ಚಾಮರಾಜನಗರ: ‘ರಾಜ್ಯದಲ್ಲಿ ಬಿಜೆಪಿ ಸರ್ಕಾರ ಭ್ರಷ್ಟ ಆಡಳಿತ ನಡೆಸಿತ್ತು. ಆ ಪಕ್ಷಕ್ಕೆ ಈಗ ಮತದಾರರಿಗೆ ಮುಖ ತೋರಿಸಲು ಆಗುತ್ತಿಲ್ಲ. ಹೀಗಾಗಿ, ಲೋಕಸಭಾ ಚುನಾವಣೆಗೆ ನರೇಂದ್ರ ಮೋದಿಯನ್ನು ಮುಂದಿಟ್ಟುಕೊಂಡು ಪ್ರಚಾರ ನಡೆಸುತ್ತಿದೆ’ ಎಂದು ಮುಖ್ಯ ಮಂತ್ರಿ ಸಿದ್ದರಾಮಯ್ಯ ವ್ಯಂಗ್ಯವಾ ಡಿದರು.

ಜಿಲ್ಲೆಯ ಕೊಳ್ಳೇಗಾಲ ಪಟ್ಟಣದಲ್ಲಿ ಭಾನುವಾರ ನಡೆದ ಹನೂರು ಮತ್ತು ಕೊಳ್ಳೇಗಾಲ ವಿಧಾನಸಭಾ ಕ್ಷೇತ್ರದ ಕಾಂಗ್ರೆಸ್ ಕಾರ್ಯಕರ್ತರ ಸಭೆಯಲ್ಲಿ ಅವರು ಮಾತನಾಡಿದರು.

‘ಗುಜರಾತ್ನಲ್ಲಿ 1ರಿಂದ 10ನೇ ತರಗತಿ ಹಂತ ತಲುಪುವ ವೇಳೆಗೆ ಶೇ 60ರಷ್ಟು ವಿದ್ಯಾರ್ಥಿಗಳು ಶಾಲೆಯಿಂದ ಹೊರಗುಳಿಯುತ್ತಿದ್ದಾರೆ. ಅಲ್ಲಿ 54 ಮಕ್ಕಳಿಗೆ ಒಬ್ಬ ಶಿಕ್ಷಕ ಇದ್ದಾರೆ. ತಲಾ ಆದಾಯದಲ್ಲಿ ಗುಜರಾತ್ 12ನೇ ಸ್ಥಾನದಲ್ಲಿದೆ. ಆರೋಗ್ಯಕ್ಕೆ ಕರ್ನಾಟಕ ರಾಜ್ಯ ಸರ್ಕಾರ ಬಜೆಟ್ನಲ್ಲಿ ಶೇ 6ರಷ್ಟು ಹಣ ವೆಚ್ಚ ಮಾಡುತ್ತಿದೆ. ಮೋದಿ ಬಜೆಟ್ನಲ್ಲಿ ಶೇ 3ರಷ್ಟು ವ್ಯಯಿಸು ತ್ತಾರೆ. ಇದು ಅಭಿವೃದ್ಧಿಯೇ? ಎಂದು ಪ್ರಶ್ನಿಸಿದರು.

12 ವರ್ಷದ ಹಿಂದೆ ಮೋದಿ ಮುಖ್ಯಮಂತ್ರಿಯಾಗಿ ಚುಕ್ಕಾಣಿ ಹಿಡಿದ ವೇಳೆ ಗುಜರಾತಿನ ಸಾಲ ₨ 47 ಸಾವಿರ ಕೋಟಿ ಇತ್ತು. ಈಗ ₨ 1.76 ಲಕ್ಷ ಕೋಟಿಗೆ ಏರಿಕೆಯಾಗಿದೆ. ಇದು ಮಾದರಿ ರಾಜ್ಯದ ಪರಿಕಲ್ಪನೆಯೇ? ಎಂದು ಹರಿಹಾಯ್ದರು.

‘ಪ್ರಧಾನಿ ಡಾ.ಮನಮೋಹನಸಿಂಗ್ ಭ್ರಷ್ಟಾಚಾರಿ ಎಂದು ಮೋದಿ ಸಮಾ ವೇಶದಲ್ಲಿ ಭಾಷಣ ಮಾಡುತ್ತಾರೆ. ಆಗ ಅವರ ಪಕ್ಕದಲ್ಲಿಯೇ ಮಾಜಿ ಮುಖ್ಯ ಮಂತ್ರಿ ಬಿ.ಎಸ್. ಯಡಿಯೂರಪ್ಪ, ಕೆ.ಎಸ್. ಈಶ್ವರಪ್ಪ ಕುಳಿತಿರುತ್ತಾರೆ. ಇವರು ಸತ್ಯಹರಿಶ್ಚಂದ್ರರೇ? ಬಿಜೆಪಿಯ ಜನಾರ್ದನ ರೆಡ್ಡಿ ಜೈಲಿನಲ್ಲಿದ್ದಾರೆ. ಯಡಿಯೂರಪ್ಪ ಜಾಮೀನಿನ ಮೇಲೆ ಹೊರಗಿದ್ದಾರೆ ಎಂಬ ಕನಿಷ್ಠ ಜ್ಞಾನ ಮೋದಿಗಿಲ್ಲವೇ? ಎಂದು ಟೀಕಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.