ಶುಕ್ರವಾರ, ಏಪ್ರಿಲ್ 16, 2021
31 °C

ಗೋಡೆ ಹಿಂದಿನ ವಿದ್ಯಮಾನ ತಿಳಿಸುವ ತಂತ್ರಜ್ಞಾನ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ವಾಷಿಂಗ್ಟನ್ (ಐಎಎನ್‌ಎಸ್): ಕೊಠಡಿಯಲ್ಲಿನ ನಾಲ್ಕು ಗೋಡೆಗಳ ನಡುವೆ ನಡೆಯುವ ವಿದ್ಯಮಾನವನ್ನು ಹೊರಗಿನಿಂದಲೇ ನೋಡಬಹುದಾದ `ಲೇಸರ್ ತಂತ್ರಜ್ಞಾನ~ವನ್ನು ಮಸಾಚುಸೆಟ್ಸ್  ತಂತ್ರಜ್ಞಾನ ಸಂಸ್ಥೆಯ (ಎಂಐಟಿ) ವಿಜ್ಞಾನಿಗಳು ಅಭಿವೃದ್ಧಿಪಡಿಸಿದ್ದಾರೆ.ಬೆಳಕಿನ ಕಿರಣಗಳು ಹಾಗೂ ವಿದ್ಯುತ್ಕಾಂತೀಯ ಕಿರಣಗಳಲ್ಲಿ ಕಾಣುವ `ಫೋಟಾನ್~ಗಳು ಯದ್ವಾ ತದ್ವಾ ಓಡಾಡಿ ಕೋಣೆಯ ಮೂಲೆ, ಮೂಲೆಗೂ ವ್ಯಾಪಿಸುತ್ತವೆ. `ಫೋಟಾನ್~ಗಳ ನಡವಳಿಕೆ ಅಭ್ಯಸಿಸಿ, ಅವುಗಳಿಗೆ `ಆಪ್ಟಿಕ್~ ತಂತ್ರ ಅಳವಡಿಸಿ, ಈ ಲೇಸರ್ ತಂತ್ರಜ್ಞಾನ ಅಭಿವೃದ್ಧಿಪಡಿಸಲಾಗಿದೆ.`ಲೇಸರ್ ತಂತ್ರಜ್ಞಾನ ಕೇವಲ `ಗೋಡೆ ಹಿಂದಿನ~ ಮಾಹಿತಿ ನೀಡುವುದಕ್ಕಷ್ಟೇ ಅಲ್ಲ, ಭೂಕಂಪ, ಸುನಾಮಿ, ಬೆಂಕಿ ಅನಾಹುತದಂತಹ ದುರಂತದ ಸಂದರ್ಭದಲ್ಲಿ ಕಟ್ಟಡದೊಳಗೆ ಸಿಕ್ಕಿಬಿದ್ದವರನ್ನು ರಕ್ಷಿಸಲು ನೆರವಾಗುತ್ತದೆ~ ಎಂದು ಎಂಐಟಿ ಸಂಶೋಧಕರು ಹೇಳಿದ್ದಾರೆ.`ಉದಾಹರಣೆಗೆ, ಮನೆಯೊಂದು ಕುಸಿದಿದೆ ಎಂದುಕೊಳ್ಳಿ. ಮನೆಯ ಅವಶೇಷಗಳಡಿ ವ್ಯಕ್ತಿಗಳು ಸಿಕ್ಕಿಬಿದ್ದಿದ್ದಾರೆ. ಹೊರಗಿನವರಿಗೆ ಒಳಗಿರುವ ವ್ಯಕ್ತಿಗಳು ಕಾಣಿಸುತ್ತಿಲ್ಲ. ಇಂಥ ಸಂದರ್ಭದಲ್ಲಿ  ಈ ಲೇಸರ್ ತಂತ್ರಜ್ಞಾನ ಬಳಸಬಹುದಾಗಿದೆ~ ಎಂದು ಈ ಸಂಶೋಧನೆಯ ನೇತೃತ್ವ ವಹಿಸಿರುವ ಎಂಐಟಿಯ ವಿದ್ಯಾರ್ಥಿ ಗುಪ್ತಾ ಆಪ್ಟಿಕ್ಸ್ ಎಕ್ಸ್‌ಪ್ರೆಸ್ ನಿಯತಕಾಲಿಕದಲ್ಲಿ ಪ್ರಕಟಿಸಿರುವ ವರದಿಯಲ್ಲಿ ವಿವರಿಸಿದ್ದಾರೆ. ಮುಂದಿನ ಐದರಿಂದ ಹತ್ತು ವರ್ಷಗಳಲ್ಲಿ ಈ ತಂತ್ರಜ್ಞಾನವನ್ನು ವಾಣಿಜ್ಯ ಉದ್ದೇಶಕ್ಕೆ ಲಭ್ಯವಾಗಲಿದೆ.

 

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.