ಚಿತ್ತಗಾಂಗ್ (ಪಿಟಿಐ): ಭಾರತ ಹಾಗೂ ವೆಸ್ಟ್ ಇಂಡೀಸ್ ವಿರುದ್ಧ ಆಘಾತ ಅನುಭವಿಸಿದ ಬಾಂಗ್ಲಾದೇಶವು ಸಂಕಷ್ಟದಲ್ಲಿದೆ. ಅದು ವಿಶ್ವಕಪ್ ‘ಬಿ’ ಗುಂಪಿನ ಲೀಗ್ ಪಟ್ಟಿಯಲ್ಲಿ ಸ್ಥಿತಿ ಸುಧಾರಿಸಿಕೊಳ್ಳಬೇಕು. ಆ ನಿಟ್ಟಿನಲ್ಲಿ ಇಂಗ್ಲೆಂಡ್ ವಿರುದ್ಧ ಶುಕ್ರವಾರ ಇಲ್ಲಿ ನಡೆಯಲಿರುವ ಪಂದ್ಯ ಮಹತ್ವದ್ದಾಗಿದೆ.

ವಿಂಡೀಸ್ ಎದುರು ಸೋತ ನಂತರ ದೇಶದ ಕ್ರಿಕೆಟ್ ಪ್ರೇಮಿಗಳ ಕೆಂಗಣ್ಣಿಗೆ ಗುರಿಯಾಗಿರುವ ಬಾಂಗ್ಲಾ ತಂಡದವರು ಅಚ್ಚರಿಯ ವಿಜಯವೊಂದನ್ನು ಎದುರು ನೋಡುತ್ತಿದ್ದಾರೆ.ಗಾಯಾಳುಗಳ ಸಮಸ್ಯೆ ಎದುರಿಸಿರುವ ಇಂಗ್ಲೆಂಡ್ ವಿರುದ್ಧ ಅನಿರೀಕ್ಷಿತ ಫಲಿತಾಂಶ ಹೊರಹೊಮ್ಮಿಸುವುದು ಶಕೀಬ್ ಅಲ್ ಹಸನ್ ನಾಯಕತ್ವದ ಪಡೆಯ ಹುನ್ನಾರ.

ಕೆವಿನ್ ಪೀಟರ್ಸನ್ ಹಾಗೂ ಸ್ಟುವರ್ಟ್ ಬ್ರಾಡ್ ಅವರಂಥ ಪ್ರಭಾವಿ ಆಟಗಾರರ ಅನುಪಸ್ಥಿತಿಯಲ್ಲಿ ಆಡುವ ಹನ್ನೊಂದು ಆಟಗಾರರ ಪಟ್ಟಿಯನ್ನು ಹೊಂದಿಸಲು ಕಷ್ಟಪಡುತ್ತಿರುವ ಇಂಗ್ಲೆಂಡ್ ಹೇಗೆ ಸಮಸ್ಯೆಯನ್ನು ನಿವಾರಿಸಿಕೊಳ್ಳುತ್ತದೆ ಎನ್ನುವುದು ಆಸಕ್ತಿ ಕೆರಳಿಸಿರುವ ಸವಾಲು. ಎಯೋನ್ ಮಾರ್ಗನ್ ಹಾಗೂ ಕ್ರಿಸ್ ಟ್ರೆಮ್ಲೆಟ್ ತಂಡಕ್ಕೆ ಬಂದಿದ್ದಾರೆ. ಆದರೆ ಅವರು ಕೆವಿನ್ ಮತ್ತು ಸ್ಟುವರ್ಟ್ ಸ್ಥಾನ ತುಂಬುವುದು ಕಷ್ಟ ಎನ್ನುವುದು ಸ್ಪಷ್ಟ.

ಇಂಥ ಸಂಕಷ್ಟದ ನಡುವೆಯೂ ಆ್ಯಂಡ್ರ್ಯೂ ಸ್ಟ್ರಾಸ್ ಬಳಗದವರು ಮತ್ತೊಂದು ವಿಜಯದ ನಿರೀಕ್ಷೆಯಲ್ಲಿದ್ದಾರೆ. ದಕ್ಷಿಣ ಆಫ್ರಿಕಾ ವಿರುದ್ಧದ ಪ್ರಬಲ ಪೈಪೋಟಿ ನಡೆಸಿ ಗೆದ್ದ ನಂತರ ಇಂಗ್ಲೆಂಡ್ ತಂಡದಲ್ಲಿ ಹೊಸ ಉತ್ಸಾಹ ಕಾಣಿಸಿದೆ.

ಇಂಗ್ಲೆಂಡ್
ಆ್ಯಂಡ್ರ್ಯೂ ಸ್ಟ್ರಾಸ್ (ನಾಯಕ), ಎಯೋನ್ ಮಾರ್ಗನ್, ಜೋನಾಥನ್ ಟ್ರಾಟ್, ಇಯಾನ್ ಬೆಲ್, ಪಾಲ್ ಕಾಲಿಂಗ್ವುಡ್, ರವಿ ಬೋಪರಾ, ಮ್ಯಾಟ್ ಪ್ರಿಯೋರ್, ಟಿಮ್ ಬ್ರೆಸ್ನನ್, ಕ್ರಿಸ್ ಟ್ರೆಮ್ಲೆಟ್, ಗ್ರೇಮ್ ಸ್ವಾನ್, ಜೇಮ್ಸ್ ಆ್ಯಂಡರ್ಸನ್, ಮೈಕಲ್ ಯಾರ್ಡಿ, ಅಜ್ಮಲ್ ಶಹ್ಜಾದ್, ಜೇಮ್ಸ್ ಟ್ರೆಡ್ವೆಲ್, ಲುಕ್ ರೈಟ್ ಮತ್ತು ಮೈಕಲ್ ಯಾರ್ಡಿ.

ಬಾಂಗ್ಲಾದೇಶ
ಶಕೀಬ್ ಅಲ್ ಹಸನ್ (ನಾಯಕ), ತಮೀಮ್ ಇಕ್ಬಾಲ್, ಇಮ್ರುಲ್ ಕಯೇಸ್, ಜುನೈದ್ ಸಿದ್ದಿಕ್, ಶಹ್ರಿಯಾರ್ ನಫೀಸ್, ರಕೀಬುಲ್ ಹಸನ್, ಮೊಹಮ್ಮದ್ ಅಶ್ರಫುಲ್, ಮುಶ್ಫಿಕುರ್ ರಹೀಮ್, ನಯೀಮ್ ಇಸ್ಲಾಮ್, ಮೊಹಮ್ಮದ್ ಮಹ್ಮದುಲ್ಲಾ, ಅಬ್ದುರ್ ರಜಾಕ್, ರುಬೆಲ್ ಹುಸೇನ್, ಶಫಿವುಲ್ ಇಸ್ಲಾಮ್, ನಜ್ಮುಲ್ ಹುಸೇನ್ ಮತ್ತು ಸುಹ್ರಾವಾಡಿ ಶುವೊ.

ಅಂಪೈರ್ಗಳು: ಇಯಾನ್ ಗೌಲ್ಡ್ (ಇಂಗ್ಲೆಂಡ್) ಮತ್ತು ಸೈಮನ್ ಟಫೆಲ್ (ಆಸ್ಟ್ರೇಲಿಯಾ); ಮೂರನೇ ಅಂಪೈರ್: ಬಿಲ್ಲಿ ಡಾಕ್ಟ್ರೋವ್ (ವೆಸ್ಟ್ ಇಂಡೀಸ್).
ಮ್ಯಾಚ್ ರೆಫರಿ: ರಂಜನ್ ಮುದುಗಲೆ (ಶ್ರೀಲಂಕಾ).
ಪಂದ್ಯದ ವೇಳೆ: ಮಧ್ಯಾಹ್ನ 2.30ರಿಂದ ಸಂಜೆ 6.00; 6.45ರಿಂದ ಪಂದ್ಯ ಮುಗಿಯುವವರೆಗೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.