ಕಾರವಾರ: ಸಮುದ್ರದಲ್ಲಿರುವ ಕಲ್ಲುಬಂಡೆಗಳ ಮಧ್ಯೆ ಹೆಚ್ಚಾಗಿ ವಾಸ ಮಾಡುವ ಕುರುಡೆ, ಕೊಕ್ಕರ್, ಕೆಮ್ಸು ಮೀನು ಹಿಡಿಯಲು ಪಾತಿ ದೋಣಿಯಲ್ಲಿ ತೆರಳಿದ್ದ ಮೀನುಗಾರರ ಗಾಳಕ್ಕೆ ಅಪರೂಪದ ಮೀನೊಂದು ಸಿಲುಕಿ ಬಿದ್ದು ಅಚ್ಚರಿ ಮೂಡಿಸಿದೆ.

ಈ ಅಪರೂಪದ ಮೀನಿಗೆ ಸ್ಥಳೀಯವಾಗಿ ಯಾವುದೇ ಹೆಸರಿಲ್ಲ. `ಬ್ಲಾಸ್ಟಿಡಾ~ ವರ್ಗಕ್ಕೆ ಸೇರಿದ ಮೀನಿನ ವೈಜ್ಞಾನಿಕ ಹೆಸರು `ಸಪ್ಲಾಮೆನ್ ಪ್ರೆನಟಮ್~. ಇವುಗಳ ಜೀವಿತಾವಧಿ 2ರಿಂದ3 ವರ್ಷ. ಗಾಳಕ್ಕೆ ಸಿಕ್ಕ ಈ ಮೀನು 26 ಸೆಂ.ಮೀ. ಉದ್ದ, ರೆಕ್ಕೆ ಸೇರಿ 10 ಅಂಗುಲ ಅಗಲ, 500 ಗ್ರಾಂ. ತೂಕವಿದೆ. ಹವಳದ ದಿಬ್ಬವಿರುವ ಪ್ರದೇಶದಲ್ಲಿ ಹೆಚ್ಚಾಗಿ ಕಂಡುಬರುವ ಈ ಮೀನುಗಳು ಸುಮಾರು 38 ಸೆಂ. ಮೀವರೆಗೆ ಬೆಳೆಯುತ್ತವೆ.

ಸಮುದ್ರದಲ್ಲಿ ಎಂಟರಿಂದ 180 ಮೀಟರ್ ಆಳದದಲ್ಲಿ ಇವು ವಾಸ ಮಾಡುತ್ತವೆ. ಕಪ್ಪೆಚಿಪ್ಪು, ಸಿಗಡಿ, ಮೃದ್ವಂಗಿ, ಸಣ್ಣ ಜಲಚರಗಳು ಇದರ ಪ್ರಮುಖ ಆಹಾರ. ಈ ಮೀನುಗಳು ಗಿಲ್ನೆಟ್ ಅಥವಾ ಆಳಸಮುದ್ರ ಮೀನುಗಾರಿಕೆ ನಡೆಸುವ ದೋಣಿಗಳ ಬಲೆಗೆ ಹೆಚ್ಚಾಗಿ ಬೀಳುತ್ತವೆ.

ಈ ಮೀನುಗಳು ರೆಡ್ಲಿಸ್ಟ್ ಅಥವಾ ಅಳಿವಿನಂಚಿನಲ್ಲಿರುವ ಜೀವಿಗಳ ಪಟ್ಟಿಯಲ್ಲಿ ಸೇರಿಲ್ಲ. ಬದಲಾಗಿ ವಿಶೇಷ ಆಕೃತಿಯ ಮೀನು ಎಂದು ಗುರುತಿಸಲಾಗಿದೆ.

`ಹಿಂದೂ ಮಹಾಸಾಗರ, ಹವಾಯಿ ದ್ವೀಪಗಳು, ದಕ್ಷಿಣಪೂರ್ವ ಆಫ್ರಿಕಾ ಕರಾವಳಿಯಲ್ಲಿ ಹೆಚ್ಚಾಗಿ ಇವು ಕಂಡುಬರುತ್ತವೆ. ನೀರಿನ ಸೆಳೆತಕ್ಕೆ ಅಥವಾ ಗುಂಪಿನಿಂದ ಪತ್ಯೇಕಗೊಂಡ ಈ ಮೀನು ಗಾಳಕ್ಕೆ ಸಿಕ್ಕಿರಬಹುದು~ ಎಂದು ಕರ್ನಾಟಕ ವಿವಿಯ ಕಡಲಜೀವಶಾಸ್ತ್ರ ವಿಭಾಗದ ಉಪನ್ಯಾಸಕರಾದ ಡಾ. ಉಲ್ಲಾಸ ನಾಯಕ ಮತ್ತು ಡಾ. ಶಿವಪ್ರಸಾದ ಹರಗಿ ಹೇಳುತ್ತಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.