ಮಂಗಳವಾರ, ಜೂನ್ 15, 2021
22 °C

ಗುಣಮಟ್ಟದ ಶಿಕ್ಷಣ ಬೇಡವೇ?

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ರಾಷ್ಟ್ರೀಯ ಶಿಕ್ಷಣ ನೀತಿಯನ್ನು ಭಾರತದ ಬಹುತೇಕ ರಾಜ್ಯಗಳು ಅಳವಡಿಸಿಕೊಂಡು 9 ರಿಂದ 12ನೆ ತರಗತಿಯವರೆಗೆ ಪ್ರೌಢ ಶಿಕ್ಷಣವೆಂದು ಗುರುತಿಸಿವೆ. ಆದರೆ ಕರ್ನಾಟಕದಲ್ಲಿ ಇದಕ್ಕೆ ವಿರೋಧ ವ್ಯಕ್ತವಾಗುತ್ತಿದೆ.ಪದವಿ ಪೂರ್ವ ಶಿಕ್ಷಣ ಕರ್ನಾಟಕದ ವಿಶೇಷ ಎಂದು ಪರಿಗಣಿಸಿ ವಿರೋಧಿಸುವುದಾದರೆ ಬೇರೆ ರಾಜ್ಯಗಳ, ಕೇಂದ್ರ ಸರ್ಕಾರದ ಶಿಕ್ಷಣಕ್ರಮ ಅವೈಜ್ಞಾನಿಕವೇ? ಕರ್ನಾಟಕ ಹೊರತುಪಡಿಸಿ ಬೇರೆ ರಾಜ್ಯಗಳಲ್ಲಿ ಶಿಕ್ಷಣ ತಜ್ಞರು ಇಲ್ಲವೇ? 9 ಮತ್ತು 10 ನೇ ತರಗತಿಯ ವಿದ್ಯಾರ್ಥಿಗಳಿಗೆ ಸ್ನಾತಕೋತ್ತರ ಪದವೀಧರರು ಬೋಧಿಸಿದರೆ ಶಿಕ್ಷಣದ ಗುಣಮಟ್ಟ ಉತ್ತಮವಾಗುತ್ತದಲ್ಲವೇ? 10ನೇ ತರಗತಿ ಪ್ರವೇಶಿಸುವ ಎಲ್ಲರೂ ಹನ್ನೆರಡನೇ ತರಗತಿಯವರೆಗೆ ಶಿಕ್ಷಣ ಪಡೆಯುತ್ತಾರೆ.

 

ಪ್ರೌಢಶಾಲೆಗಳಿರುವ ಕಡೆ ಹನ್ನೆರಡನೇ ತರಗತಿಯ ಆರಂಭವಾಗುತ್ತದೆ.

ಹಳ್ಳಿ ಮತ್ತು ಪಟ್ಟಣದ ಅಸಮಾನತೆಯನ್ನು ದೂರ ಮಾಡಲು ಇದು ನೆರವಾಗುತ್ತದೆ. ನೆರೆಯ ಆಂಧ್ರಪ್ರದೇಶ ತಮಿಳುನಾಡು ರಾಜ್ಯಗಳು ಆರ್‌ಎಂಎಸ್‌ಎ ನೀತಿಯನ್ನು ಅಳವಡಿಸಿಕೊಂಡು ಅದರನ್ವಯ ಶಿಕ್ಷಕರ ನೇಮಕಕ್ಕೆ ಮುಂದಾಗಿವೆ. ನಮ್ಮ ರಾಜ್ಯದಲ್ಲೂ ವಿರೋಧಕ್ಕೆ ಅರ್ಥವಿಲ್ಲ. ಆರ್‌ಎಂಎಸ್‌ಎ ನೀತಿಯನ್ನು ಜಾರಿಗೆ ತರಲು ಸರ್ಕಾರ ಮುಂದಾಗಬೇಕು.

 

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.