ಭಾನುವಾರ, ಜೂನ್ 13, 2021
22 °C

ಗೊಲ್ಲರ ಹಟ್ಟಿಗಳಲ್ಲಿ ಕಾಣದ ವಿಕಾಸದ ಬೆಳಕು

ಸಚ್ಚಿದಾನಂದ ಕುರಗುಂದ / ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಚಿತ್ರದುರ್ಗ: ಗೊಲ್ಲರ ಹಟ್ಟಿಗಳ ಅಭಿವೃದ್ಧಿ ಎಂದು? ಸರ್ಕಾರ ರೂಪಿಸಿದ್ದ ಪ್ಯಾಕೇಜ್ ಏನಾಯಿತು?

ಪ್ರತಿಯೊಂದು ಗೊಲ್ಲರಹಟ್ಟಿ ಅಭಿವೃದ್ಧಿಗೆ ರೂ. 40 ಲಕ್ಷ ಪ್ಯಾಕೇಜ್ ರೂಪಿಸಿ ಯೋಜನೆಯೊಂದನ್ನು 2009ರಲ್ಲಿ ಪ್ರಕಟಿಸಲಾಗಿತ್ತು.

 

ಈ ಯೋಜನೆ ಅಡಿಯಲ್ಲಿ ಪ್ರತಿ ಗೊಲ್ಲರಹಟ್ಟಿಯಲ್ಲಿ 25ರಿಂದ 40 ಮನೆಗಳು ಅಥವಾ ಅಗತ್ಯಕ್ಕೆ ತಕ್ಕಂತೆ ಮನೆಗಳನ್ನು ನಿರ್ಮಿಸಲು ರೂ. 10 ಲಕ್ಷ, ವಿದ್ಯುದೀಕರಣಕ್ಕೆ 1 ಲಕ್ಷ, ಮಹಿಳಾ ಭವನಕ್ಕೆ ರೂ. 5ಲಕ್ಷ, ಸಮುದಾಯ ಭವನಕ್ಕೆ ರೂ. 8 ಲಕ್ಷ, ರಸ್ತೆ ನಿರ್ಮಾಣಕ್ಕೆ ರೂ.10 ಲಕ್ಷ, ಕುಡಿಯುವ ನೀರಿಗೆ ರೂ. 5ಲಕ್ಷ, ಸಮುದಾಯ ಶೌಚಾಲಯಕ್ಕೆ ರೂ.1ಲಕ್ಷ ನಿಗದಿಪಡಿಸಲಾಗಿತ್ತು.ಆರಂಭದಲ್ಲಿ ಮಹಿಳಾ ಭವನಕ್ಕೆ ಕೃಷ್ಣ ಕುಟೀರ ಎಂದು ನಾಮಕರಣ ಮಾಡಲಾಗಿತ್ತು. ನಂತರದ ದಿನಗಳಲ್ಲಿ ಸರ್ಕಾರ ಈ ಹೆಸರನ್ನು ಬದಲಾಯಿಸಿತು.`ಗೊಲ್ಲರಹಟ್ಟಿಗಳಲ್ಲಿನ ಹೆಣ್ಣು ಮಕ್ಕಳು ಋತಿಮತಿಯಾದಾಗ, ಹೆರಿಗೆಯಾದಾಗ ಮತ್ತು ಮಾಸಿಕ ಋತುಚಕ್ರದ ಸಂದರ್ಭದಲ್ಲಿ ತಾವು ವಾಸಿಸುವ ಹಟ್ಟಿಗಳ ಹೊರಗೆ ಒಂದು ಚಿಕ್ಕ ಗುಡಿಸಲನ್ನು ಕಟ್ಟಿಕೊಂಡು ಅಲ್ಲಿ ವಾಸಿಸುತ್ತಾರೆ.ಈ ರೀತಿ ನಿರ್ಮಿಸುವ ಗುಡಿಸಲುಗಳಲ್ಲಿ ಕನಿಷ್ಠ ಸ್ಥಳಾವಕಾಶ ಹಾಗೂ ಕನಿಷ್ಠ ಆರೋಗ್ಯ ಸೌಲಭ್ಯಗಳು ಇರುವುದಿಲ್ಲ. ಆದ್ದರಿಂದ ಇಂತಹ ಸಂದರ್ಭಗಳಲ್ಲಿ ಹಿಂದುಳಿದ ಸಮುದಾಯದ ಸ್ತ್ರೀಯರಿಗೆ ಸಾಕಷ್ಟು ಸ್ಥಳಾವಕಾಶವಿರುವ ಹಾಗೂ ಆರೋಗ್ಯ ಸೌಲಭ್ಯಗಳನ್ನೊಳಗೊಂಡ ಮಹಿಳಾ ಭವನಗಳನ್ನು ನಿರ್ಮಿಸುವುದು ಸೂಕ್ತವಾಗಿದೆ. ಇದರಿಂದ ಈ ಜನಾಂಗದ `ವಿಶಿಷ್ಟ ಸಾಮಾಜಿಕ ಪದ್ಧತಿ~ಯನ್ನು ಉಳಿಸುವ ಜತೆಗೆ ಅವರ ಆರೋಗ್ಯವನ್ನು ಕಾಪಾಡಬಹುದಾಗಿದೆ.ಈ ದೃಷ್ಟಿಯಿಂದ ರಾಜ್ಯದಲ್ಲಿರುವ ಗೊಲ್ಲರಹಟ್ಟಿಗಳಲ್ಲಿ ಮಹಿಳಾ ಭವನಗಳನ್ನು ನಿರ್ಮಿಸುವುದು ಅತ್ಯಂತ ಸೂಕ್ತವಾಗಿದೆ~ ಎಂದು ಸಮಾಜ ಕಲ್ಯಾಣ ಇಲಾಖೆ ಆದೇಶ ಹೊರಡಿಸಿತ್ತು.ಚಿತ್ರದುರ್ಗ ಜಿಲ್ಲೆಯೊಂದರಲ್ಲಿ ತಲಾ ರೂ. 5 ಲಕ್ಷ ವೆಚ್ಚದಲ್ಲಿ 16 ಮಹಿಳಾ ಭವನ ನಿರ್ಮಿಸಲು ಉದ್ದೇಶಿಸಲಾಗಿದ್ದು, ಈಗಾಗಲೇ 13 ಭವನಗಳು ಮುಕ್ತಾಯವಾಗಿವೆ. ಆದರೆ, ಈ ಮಹಿಳಾ ಭವನಗಳನ್ನು ನಿರ್ಮಿಸುವ ಬದಲಾಗಿ ಗೊಲ್ಲರಹಟ್ಟಿಗಳಲ್ಲಿ ಅರಿವು ಮೂಡಿಸಿ ಪರಿವರ್ತನೆ ತರಬೇಕಾಗಿತ್ತು ಎಂದು ಗೊಲ್ಲ ಸಮಾಜದ ಮುಖಂಡ  ಸಿ. ಮಹಾಲಿಂಗಪ್ಪ ಹೇಳುತ್ತಾರೆ.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.