸುರೇಶ, ಕಿರಿಯ ಆರೋಗ್ಯ ಮಹಿಳಾ ಸಹಾಯಕಿ  ಭಾಗ್ಯಮ್ಮ ಹಾಜರಿದ್ದರು. ಶಿವಾನಂದ ನಿರೂಪಿಸಿದರು. ರಾಜಕುಮಾರ ವಂದಿಸಿದರು. 

ಅಹವಾಲು ಸ್ವೀಕಾರಗದಗ: ಲೋಕಾಯುಕ್ತ  ಅಧಿಕಾರಿಗಳು  ಜಿಲ್ಲೆಯ ತಾಲೂಕುಗಳಿಗೆ ನಿಗದಿಪಡಿಸಿದ ದಿನಾಂಕ ಮತ್ತು ವೇಳೆಯಲ್ಲಿ ಭೇಟಿ ನೀಡಿ ಸಾರ್ವಜನಿಕರ ಕುಂದು ಕೊರತೆಗಳ ಬಗ್ಗೆ ದೂರು,  ಅರ್ಜಿ ಅಹವಾಲು  ಸ್ವೀಕರಿಸಲಿದ್ದಾರೆ.ಜಿ.ಆರ್.ಪಾಟೀಲ ಮತ್ತು  ಸಂಗನಗೌಡ  ನ.19  ರಂದು ಬೆಳ್ಳಿಗ್ಗೆ 11 ರಿಂದ ಮಧ್ಯಾಹ್ನ 1 ಗಂಟೆವರೆಗೆ  ನರಗುಂದ  ತಾಲೂಕು ಪಂಚಾಯತಿ ಸಭಾ ಭವನದಲ್ಲಿ,    20ರಂದು ಬೆಳಿಗ್ಗೆ 11 ರಿಂದ  1 ಗಂಟೆಯವರೆಗೆ  ರೋಣ  ತಾಲೂಕಾ ಪಂಚಾಯತ್  ಸಭಾಭವನದಲ್ಲಿ,  ಜಿ.ಆರ್. ಪಾಟೀಲ್ ಮತ್ತು  ಎಂ.ಐ. ನಡುವಿನಮನಿ    21  ರಂದು ಬೆಳಿಗ್ಗೆ 11 ರಿಂದ 1 ಗಂಟೆವರೆಗೆ ಮುಂಡರಗಿ  ತಾಲ್ಲೂಕು ಪಂಚಾಯತ್ ಸಭಾಭವನದಲ್ಲಿ,  22  ರಂದು ಬೆಳಿಗ್ಗೆ 11 ರಿಂದ 1  ಗಂಟೆಯವರೆಗೆ ಶಿರಹಟ್ಟಿಯ ಬೇಂದ್ರೆ ಭವನದಲ್ಲಿ ಅಹವಾಲು ಸ್ವೀಕರಿಸುವರು.  ಗದಗ ತಾಲೂಕಿಗೆ ಸಂಬಂಧಿಸಿದಂತೆ ಯಾವುದಾದರೂ ದೂರು/ಅರ್ಜಿಗಳಿದ್ದಲ್ಲಿ ಗದಗ ಜಿಲ್ಲಾ ಕೇಂದ್ರದಲ್ಲಿರುವ ಆರಕ್ಷಕ ಉಪಾಧೀಕ್ಷಕರು ಮತ್ತು ಪೊಲೀಸ್ ಇನ್ಸ್‌ಪೆಕ್ಟರ್  ಲೋಕಾಯುಕ್ತ ಕಚೇರಿಗೆ ಪ್ರತಿ ದಿನ ಅರ್ಜಿ, ದೂರು ಸಲ್ಲಿಸಬಹುದಾಗಿದೆ.ದಿನಾಂಕ ಮುಂದೂಡಿಕೆ

ಗದಗ
: ಕರ್ನಾಟಕ ವಿಜ್ಞಾನ ಮತ್ತು ತಂತ್ರಜ್ಞಾನ ಅಕಾಡೆಮಿಯ ಐದನೇ ಸಮ್ಮೇಳನವನ್ನು   ಸಾಮಾಜಿಕ ಪರಿವರ್ತನೆಗಾಗಿ ವಿಜ್ಞಾನ ಮತ್ತು ತಂತ್ರಜ್ಞಾನ  ಎಂಬ ಕೇಂದ್ರ ವಿಷಯದಡಿ ಡಾ. ಡಿ. ಪ್ರೇಮಚಂದ್ರ ಸಾಗರ್ ಆಡಿಟೋರಿಯಂ ಮತ್ತು ಸೆಂಟರ್ ಫಾರ್ ಪರ್‌ಫಾರ್ಮಿಂಗ್ ಆರ್ಟ್ಸ್, ದಯಾನಂದ ಸಾಗರ್ ವಿದ್ಯಾಸಂಸ್ಥೆ, ಕುಮಾರಸ್ವಾಮಿ ಬಡಾವಣೆ, ಬೆಂಗಳೂರು-560 078 ಇಲ್ಲಿ 2012 ರ ಡಿಸೆಂಬರ್ 13-14 ರಂದು ಆಯೋಜಿಸುವುದಾಗಿ ತಿಳಿಸಲಾಗಿತ್ತು.  ಕಾರಣಾಂತರಗಳಿಂದ ಸಮ್ಮೇಳನದ ದಿನಾಂಕವನ್ನು ಡಿಸೆಂಬರ್ 19 ಮತ್ತು 20 ರಂದು ನಿಗದಿಪಡಿ ಸಲಾಗಿದೆ. 

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.