ಶನಿವಾರ, ಫೆಬ್ರವರಿ 27, 2021
25 °C

ಗಾದ್ರೇಜ್ ಟೈಸನ್‌ನಿಂದ ಚಿಕನ್ ಪರಾಠಾ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಗಾದ್ರೇಜ್ ಟೈಸನ್‌ನಿಂದ ಚಿಕನ್ ಪರಾಠಾ

ಶೈತ್ಯೀಕರಿಸಿದ ಆಹಾರೋತ್ಪನ್ನಗಳನ್ನು ನೆಚ್ಚಿಕೊಂಡವರಿಗಾಗಿ ರಿಯಲ್ ಗುಡ್ ಯಮ್ಮೀಸ್ ಚಿಕನ್ ಪರಾಠಾವನ್ನು ಗಾದ್ರೇಜ್ ಟೈಸನ್ ಬಿಡುಗಡೆ ಮಾಡಿದೆ.ಪರಾಠಾಗಳಿಗೆ ಬೇಡಿಕೆ ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ (ದೇಶದಲ್ಲಿ ಪ್ರಸ್ತುತ ಇರುವ ಬೇಡಿಕೆ 3700 ಮೆಟ್ರಿಕ್ ಟನ್) ಮತ್ತು ಗೃಹಿಣಿಯರ ಜವಾಬ್ದಾರಿಗಳನ್ನು ಸರಳಗೊಳಿಸುವ ನಿಟ್ಟಿನಲ್ಲಿ ಸುರಕ್ಷಿತ ಮತ್ತು ಪ್ರೊಟೀನ್‌ಯುಕ್ತ ಉತ್ಪನ್ನಗಳನ್ನು ಗ್ರಾಹಕರಿಗೆ ಒದಗಿಸಲಾಗುತ್ತಿದೆಚಿಕನ್ ಖೀಮಾ ಪರಾಠಾ ತಾಜಾ ಸ್ವಾದವನ್ನು ಕಾಯ್ದುಕೊಂಡಿರುವುದು ವಿಶೇಷ ಎಂದು ಗಾದ್ರೇಜ್ ಟೈಸನ್ ಆಹಾರದ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಅರಬಿಂದ್ ದಾಸ್ ಅಭಿಪ್ರಾಯಪಟ್ಟಿದ್ದಾರೆ.ಭಾರತೀಯರಲ್ಲಿ ಬದಲಾಗುತ್ತಿರುವ ಆಹಾರ ಪದ್ಧತಿಗಳ ಸ್ಥಿತಿಗತಿಯ ಲಾಭವನ್ನು ತನ್ನದಾಗಿಸಿಕೊಳ್ಳಲು ಗಾದ್ರೇಜ್ ಟೈಸನ್ ಸಿದ್ಧವಾಗಿದೆ. ಭಾರತದ ಪ್ರೊಟೀನ್‌ನ ಅವಶ್ಯಕತೆಗಳಿಗೆ, ಕೋಳಿ ಮಾಂಸ ಉತ್ತಮ ಪರಿಹಾರ ಎಂಬ ಅಂಶವನ್ನೂ ನಾವು ಗಮನದಲ್ಲಿಟ್ಟುಕೊಂಡು ಮುಂದಿನ ವರ್ಷಗಳಲ್ಲಿ ಉದ್ಯಮವನ್ನು ವಿಸ್ತರಿಸಲಿದ್ದೇವೆ ಎಂದೂ ಅವರು ಹೇಳಿದ್ದಾರೆ. ರಿಯಲ್ ಗುಡ್ ಪರಾಠಾದ 320 ಗ್ರಾಂ ಪೊಟ್ಟಣಕ್ಕೆ ರೂ.97 ಬೆಲೆಯಿದ್ದು,  ಎಲ್ಲಾ ಪ್ರಮುಖ ಮಳಿಗೆಗಳಲ್ಲಿ ದೊರೆಯುತ್ತದೆ.

 

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.