ಮಂಗಳವಾರ, ಜನವರಿ 28, 2020
24 °C

ಗುರುವಾರ, 26-1-1962

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

`ಶಾಂತಿ ಸಂವತ್ಸರವಾಗಲಿ~

ನವದೆಹಲಿ, ಜ. 25
-  ಪ್ರಸ್ತುತ ವರ್ಷವೂ ಜಗತ್ತಿನಲ್ಲಿ ಶಾಂತಿ ಸ್ಥಾಪನೆಯ ಹಾಗೂ ನಮ್ಮ ದೇಶದ ಮತ್ತು ಜನತೆಯ ಅಭಿವೃದ್ಧಿಯ ವರ್ಷವಾಗಲೆಂಬ ಆಶಯವನ್ನು ರಾಷ್ಟ್ರಪತಿ ಡಾ. ರಾಜೇಂದ್ರಪ್ರಸಾದರು ಗಣರಾಜ್ಯ ದಿನದಂದು ರಾಷ್ಟ್ರಕ್ಕಿತ್ತ ಸಂದೇಶದಲ್ಲಿ ವ್ಯಕ್ತಪಡಿಸಿದ್ದಾರೆ.`ನಮ್ಮ ಈ 13ನೆಯ ಗಣರಾಜ್ಯ ದಿನೋತ್ಸವದ ಸಂದರ್ಭದಲ್ಲಿ ನಾನು ನಮ್ಮ ಎಲ್ಲ ದೇಶಬಾಂಧವರನ್ನೂ ಹಾಗೂ ವಿದೇಶಗಳಲ್ಲಿರುವ ಭಾರತೀಯರನ್ನೂ ಅಭಿನಂದಿಸುತ್ತೇನೆ. ಬರುವ ವರ್ಷದಲ್ಲಿ ಅವರೆಲ್ಲರಿಗೂ ಸುಖ ಸಂತೋಷಗಳು ಲಭಿಸಲೆಂದು ಹಾರೈಸುತ್ತೇನೆ~ ಎಂದು ರಾಷ್ಟ್ರಪತಿ ತಿಳಿಸಿದ್ದಾರೆ.ಕಾಂಗ್ರೆಸ್ಸಿಗೆ ಪ್ರಥಮ ಜಯಗಳು

ಬೆಂಗಳೂರು, ಜ. 25
- ಹುಣಸೂರು ಕ್ಷೇತ್ರದಿಂದ ಶ್ರೀ ಡಿ. ದೇವರಾಜೇ ಅರಸ್, ಬಿಜಾಪುರ ಜಿಲ್ಲೆಯ ತಾಳಿಕೋಟೆ ಕ್ಷೇತ್ರದಿಂದ ಶ್ರೀ ಜಿ. ಎನ್. ಪಾಟೀಲ್ ಅವರುಗಳು ಅವಿರೋಧವಾಗಿ ಆಯ್ಕೆಗೊಂಡು 1962ರ ಚುನಾವಣೆಗಳಲ್ಲಿ ರಾಜ್ಯದಲ್ಲಿ ಕಾಂಗ್ರೆಸ್ಸಿಗೆ ಪ್ರಥಮ ಎರಡು ಜಯಗಳನ್ನು ಗಳಿಸಿಕೊಟ್ಟಿದ್ದಾರೆ.

ಪ್ರತಿಕ್ರಿಯಿಸಿ (+)