ಬೀದರ್: ರಾತ್ರಿ ಸಮಯ ವಿದ್ಯುತ್ ದೀಪಗಳಿಂದ ಕಂಗೊಳಿಸುವಂತೆ ನಿರ್ಮಿಸಲಾಗಿರುವ ಗುರುನಾನಕ ಝೀರಾದ ನೂತನ ಮುಖ್ಯದ್ವಾರದ ಉದ್ಘಾಟನೆ ಶನಿವಾರ (ಸೆಪ್ಟೆಂಬರ್ 17) ನಡೆಯಲಿದೆ.

ನಗರದ ಗುರುದ್ವಾರಕ್ಕೆ ಹೋಗುವ ರಸ್ತೆಯಲ್ಲಿ ಮುಂಚೆ ಇದ್ದ ಮುಖ್ಯದ್ವಾರದ ಸ್ಥಳದಲ್ಲಿಯೇ ನವೀನ ಮಾದರಿಯ ಅತ್ಯಾಕರ್ಷಕ ಮುಖ್ಯದ್ವಾರ ನಿರ್ಮಿಸಲಾಗಿದೆ. ಇದರ ನಿರ್ಮಾಣಕ್ಕೆ ಅಂದಾಜು 40 ಲಕ್ಷ ರೂಪಾಯಿ ವೆಚ್ಚ ತಗುಲಿದೆ. ನಾಂದೇಡ್ನಿಂದ ಕರೆಸಿಕೊಳ್ಳಲಾಗಿರುವ ಕೆಲಸಗಾರರ ಏಳು ತಿಂಗಳ ನಿರಂತರ ಶ್ರಮದಿಂದಾಗಿ ಮುಖ್ಯದ್ವಾರ ಸಿದ್ಧಗೊಂಡಿದೆ.

ಇಂಥ ಮಾದರಿಯ ಮುಖ್ಯದ್ವಾರ ಎಲ್ಲೂ ಇಲ್ಲ. ಇದು ಹೊಸ ಮಾದರಿಯಾಗಿದೆ. ನಾಂದೇಡ್ನ ಲಂಗರಸಾಬ್ ಗುರುದ್ವಾರದ ಮುಖ್ಯಸ್ಥ ಸಂತ ಬಾಬಾ ಬಲವಿಂದರ ಸಿಂಗ್ ಇದನ್ನು ವಿನ್ಯಾಸಗೊಳಿಸಿದ್ದಾರೆ ಎಂದು ತಿಳಿಸುತ್ತಾರೆ ಗುರುದ್ವಾರ ಪ್ರಬಂಧಕ ಕಮೀಟಿಯ ಸದಸ್ಯ ಮನಪ್ರಿತ್ಸಿಂಗ್(ಬಂಟಿ) ಖನೂಜಾ.

ಮುಖ್ಯದ್ವಾರದ ಮೇಲೆ ಭಾವೈಕ್ಯದ ಸಂದೇಶ ಬರೆಯಲಾಗಿದೆ. ಅಲ್ಲದೇ ಬಗೆ ಬಗೆಯ ವಿದ್ಯುತ್ ದೀಪಗಳನ್ನು ಅಳವಡಿಸಿದ್ದರಿಂದ ರಾತ್ರಿ ಹೊತ್ತು ಬಹು ಸುಂದರವಾಗಿ ಕಾಣಲಿದೆ ಎಂದು ಹೇಳುತ್ತಾರೆ.

ಗುರುತಾ ಗದ್ದಿಯ ಸಂದರ್ಭದಲ್ಲಿ ಹೆಚ್ಚುವರಿ ಕೇಂದ್ರ ಅನುದಾನದ ಅಡಿ ಮುಖ್ಯದ್ವಾರಕ್ಕೆ 10 ಲಕ್ಷ ರೂಪಾಯಿ ಅನುದಾನ ಮಂಜೂರು ಮಾಡಲಾಗಿತ್ತು. ಆಗ ಮುಖ್ಯದ್ವಾರದ ಅಂದಾಜು ವೆಚ್ಚ ಕೂಡ 10 ಲಕ್ಷ ರೂಪಾಯಿಯೇ ಆಗಿತ್ತು. ಇದೀಗ ನಿರ್ಮಾಣಕ್ಕೆ ಒಟ್ಟು 40 ಲಕ್ಷ ರೂಪಾಯಿ ವೆಚ್ಚವಾಗಿದೆ. ಇನ್ನು 30 ಲಕ್ಷ ರೂಪಾಯಿ ಅನುದಾನ ಮಂಜೂರು ಮಾಡುವಂತೆ ಜಿಲ್ಲಾಧಿಕಾರಿಗಳಿಗೆ ಮನವಿ ಮಾಡಲಾಗಿದೆ ಎಂದು ತಿಳಿಸುತ್ತಾರೆ.

ಮುಖ್ಯದ್ವಾರದ ನಿರ್ಮಾಣ ಹಿನ್ನೆಲೆಯಲ್ಲಿ ಈ ಮಾರ್ಗದಲ್ಲಿ ಸಂಚಾರ ನಿರ್ಬಂಧಿಸಲಾಗಿತ್ತು. ಶನಿವಾರ ಮಧ್ಯಾಹ್ನ 12ಕ್ಕೆ ಜಿಲ್ಲಾ ಉಸ್ತುವಾರಿ ರೇವುನಾಯಕ್ ಬೆಳಮಗಿ ಮುಖ್ಯದ್ವಾರವನ್ನು ಉದ್ಘಾಟಿಸಲಿದ್ದು, ಈ ಮಾರ್ಗದಲ್ಲಿ ಸಂಚಾರ ಕೂಡ ಆರಂಭವಾಗಲಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.