ಗಾಂಧಿನಗರ (ಪಿಟಿಐ): ಕಳೆದೊಂದು ದಶಕದಿಂದ ಖಾಲಿ ಇದ್ದ ಗುಜರಾತ್ ಲೋಕಾಯುಕ್ತ ಸ್ಥಾನಕ್ಕೆ ರಾಜ್ಯ ಹೈಕೋರ್ಟ್ ನಿವೃತ್ತ ನ್ಯಾಯಮೂರ್ತಿ ಡಿ.ಪಿ. ಬೂಚ್ ಅವರನ್ನು ನೇಮಕಮಾಡಿ ರಾಜ್ಯಪಾಲರಾದ ಕಮಲಾ ಬೇನಿವಾಲ್ ಆದೇಶ ಹೊರಡಿಸಿದ್ದಾರೆ.

ಮುಖ್ಯಮಂತ್ರಿ ನರೇಂದ್ರ ಮೋದಿ ಹಾಗೂ ವಿಧಾನಸಭೆ ಸ್ಪೀಕರ್ ವಾಜು ವಾಲಾ ಸಮ್ಮುಖ ರಾಜಭವನದಲ್ಲಿ ನಡೆದ ಸಮಾರಂಭದಲ್ಲಿ ನ್ಯಾ. ಬೂಚ್ ಅಧಿಕಾರ ಸ್ವೀಕರಿಸಿದರು.

ಈ ಹಿಂದಿನ ಲೋಕಾಯುಕ್ತ ನ್ಯಾಯಮೂರ್ತಿ ಆರ್.ಎಂ.ಸೋನಿ ಅವರ ಅಧಿಕಾರಾವಧಿ 2003ರ ಡಿಸೆಂಬರ್ಗೆ ಕೊನೆಗೊಂಡಿದ್ದು ನಂತರ ಈ ಸ್ಥಾನ ಖಾಲಿ ಉಳಿದಿತ್ತು. ಲೋಕಾಯುಕ್ತರ ಹುದ್ದೆಗೆ ನೇಮಕಮಾಡುವ ಸಂಬಂಧ ರಾಜ್ಯಪಾಲರ ಜತೆ ಮೋದಿ ಸರ್ಕಾರ 2011ರಿಂದಲೇ ಸಂಘರ್ಷ ನಡೆಸುತ್ತಿತ್ತು.
ಬಿಜೆಪಿಯ ಪ್ರಧಾನಿ ಅಭ್ಯರ್ಥಿ ಮೋದಿ ಪದೇ ಪದೇ ಭ್ರಷ್ಟಾಚಾರದ ಬಗ್ಗೆ ಮಾತನಾಡುತ್ತಿದ್ದಾರೆಯೇ ಹೊರತು ತಮ್ಮದೇ ರಾಜ್ಯದಲ್ಲಿ ಹತ್ತು ವರ್ಷಗಳಿಂದ ಲೋಕಾಯುಕ್ತರನ್ನು ನೇಮಕಮಾಡುವಲ್ಲಿ ವಿಫಲರಾಗಿದ್ದಾರೆ ಎಂದು ವಿರೋಧಪಕ್ಷ ಕಾಂಗ್ರೆಸ್ನಿಂದ ಹಲವು ಬಾರಿ ವಾಗ್ದಾಳಿಗೆ ಒಳಗಾಗಿದ್ದರು.

ರಾಜ್ಯ ಸರ್ಕಾರವನ್ನು ವಿಶ್ವಾಸಕ್ಕೆ ತೆಗೆದುಕೊಳ್ಳದೆಯೇ ನಿವೃತ್ತ ನ್ಯಾ. ಆರ್.ಎ. ಮೆಹ್ತಾ ಅವರನ್ನು 2011ರ ಆ. 25ರಂದು ಲೋಕಾಯುಕ್ತರನ್ನಾಗಿ ನೇಮಕ ಮಾಡಿದ್ದ ರಾಜ್ಯಪಾಲರ ಕ್ರಮ ವಿರೋಧಕ್ಕೆ ಕಾರಣವಾಗಿತ್ತು. ಇದಾದ ನಂತರ ಅಧಿಕಾರವಹಿಸಿಕೊಳ್ಳಲು ನ್ಯಾ.ಮೆಹ್ತಾ ನಿರಾಕರಿಸಿದ್ದರಿಂದ ಬಿಕ್ಕಟ್ಟು ಉಲ್ಬಣಿಸಿತ್ತು. ರಾಜ್ಯಪಾಲರು ಹಾಗೂ ಸರ್ಕಾರದ ನಡುವಿನ ಈ ಕದನ ಸುಪ್ರೀಂಕೋರ್ಟ್ ತಲುಪಿದ್ದು ಕೋರ್ಟ್ ರಾಜ್ಯಪಾಲರ ನಿರ್ಧಾರ ಎತ್ತಿಹಿಡಿದಿತ್ತು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.