ಶನಿವಾರ, ಮೇ 28, 2022
26 °C

ಗುರುವಾರ, 24-2-1961

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ವಿಶಾಲ ತತ್ವಗಳ ಬಗ್ಗೆ ನಾಯಕರಲ್ಲಿ ಒಮ್ಮತ

ಬೆಂಗಳೂರು, ಫೆ. 23 - ಮೈಸೂರು ಕಾಂಗ್ರೆಸ್ಸಿನ ಬಿಕ್ಕಟ್ಟನ್ನು ಪರಿಹರಿಸಲು ಎಂ.ಪಿ.ಸಿ.ಸಿ. ಅಧ್ಯಕ್ಷ ಶ್ರೀ ಎಸ್. ನಿಜಲಿಂಗಪ್ಪ, ಮುಖ್ಯಮಂತ್ರಿ ಶ್ರೀ ಬಿ. ಡಿ. ಜತ್ತಿಯವರು ನಡೆಸುತ್ತಿರುವ ಪ್ರಯತ್ನದ ಸಂಬಂಧದಲ್ಲಿ ಇಂದು ರಾತ್ರಿ ಎರಡನೇ ಬಾರಿಗೆ ಉಭಯತ್ರರ ನಡುವೆ 45 ನಿಮಿಷಗಳ ಮಾತುಕತೆ ನಡೆಯಿತು. ಅಡಕವಾಗಿರುವ ವಿಷಯಗಳಿಗೆ ಸಂಬಂಧಿಸಿದಂತೆ ವಿಶಾಲತತ್ವಗಳ ಬಗ್ಗೆ ಉಭಯ ನಾಯಕರಲ್ಲಿ ಒಮ್ಮತವಿದೆಯೆಂದೂ ಇಂದಿನ ಮಾತುಕತೆ ಮುಗಿದ ನಂತರ ತಿಳಿದು ಬಂತು.ಮುಂಬೈಗೆ ಬ್ರಿಟನ್ ರಾಜ ದಂಪತಿ ಪ್ರಯಾಣ

ಬೆಂಗಳೂರು, ಫೆ. 23 - ಇಲ್ಲಿಂದ 37 ಮೈಲಿ ದೂರದ ಸುಂದರ ಗಿರಿಧಾಮ ನಂದಿದುರ್ಗದಲ್ಲಿ ನಿಸರ್ಗದ ಸೊಬಗನ್ನು ಸವಿದು ಸುಮಾರು 38 ಗಂಟೆಗಳ ಕಾಲ ಪೂರ್ಣ ವಿಶ್ರಾಂತಿಅನುಭವಿಸಿದ ಬ್ರಿಟನ್ನಿನ ಎರಡನೆಯ ಎಲಿಜಬೆತ್ ಹಾಗೂ ಅವರ ಪತಿ ರಾಜಕುಮಾರ ಫಿಲಿಪ್ ಇಂದು ಮಧ್ಯಾಹ್ನ ವಿಮಾನದಲ್ಲಿ ಮುಂಬೈಗೆ ಪ್ರಯಾಣ ಮಾಡಿದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.