ನವದೆಹಲಿ (ಪಿಟಿಐ): ಮಹಾತ್ಮ ಗಾಂಧೀಜಿ ಅವರನ್ನು ಹತ್ಯೆ ಮಾಡಿದ ಸ್ಥಳದಿಂದ ಸಂಗ್ರಹಿಸಿದ ರಕ್ತಸಿಕ್ತ ಚಿಟಿಕೆ ಮಣ್ಣನ್ನು ನದಿಯಲ್ಲಿ ಅಥವಾ ಸಮುದ್ರದಲ್ಲಿ ವಿಸರ್ಜಸಿ ಎಂದು ಗಾಂಧಿ ಅವರ ಮೊಮ್ಮಗಳಾದ ತಾರಾ ಗಾಂಧಿ ಭಟ್ಟಾಚಾರ್ಜಿ, ಲಂಡನ್ನಲ್ಲಿ ಇತ್ತೀಚೆಗೆ ನಡೆದ ಹರಾಜಿನಲ್ಲಿ ಅದನ್ನು ಖರೀದಿಸಿರುವವರಿಗೆ ಮನವಿ ಮಾಡಿಕೊಂಡಿದ್ದಾರೆ.

ಗಾಂಧಿ ಅವರ ಸ್ಮರಣಾ ವಸ್ತುಗಳನ್ನು ಹರಾಜು ಹಾಕುವುದು ನ್ಯಾಯಸಮ್ಮತವಲ್ಲ. ಇಂಥ ನಡವಳಿಕೆಗಳು ಮುಂದುವರಿಯುತ್ತಲೇ ಹೋದರೆ ಎಲ್ಲರೂ ಅಸಹಾಯಕರಾಗಬೇಕಾಗುತ್ತದೆ ಎಂದು ಅವರು ಹೇಳಿಕೆಯಲ್ಲಿ ತಿಳಿಸಿದ್ದಾರೆ.

ಆ ಚಿಟಿಕೆ ಮಣ್ಣು ನಿಜವಾಗಿಯೂ ಗಾಂಧಿ ಅವರ ಹತ್ಯೆ ನಡೆದ ಸ್ಥಳದಿಂದಲೇ ಸಂಗ್ರಹಿಸಿದ್ದೇ, ಅಲ್ಲವೇ ಎನ್ನುವುದನ್ನು ನಾವೇನೂ ತನಿಖೆ ಮಾಡಲಾರೆವು. ಆದರೆ ಅದನ್ನು ಯಾವುದಾದರೂ ನದಿ ಅಥವಾ ಸಮುದ್ರದಲ್ಲಿ ವಿಸರ್ಜಿಸಿ ಎಂದು ಅದರ ಖರೀದಿದಾರರನ್ನು ಕೋರಲು ಇನ್ನೂ ಕಾಲ ಮಿಂಚಿಲ್ಲ ಎಂದು ಅವರು ಹೇಳಿದ್ದಾರೆ.

1948ರಲ್ಲಿ ಗಾಂಧೀಜಿ ಅವರ ಹತ್ಯೆ ನಡೆದ ಸ್ಥಳದಿಂದ ಸಂಗ್ರಹಿಸಿದ ಚಿಟಿಕೆ ಮಣ್ಣು ಹಾಗೂ ರಕ್ತಸಿಕ್ತ ಹುಲ್ಲು ಇದೇ ತಿಂಗಳ 17ರಂದು ಲಂಡನ್ನಲ್ಲಿ ನಡೆದ ಹರಾಜಿನಲ್ಲಿ ಹತ್ತು ಸಾವಿರ ಪೌಂಡ್ಗಳಿಗೆ ಹರಾಜಾಗಿತ್ತು.

ಗಾಂಧೀಜಿ ಅವರ ನೆನಪಿನ ವಸ್ತುಗಳಾದ ಚರಕ ಮತ್ತು ವೃತ್ತಾಕಾರದ ಕನ್ನಡಕ ಈಗಾಗಲೇ ಹರಾಜಾಗಿದ್ದು, ಅವರ ವಸ್ತುಗಳೆಲ್ಲವನ್ನೂ ಭಾರತಕ್ಕೆ ವಾಪಸ್ ತರಬೇಕೆಂದು ಪದೇ ಪದೇ ಬಯಸುವುದೂ ಸರಿಯಲ್ಲ ಎಂದು ಅವರು ಹೇಳಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.