`ನಾನು ಶ್ರೇಯಾ ಅಲ್ಲ ಶ್ರೀಯಾ!'- ಮಾತಿಗಿಳಿಯುವ ಮುನ್ನವೇ ಸ್ಪಷ್ಟಪಡಿಸಿದರು ನಟಿ ಶ್ರೀಯಾ ಶರಣ್. ಶ್ರೀಯಾ ಲಕ್ಷ್ಮೀ ದೇವತೆಯ ಮತ್ತೊಂದು ಹೆಸರು. ಯಶಸ್ಸು ಎಂಬರ್ಥವೂ ಇದೆ. ಶ್ರೀಯಾ ಪಾಲಿಗೆ ಇವು ಅನ್ವರ್ಥ. ರೂಪಾ ಅಯ್ಯರ್ ನಿರ್ದೇಶನದ `ಚಂದ್ರ' ಚಿತ್ರದ ಮೂಲಕ ನಾಯಕನಟಿಯಾಗಿ ಕನ್ನಡ ಚಿತ್ರರಂಗಕ್ಕೆ ಕಾಲಿರಿಸಿದ ಶ್ರೀಯಾ ತಮ್ಮ ಸಿನಿಮಾ ಪಯಣ ಮತ್ತು ಕನಸುಗಳನ್ನು ಮುಕ್ತವಾಗಿ ತೆರೆದಿಟ್ಟರು.

ತೆಲುಗು, ತಮಿಳು ಮತ್ತು ಹಿಂದಿ ಚಿತ್ರರಂಗದಲ್ಲಿ ಜನಪ್ರಿಯರಾದ ಶ್ರೀಯಾ ಕನ್ನಡಿಗರಿಗೆ ಅಷ್ಟು ಪರಿಚಿತರಲ್ಲ. `ಅರಸು' ಚಿತ್ರದಲ್ಲಿ ಅತಿಥಿ ಪಾತ್ರದಲ್ಲಿ ಕಾಣಿಸಿಕೊಂಡಿದ್ದ ಅವರೀಗ `ಚಂದ್ರ' ಚಿತ್ರದಲ್ಲಿ ವೈಭೋಗದ ಲೋಕದಲ್ಲಿನ ಪ್ರೇಯಸಿಯಾಗಿ ಪ್ರೇಮಕಥೆಯನ್ನು ಹೇಳಹೊರಟಿದ್ದಾರೆ.

ನನಗೆ ಪ್ರತಿ ಸಿನಿಮಾವೂ ಮೊದಲ ಮಗುವಿನಂತೆ. ನಟಿಯಾಗಿ ಒಂದು ಸಿನಿಮಾ ಮತ್ತೊಂದು ಸಿನಿಮಾವನ್ನು ಹೋಲಿಕೆ ಮಾಡುವುದು ಸಾಧ್ಯವಿಲ್ಲ. `ಚಂದ್ರ' ನಿಜಕ್ಕೂ ವಿಶಿಷ್ಟ. ಏಕೆಂದರೆ ಇದು ಹೃದಯದಿಂದ ಮೂಡಿರುವ ಸರಳ ಪ್ರೇಮಕಥೆ. ಸಹಜತೆ, ವಾಸ್ತವದೊಂದಿಗೆ ಎಮೋಷನ್ ಬೆರೆತ ಆಧುನಿಕ ಮತ್ತು ಸಾಂಪ್ರದಾಯಿಕ ಚಿತ್ರ. ಚಿತ್ರ ನೋಡಿದವರು ಪ್ರೀತಿಯಲ್ಲಿ ಬೀಳುವುದು ಖಚಿತ ಎಂದರು ಶ್ರೀಯಾ.

ಚಿತ್ರ ಸುಂದರವಾಗಿ ಮೂಡಿಬಂದಿರುವುದು ಅದರಲ್ಲಿರುವ ನಮ್ಮಂಥ ಕಲಾವಿದರಿಂದಲ್ಲ. ರೂಪಾ ಅಯ್ಯರ್ ಹೆಣೆದ ಕಥನವೇ ಸುಂದರವಾಗಿದೆ. ಅದನ್ನು ಅದ್ಭುತ ರೀತಿಯಲ್ಲಿ ನಿರೂಪಿಸಿದ್ದಾರೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದ ಶ್ರೀಯಾ, ರೂಪಾ ಚಿತ್ರರಂಗಕ್ಕೆ ವರದಾನವಾಗಿ ಸಿಕ್ಕ ನಿರ್ದೇಶಕಿ ಎಂದು ಬಣ್ಣಿಸಿದರು. ಎಲ್ಲಾ ಅಡೆತಡೆಗಳನ್ನು ದಾಟಿ ಸಾಗಿರುವ ರೂಪಾ, ಸಂವೇದನಾಶೀಲತೆ, ಭಾವನಾತ್ಮಕತೆ ಎರಡನ್ನೂ ಕಥೆಯೊಳಗೆ ಮಿಳಿತಗೊಳಿಸಿರುವ ಬಗೆಯೇ ವಿಶಿಷ್ಟ ಎಂದರು.

ದೆಹಲಿಯಲ್ಲಿ ಬೆಳೆದ ಶ್ರೀಯಾ ಜನಿಸಿದ್ದು ಹರಿದ್ವಾರದಲ್ಲಿ. ಬಾಲ್ಯದಿಂದಲೂ ಕ್ರಿಯಾಶೀಲ ವ್ಯಕ್ತಿತ್ವ. ಕಥಕ್ ನೃತ್ಯ ಪ್ರಕಾರ ಕಲಿಯುತ್ತಿದ್ದ ಶ್ರೀಯಾ, ತಮ್ಮ ಗುರು ಶೋಭಾ ನಾರಾಯಣ್ ಅವರ ಮೂಲಕ ಮ್ಯೂಸಿಕ್ ವಿಡಿಯೊವೊಂದರಲ್ಲಿ ಕಾಣಿಸಿಕೊಂಡರು. ಅದನ್ನು ನೋಡಿದ ತೆಲುಗು ಚಿತ್ರದ ನಿರ್ದೇಶಕರು ಶ್ರೀಯಾ ಅವರನ್ನು ಬಣ್ಣದ ಲೋಕಕ್ಕೆ ಕರೆತಂದರು.

`ಇಷ್ಟಂ' ಅವರ ಮೊದಲ ಚಿತ್ರ. ಚಿತ್ರೀಕರಣ ಮುಗಿಸಿ ಮತ್ತೆ ಕಾಲೇಜು ಜೀವನಕ್ಕೆ ಮರಳಿದ ಅವರನ್ನು ಚಿತ್ರರಂಗ ಬಿಡಲಿಲ್ಲ. `ತುಝೆ ಮೇರಿ ಕಸಮ್' ಹಿಂದಿ ಚಿತ್ರದಲ್ಲಿ ನಟಿಸುವ ಅವಕಾಶ ಸಿಕ್ಕಿತು. ಮೊದಲ ಚಿತ್ರ ಬಿಡುಗಡೆಯಾಗುವ ಮೊದಲೇ ಶ್ರೀಯಾ ನಾಲ್ಕು ಚಿತ್ರಗಳಿಗೆ ಸಹಿ ಹಾಕಿದ್ದರು. ಉತ್ತರ ದಿಕ್ಕಿನ ನಟಿ ಆಳುತ್ತಿರುವುದು ದಕ್ಷಿಣದ ಚಿತ್ರರಂಗವನ್ನು.

ತಮಿಳು, ತೆಲುಗು ಮತ್ತು ಹಿಂದಿಯಲ್ಲಿ ಬಹುಬೇಡಿಕೆಯ ನಟಿ ಅವರು. ಹನ್ನೆರಡು ವರ್ಷಗಳ ಸಿನಿಮಾಯಾನದಲ್ಲಿ ಅರವತ್ತಕ್ಕೂ ಅಧಿಕ ಚಿತ್ರಗಳಲ್ಲಿ ನಟಿಸಿರುವುದೇ ಇದಕ್ಕೆ ಸಾಕ್ಷಿ. ಸದ್ಯ ಹಿಂದಿಯಲ್ಲಿ `ವಾಲ್ಮೀಕಿ ಬಂಧು' ಮತ್ತು ತೆಲುಗಿನಲ್ಲಿ ನಾಗಾರ್ಜುನ ಜೊತೆ `ಮನನ್' ಚಿತ್ರಗಳಲ್ಲಿ ನಟಿಸುತ್ತಿದ್ದಾರೆ. ಕನ್ನಡದಲ್ಲಿ ಆಹ್ವಾನಗಳಿದ್ದರೂ ಯಾವ ಚಿತ್ರವನ್ನೂ ಅವರು ಒಪ್ಪಿಕೊಂಡಿಲ್ಲವಂತೆ.

ದೇವಸ್ಥಾನದ ಹಿನ್ನೆಲೆಯಲ್ಲಿ ನಡೆಯುವ ಆ್ಯಕ್ಷನ್ ಸನ್ನಿವೇಶಕ್ಕಾಗಿ ಶ್ರೀಯಾ ಕಲರಿಪಯಟ್ಟು ಕಲಿತಿದ್ದಾರೆ. ಈ ಕಲೆ ಅವರಿಗೆ ಹೊಸತಲ್ಲ. ಶಾಲಾ ದಿನಗಳಲ್ಲಿಯೇ ಕೆಲಕಾಲ ಕಲರಿಪಯಟ್ಟನ್ನು ಅಭ್ಯಸಿಸಿದ್ದರು. ಸುಂದರ ಮತ್ತು ನಾಜೂಕಿನ ಸನ್ನಿವೇಶವದು ಎಂದು ಶ್ರೀಯಾ ಬಣ್ಣಿಸುತ್ತಾರೆ.

ಮೈಸೂರು ಅರಮನೆಯಲ್ಲಿ ಚಿತ್ರೀಕರಣ ನಡೆಯುತ್ತಿದ್ದಾಗ ಅಲ್ಲಿದ್ದ ಗ್ರಂಥಾಲಯ ನೋಡಿ ಅವರು ಬೆರಗಾಗಿದ್ದರಂತೆ. ಕುತೂಹಲದಿಂದ ಒಂದು ಪುಸ್ತಕವನ್ನು ಎತ್ತಿಕೊಂಡಾಗ ಮೇಲ್ವಿಚಾರಕರು ಓದಲು ಅವಕಾಶ ನೀಡಲಿಲ್ಲವಂತೆ. ನಟಿಯೆಂಬ ಕಿಮ್ಮತ್ತೂ ಅಲ್ಲಿ ಸಿಕ್ಕಿರಲಿಲ್ಲ. ಆ ಶಿಸ್ತು ಅವರಿಗೆ ಅಚ್ಚರಿ ಉಂಟು ಮಾಡಿತ್ತು.

ಇಬ್ಬರು ನಿರ್ದೇಶಕಿಯರೊಂದಿಗೆ ಕೆಲಸ ಮಾಡಿದ ಅನುಭವ ಶ್ರೀಯಾ ಅವರದ್ದು. ದೀಪಾ ಮೆಹ್ತಾ ನಿರ್ದೇಶನದ `ಮಿಡ್ನೈಟ್ಸ್ ಚಿಲ್ಡ್ರನ್' ಇಂಗ್ಲಿಷ್ ಚಿತ್ರದಲ್ಲಿನ ಅವರ ಅಭಿನಯ ಮೆಚ್ಚುಗೆ ಗಳಿಸಿತ್ತು. ನಿರ್ದೇಶಕ ಅಥವಾ ನಿರ್ದೇಶಕಿ ಎಂಬ ಭೇದ ಇರಕೂಡದು ಎನ್ನುತ್ತಾರೆ ಶ್ರೀಯಾ.

ಆದರೆ ಪುರುಷ ಪ್ರಧಾನ ಚಿತ್ರರಂಗದಲ್ಲಿ ಮಹಿಳೆಯರು ನಿರ್ದೇಶನಕ್ಕಿಳಿಯುವುದು ಸುಲಭವಲ್ಲ. ಜನ ನಿರ್ದೇಶಕಿಯರನ್ನು ಗಂಭೀರವಾಗಿ ಪರಿಗಣಿಸುವುದಿಲ್ಲ. ಇದಕ್ಕೆ ಭಾರತೀಯ ಚಿತ್ರರಂಗ ಮಾತ್ರವಲ್ಲ, ಹಾಲಿವುಡ್ ಕೂಡ ಹೊರತಲ್ಲ ಎನ್ನುವುದು ಅವರ ಅಭಿಪ್ರಾಯ.

ನಟನೆಯಲ್ಲಿ ಇಷ್ಟು ಬಿಜಿಯಾಗಿದ್ದರೂ ಅವರು ಹೊಸ ಹೊಸ ಹವ್ಯಾಸಗಳನ್ನು ರೂಢಿಸಿಕೊಳ್ಳುತ್ತಿದ್ದಾರಂತೆ. ಇತ್ತೀಚೆಗೆ ಅವರ ದೃಷ್ಟಿ ಚಿತ್ರಕಲೆಯತ್ತ ಹೊರಳಿದೆ. ಜೊತೆಗೆ ದೇಹಾರೋಗ್ಯ ಕಾಪಾಡಿಕೊಳ್ಳಲು ಈಜು, ಯೋಗ ಮತ್ತು ಧ್ಯಾನದ ಮೊರೆಹೋಗಿದ್ದಾರೆ. ಪ್ರವಾಸಿ ತಾಣಗಳಲ್ಲಿ ಅಲೆಯುವುದು ಅಚ್ಚುಮೆಚ್ಚು.

ಶ್ರೀಯಾ ಸಮಾಜಮುಖಿ ಕಾರ್ಯಗಳೂ ರಹಸ್ಯವೇನಲ್ಲ. ನಟನೆಯಷ್ಟೇ ಪ್ರಾಮುಖ್ಯ ಸಮಾಜ ಸೇವೆಗೆ. ಅದು ಬಾಲ್ಯದಿಂದಲೂ ಬಂದ ಗುಣ. ಚಿಕ್ಕಂದಿನಲ್ಲೇ ಅಂಧ ವಿದ್ಯಾರ್ಥಿಗಳ ಶಾಲೆಗೆ ಸಹಾಯ ಮಾಡುತ್ತಿದ್ದ ಅವರು ಈಗ ಅಂಧರಿಗಾಗಿ ಎನ್ಜಿಓ ಒಂದರ ಮುಖಾಂತರ ಸಹಾಯಹಸ್ತ ಚಾಚಿದ್ದಾರೆ.

ಸಮಾಜದ ಯಾವ ವಲಯದಲ್ಲಿಯೂ ಅಂಧರಿಗೆ ಉದ್ಯೋಗ ಲಭಿಸುತ್ತಿಲ್ಲ ಎಂಬ ಬೇಸರ ಅವರದು. ಆರು ಜನ ಅಂಧರಿಗಾಗಿ `ಸ್ಪಾ' ಕೇಂದ್ರ ತೆರೆದು ಸ್ವ ಉದ್ಯೋಗದ ಮೂಲಕ ಸ್ವಾವಲಂಬಿಗಳಾಗಲು ನೆರವಾಗಿದ್ದಾರೆ.

ಬೆಂಗಳೂರು ಅವರ ನೆಚ್ಚಿನ ತಾಣಗಳಲ್ಲೊಂದು. ಅವರ ಅನೇಕ ಸಂಬಂಧಿಕರು ಬೆಂಗಳೂರಿನಲ್ಲಿದ್ದಾರೆ. ಇಲ್ಲಿನ ವಾತಾವರಣ ಹಿತಕರ, ಜನರೂ ಸ್ನೇಹಪರರು ಎನ್ನುವುದು ಅವರ ಅನುಭವ. ಸಾಧಿಸಬೇಕು ಎಂದು ಅಂದುಕೊಂಡಿರುವ ಗುರಿಗಳು ಸಾಕಷ್ಟಿವೆ. ಅವುಗಳ ಎತ್ತರಕ್ಕೆ ಆ `ಚಂದ್ರ'ನೇ ಮಿತಿ ಎಂದು ಮಾತಿಗೆ ವಿರಾಮ ನೀಡಿದರು ಶ್ರೀಯಾ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.