ಮಂಗಳವಾರ, ಜನವರಿ 28, 2020
25 °C

ಗವಿಪುರಂನಲ್ಲಿ ಮಾಹಿತಿ ಇಲ್ಲ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಗವೀಪುರಂ ಬಡಾವಣೆಯಲ್ಲಿ ಲೋಹದ ನಾಮಫಲಕ ಸಿದ್ಧವಾಗಿದೆ. ಆದರೆ ಬಡಾವಣೆಯ ಹೆಸರು ಮತ್ತು ರಸ್ತೆಗಳ ಹೆಸರನ್ನು ಇನ್ನೂ ಬರೆಸಿಲ್ಲ.  ಬರೆಯುವವರಿಗೆ ಸಮರ್ಪಕ ಮಾಹಿತಿ ಇಲ್ಲ. ಉದಾಹರಣೆಗೆ ಅಡ್ಡ ರಸ್ತೆ ಹಾಗೂ ಮುಖ್ಯ ರಸ್ತೆ ಸಂಧಿಸುವಲ್ಲಿ ಅಂಗಡಿಯ ಮಾಲೀಕರೊಬ್ಬರು 3ನೇ ಅಡ್ಡರಸ್ತೆ ಎಂದು ಮಾತ್ರ ಬರೆದಿದ್ದಾರೆ.  ನಾಮಫಲಕ ಬರೆಯುವವರು ಅಂಗಡಿಯ ವಿಳಾಸದಂತೆಯೇ  ಬರೆಯುತ್ತಿದ್ದರು. 3ನೇ ಮುಖ್ಯ ರಸ್ತೆ ಎಂದು ಬರೆಯಲು ಕೋರಿದರೆ, ಪುನಹ ಬರುತ್ತೇವೆಂದು ಜಾರಿಕೊಂಡಿದ್ದಾರೆ. ಅದು 3ನೇ ಮುಖ್ಯರಸ್ತೆ ಎಂದು ಆಗಬೇಕಿತ್ತು. 3ನೇ ಅಡ್ಡರಸ್ತೆ ಎಂದಾಗಿದೆ. ಇನ್ನು ಮುಂದಿನ ವಿಳಾಸಗಳನ್ನಾದರೂ ಸಮರ್ಪಕ ಮಾಹಿತಿ ನೀಡಿ ಬರೆಸಿ. 

ಪ್ರತಿಕ್ರಿಯಿಸಿ (+)