`ವಿಶ್ವಸಂಸ್ಥೆ ನಿರ್ಣಯಗಳನ್ನು ಪಾಲಿಸದ ತಪ್ಪು ಪಾಕಿಸ್ತಾನದ್ದು~

ನವದೆಹಲಿ, ಏ. 25 - `ಕಾಶ್ಮೀರದಲ್ಲಿ ಪಾಕಿಸ್ತಾನದ ಆಕ್ರಮಣವನ್ನು ಕೊನೆಗಾಣಿಸಲು ಬಲ ಪ್ರಯೋಗ ಮಾಡದೆ ಭಾರತ ಸಹನೆ, ತಾಳ್ಮೆಯಿಂದಿದೆ. ಆದರೆ ಪಾಕಿಸ್ತಾನವೇ ಆಕ್ರಮಣ ಮುಂದುವರಿಸಿ, ಭಾರತದ ಪ್ರದೇಶಗಳನ್ನು ಪುನಃ ಆಕ್ರಮಿಸಲು ಅವಕಾಶ ಕೊಡುವುದಿಲ್ಲ~ ಎಂದು ಭಾರತ ಪಾಕಿಸ್ತಾನಕ್ಕೆ ಮತ್ತೆ ಎಚ್ಚರಿಕೆ ನೀಡಿದೆ.

`ಕಾಶ್ಮೀರ ಸಂಬಂಧದಲ್ಲಿ ಭಾರತ ವಿಶ್ವಸಂಸ್ಥೆಯ ನಿರ್ಣಯಗಳನ್ನು ಗೌರವಿಸಿಲ್ಲ~ ಎಂಬ ಪಾಕ್ ಅಪಪ್ರಚಾರಕ್ಕೆ ಉತ್ತರ ರೂಪವಾಗಿ ಭಾರತ ಸರ್ಕಾರ `ಕಾಶ್ಮೀರ ಪರಿಸ್ಥಿತಿಯ ಮುಖ್ಯಾಂಶಗಳು~ ಎಂಬ ಕಿರು ಹೊತ್ತಿಗೆಯನ್ನು ಪ್ರಕಟಿಸಿದೆ.

ಭಾರತಕ್ಕೆ ಚೀಣಾದ ಪ್ರತಿಭಟನೆ

ಪೀಕಿಂಗ್, ಏ. 25 - ಚೀಣಾದ ಇನ್ನಷ್ಟು ಪ್ರದೇಶದಲ್ಲಿ ಭಾರತ ದುರಾಕ್ರಮಣ ನಡೆಸಿದೆಯೆಂದು ಪ್ರಕಟಿಸಿರುವ ಪತ್ರದಲ್ಲಿ ಭಾರತದ `ಈ ಕ್ರಮ~ದ ವಿರುದ್ಧ ಚೀಣಾ ಉಗ್ರವಾಗಿ ಪ್ರತಿಭಟಿಸಿದೆಯೆಂದು ನವ ಚೀಣಾ ವಾರ್ತಾ ಸಂಸ್ಥೆ ತಿಳಿಸಿದೆ.
ಈ ಪತ್ರದಲ್ಲಿ `ಭಾರತದ ಪಡೆಗಳು ಪದೇ ಪದೇ ಭಾರತ - ಚೀಣ ಪಶ್ಚಿಮ ಗಡಿಯ ಮೇಲೆ ಆಕ್ರಮಣ ನಡೆಸುತ್ತಿದೆ. ಭಾರತ ಇಂತಹ ಅತಿಕ್ರಮಣ ಗಡಿ ಉಲ್ಲಂಘನೆ~ ಎಂಬುದಾಗಿಯೂ ಚೀಣ ತನ್ನ ಪ್ರತಿಭಟನಾ ಪತ್ರದಲ್ಲಿ ಭಾರತಕ್ಕೆ ಸೂಚಿಸಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.