ಹುಬ್ಬಳ್ಳಿ: ವಾರದ ಹಿಂದೆ ಮಳೆ ಸುರಿದರೂ ಮತ್ತೆ ಬಿಸಿಲ ಬೇಗೆಯಿಂದ ಬಳಲಿದ್ದ ಜನತೆಗೆ ಬುಧವಾರ ಮಧ್ಯಾಹ್ನದಿಂದ ಅವಳಿನಗರ ಸೇರಿದಂತೆ ಜಿಲ್ಲೆಯ ವಿವಿಧೆಡೆ ಸುರಿದ ರೇವತಿ ಮಳೆ ಬಯಲು ನಾಡಿನಲ್ಲಿ ಮಲೆನಾಡಿನ ವಾತಾವರಣ ಸೃಷ್ಟಿಸಿತು.

ಗುಡುಗು-ಸಿಡಲಿನ ಆರ್ಭಟ ಹಾಗೂ ಆಲಿಕಲ್ಲಿನೊಂದಿಗೆ ಮಧ್ಯಾಹ್ನ 3.30 ಗಂಟೆಗೆ ಆರಂಭವಾದ ಮಳೆ ಮಧ್ಯದಲ್ಲಿ ಕೆಲ ಹೊತ್ತು ಬಿಡುವು ನೀಡಿದರೂ ರಾತ್ರಿಯವರೆಗೂ ಬಿಡದೆ ಸುರಿಯಿತು. ಕುಂದಗೋಳ ತಾಲ್ಲೂಕಿನ ಪುರ ಗ್ರಾಮದಲ್ಲಿ ಸಿಡಿಲು ಬಡಿದು ಬಸಪ್ಪ ದೊಡಮನಿ (40) ಸಾವಿಗೀಡಾಗಿದ್ದಾರೆ ಎಂದು ಜಿಲ್ಲಾಧಿಕಾರಿ ದರ್ಪಣ ಜೈನ್ `ಪ್ರಜಾವಾಣಿ~ಗೆ ತಿಳಿಸಿದರು.

ಮೋಡ ಮುಸುಕಿದ ವಾತಾವರಣ ತಂಪು ಸೃಷ್ಟಿಸಿ ಸಾರ್ವಜನಿಕರು ರಾತ್ರಿಯ ವೇಳೆಗೆ ಬೆಚ್ಚನೆಯ ಉಡುಪಿಗೆ ಮೊರೆ ಹೋಗಬೇಕಾಯಿತು. ಹುಬ್ಬಳ್ಳಿ ವಿಮಾನ ನಿಲ್ದಾಣದಲ್ಲಿ ದಿನದ ಗರಿಷ್ಠ ಉಷ್ಣಾಂಶ 26.4 ಡಿಗ್ರಿ ಸೆಲ್ಸಿಯಸ್ ದಾಖಲಾಗಿದ್ದರೆ, ಕನಿಷ್ಠ ಉಷ್ಣಾಂಶ 21.5 ಡಿಗ್ರಿ ಸೆಲ್ಸಿಯಸ್ ದಾಖಲಾಗಿದೆ.

ಮಳೆಯಿಂದಾಗಿ ರಸ್ತೆ, ಚರಂಡಿ ಹಾಗೂ ತಗ್ಗು ಪ್ರದೇಶ ಗಳಲ್ಲಿ ನೀರು ಹರಿದು ಸಂಚಾರಕ್ಕೆ ಅಡಚಣೆಯಾಯಿತು. ಮಳೆಯ ಸುಳಿವಿಲ್ಲದೇ ಛತ್ರಿ ತರದೆ ಹೊರಗೆ ಬಂದಿದ್ದ ಪಾದ ಚಾರಿ ಗಳು ಅನಿರೀಕ್ಷಿತ ಮಳೆಗೆ ಸಿಲುಕಿ ಬವಣೆ ಅನುಭವಿಸಿದರು.

ಮಳೆಯಿಂದಾಗಿ ಶಾಲೆಯಿಂದ ಮನೆಗೆ ಹೊರಟ ಮಕ್ಕಳು, ಕಚೇರಿ ಸಿಬ್ಬಂದಿ, ಬೀದಿ ಬದಿ ವ್ಯಾಪಾರಿಗಳು ತೊಂದರೆಗೆ ಒಳಗಾದರು. ಆದರ್ಶನಗರದ ಸಂತೆ ಮಳೆಯಿಂದಾಗಿ ಅಸ್ತವ್ಯಸ್ತವಾಯಿತು. ಕಾರವಾರ ರಸ್ತೆಯ ಸಿದ್ಧಾರೂಢ ಮಠದ ಮುಂಭಾಗದ ರಸ್ತೆಗೆ ನೀರು ಸುರಿದು ವಾಹನ ಸಂಚಾರಕ್ಕೆ ತೊಂದರೆಯಾಯಿತು.
ಕಲಘಟಗಿ ಮತ್ತು ಕುಂದಗೋಳ ತಾಲ್ಲೂಕಿನಲ್ಲೂ ಧಾರಾಕಾರ ಮಳೆ ಸುರಿದಿದೆ.

ಹೆಸ್ಕಾಂಗೆ ಹಿಡಿಶಾಪ: ಮಳೆ ಆರಂಭವಾಗುತ್ತಿದ್ದಂತೆಯೇ ಹುಬ್ಬಳ್ಳಿಯ ನವನಗರ, ಉಣಕಲ್, ಬೈರಿದೇವರಕೊಪ್ಪ, ಸಿದ್ದೇಶ್ವರನಗರ ಪ್ರದೇಶಗಳಲ್ಲಿ ವಿದ್ಯುತ್ ವ್ಯತ್ಯಯಗೊಂಡಿದ್ದು, ರಾತ್ರಿಯಾದರೂ ವಿದ್ಯುತ್ ಬಾರದೆ ಅಲ್ಲಿನ ನಿವಾಸಿಗಳು ಹೆಸ್ಕಾಂಗೆ ಹಿಡಿಶಾಪ ಹಾಕಿದರು.

ವಿದ್ಯುತ್ ವ್ಯತ್ಯಯದ ಕಾರಣ ತಿಳಿಯಲು ಪಾಲಿಕೆಯ ನಿಯಂತ್ರಣ ಕೊಠಡಿ (ಕಂಟ್ರೋಲ್ ರೂಂ)ಗೆ ಕರೆ ಮಾಡಿ ಹೆಸ್ಕಾಂನ ದೂರವಾಣಿ ಸಂಖ್ಯೆ ಪಡೆದು ಕರೆ ಮಾಡಿದವರು ಬೆಸ್ತು ಬೀಳಬೇಕಾಯಿತು.

ಹೆಸ್ಕಾಂ ನೀಡಿರುವ ಸಹಾಯವಾಣಿ 2222122 ಸಂಖ್ಯೆಗೆ ಕರೆ ಮಾಡಿದರೆ ಈ ಸಂಖ್ಯೆ ಅಸ್ತಿತ್ವದಲ್ಲಿಯೇ ಇಲ್ಲ ಎಂಬ ಉತ್ತರ ಬಂದರೆ ಹೆಸ್ಕಾಂ ನೀಡಿರುವ ಎಂ.ಎನ್. ಬದ್ದಿ ಎಂಬುವವರ 9449877194 ಮೊಬೈಲ್ ಸಂಖ್ಯೆ ಸ್ವಿಚ್ಡ್ ಆಫ್ ಆಗಿತ್ತು. ನವನಗರದ ಸಂಖ್ಯೆ 2224480, 2225330ಗೆ ಕರೆ ಮಾಡಿದರೂ ಸಂಪರ್ಕ ಸಿಗದೆ ನಿರಾಸೆ ಅನುಭವಿಸಬೇಕಾಯಿತು. ಇದರಿಂದ ಆಕ್ರೋಶಗೊಂಡ ಗ್ರಾಹಕರು ಹೆಸ್ಕಾಂ ಮೇಲಿನ ಸಿಟ್ಟನ್ನು ತಮಗೆ ಕರೆ ಮಾಡಲು ಸಂಖ್ಯೆ ನೀಡಿದ ಪಾಲಿಕೆ ನಿಯಂತ್ರಣ ಕೊಠಡಿಯ ಸಿಬ್ಬಂದಿಯ ಮೇಲೆ ವ್ಯಕ್ತಪಡಿಸಿದ್ದು ಸಾಮಾನ್ಯವಾಗಿತ್ತು.

ಪಾಲಿಕೆ ವ್ಯಾಪ್ತಿಯಲ್ಲಿ ತಡರಾತ್ರಿವರೆಗೂ ಯಾವುದೇ ಅನಾಹುತ ಸಂಭವಿಸಿದ ಬಗ್ಗೆ ವರದಿಯಾಗಿಲ್ಲ ಎಂದು ಆಯುಕ್ತ ಡಾ. ಕೆ.ವಿ. ತ್ರಿಲೋಕಚಂದ್ರ ತಿಳಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.